Maneka Gandhi: ಮನೇಕಾ ಗಾಂಧಿಯವರು ಮಹಿಳೆಯರ ಸೌಂದರ್ಯ ವರ್ಧನೆಗೆ ಸಲಹೆಯೊಂದನ್ನು ನೀಡಿದ್ದು, ಸದ್ಯ, ಈ ವಿಚಾರ ಎಲ್ಲೆಡೆ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ. ಕೆಲವೊಮ್ಮೆ ರಾಜಕೀಯ ಪಕ್ಷಗಳ ನಾಯಕರು, ಸಮಾಜದಲ್ಲಿ ಪ್ರತಿಷ್ಠಿತ ಹುದ್ದೆಯಲ್ಲಿದ್ದವರು ನೀಡುವ ಹೇಳಿಕೆ ಎಷ್ಟರಮಟ್ಟಿಗೆ ನಿಜ ಎಂಬುದನ್ನು ತಿಳಿಯುವುದು ಕೊಂಚ ಕಷ್ಟ ಎಂದೆನಿಸುವುದುಂಟು. ಸದ್ಯ, ಉತ್ತರ ಪ್ರದೇಶದ (Uttarpradesh)ಸುಲ್ತಾನ್ಪುರ್ ಎಂಬಲ್ಲಿ ನಡೆದ ಕಾರ್ಯಕ್ರಮದ ಸಂದರ್ಭ ಅನೇಕ ವಿಚಾರಗಳ ಬಗ್ಗೆ ಮಾಹಿತಿ ನೀಡಿದ ಮನೇಕಾ (Maneka Gandhi) ಗಾಂಧಿಯವರು ಕತ್ತೆಯ ಹಾಲಿನ ಸಾಬೂನು (Soap) ಬಳಕೆ ಮಾಡಿದರೆ ಮಹಿಳೆಯರ ದೇಹ ಸದಾ ಸುಂದರವಾಗಿರುತ್ತದೆ ಎಂಬ ಮಾಹಿತಿ ನೀಡಿದ್ದಾರೆ.
ಲಡಾಖ್ನಲ್ಲಿ ಕತ್ತೆಗಳ ಸಂಖ್ಯೆ ಕ್ಷೀಣಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸಮುದಾಯವೊಂದು ಕತ್ತೆಗಳಿಂದ ಹಾಲನ್ನು ಕರೆಯಲು ಆರಂಭಿಸಿ, ಆ ಹಾಲಿನಿಂದ ತಯಾರಿಸಿದ ಸಾಬೂನುಗಳು ಮಹಿಳೆಯ ದೇಹವನ್ನು ಸುಂದರವಾಗಿ ಇಡುವ ಹಿನ್ನೆಲೆ ಹಾಲಿನಿಂದ ಸೋಪ್ ತಯಾರು ಮಾಡಲು ಆರಂಭಿಸಿತು ಎಂಬುದಾಗಿ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇಂದು ನಾವು ಅಗಸರು ಕೂಡ ಕತ್ತೆಗಳನ್ನು ಬಳಸುವುದನ್ನು ನಿಲ್ಲಿಸಿರುವುದನ್ನು ಗಮನಿಸಿರಬಹುದು. ಕತ್ತೆಗಳ(Ass) ಸಂಖ್ಯೆ ದಿನೇ ದಿನೇ ಇಳಿಕೆಯಾಗುತ್ತಿದೆ. ಈಜಿಪ್ಟ್ನ (Egypt)ಅತ್ಯಂತ ಪ್ರಸಿದ್ಧ ರಾಣಿ ಕ್ಲಿಯೋಪಾತ್ರಾ ಕೂಡ ಕತ್ತೆಯ ಹಾಲಿನಿಂದ ಜಳಕ ಮಾಡಿ ಸೌಂದರ್ಯ (Beauty)ಹೆಚ್ಚಿಸಿಕೊಂಡಿದ್ದರು. ಕತ್ತೆ ಹಾಲಿನಿಂದ ತಯಾರಿಸಿದ ಸೋಪುಗಳಿಗೆ ದೆಹಲಿಯಲ್ಲಿ 500 ರೂ. ಬೆಲೆ ಇದ್ದು, ನಾವು ಮೇಕೆ ಹಾಲು (Goat Milk)ಮತ್ತು ಕತ್ತೆಯ ಹಾಲಿನೊಂದಿಗೆ ಸಾಬೂನು ತಯಾರಿಸಲು ಏಕೆ ಮುಂದಾಗಬಾರದು ಎಂದು ಮನೇಕಾ ಗಾಂಧಿಯವರು ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂದರ್ಭ ಅಂತ್ಯ ಸಂಸ್ಕಾರಕ್ಕೆ (Funeral)ಆಗುತ್ತಿರುವ ಖರ್ಚು ವೆಚ್ಚದ ಬಗ್ಗೆ ಕೂಡ ಬಿಜೆಪಿ ಸಂಸದೆ ಮನೇಕಾ ಗಾಂಧಿ ಅವರು ಮಾತನಾಡಿದ್ದು ಕಾಲ ಉರುಳಿದಂತೆ ಮರಗಳು ಕಣ್ಮರೆಯಾಗುತ್ತಿರುವುದರಿಂದ ಕಟ್ಟಿಗೆಯ ವೆಚ್ಚ ಕೂಡ ಹೆಚ್ಚಾಗಿ ದುಬಾರಿಯಾಗುತ್ತಿದೆ. ಅಂತ್ಯ ಸಂಸ್ಕಾರಕ್ಕೆ ಬಳಕೆ ಮಾಡುವ ಮರಕ್ಕೆ 15,000 – 20,000 ರೂ. ನೀಡಬೇಕಾಗಿದೆ. ಹೀಗಾಗಿ, ಈ ವೆಚ್ಚವನ್ನು ಕಡಿಮೆ ಮಾಡಲು ಹಸುವಿನ ಸಗಣಿಯಿಂದ(CowDung) ಬೆರಣಿಗೆ ಸುಗಂಧ ದ್ರವ್ಯವನ್ನು ಸೇರಿಸಿ ಮತ್ತು ಮೃತದೇಹವನ್ನು ಸುಡಲು ಬಳಸಬೇಕು. ಇದರಿಂದ ಶವಸಂಸ್ಕಾರದ ವೆಚ್ಚವನ್ನು ಕೇವಲ 1,500 ರೂ.ನಿಂದ 2,000 ರೂಪಾಯಿಯಲ್ಲಿ ಮಾಡಬಹುದು. ಹೀಗಾಗಿ,ಬೆರಣಿ ಮಾರಾಟದಿಂದ ನೀವು ಲಕ್ಷ ಲಕ್ಷ ಆದಾಯ ಪಡೆಯಬಹುದು. ಹೀಗಾಗಿಯೇ ಅಂತ್ಯ ಸಂಸ್ಕಾರದ ವೆಚ್ಚ ದುಪ್ಪಟ್ಟಾಗಿದೆ ಎಂದು ಮನೇಕಾ ಗಾಂಧಿಯವರು ತಿಳಿಸಿದ್ದಾರೆ.
