Home » Haveri: ಸಚಿವ ಝಮೀರ್‌ ಅಹ್ಮದ್‌ ಕಾರಿಗೆ ಕಲ್ಲು ತೂರಾಟ

Haveri: ಸಚಿವ ಝಮೀರ್‌ ಅಹ್ಮದ್‌ ಕಾರಿಗೆ ಕಲ್ಲು ತೂರಾಟ

0 comments

Haveri: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಮುಖಂಡರ ಮಧ್ಯೆ ಮನಸ್ತಾಪ ಉಂಟಾಗಿದ್ದು, ಹಾಗಾಗಿ ಸಚಿವ ಝಮೀರ್‌ ಅಹ್ಮದ್‌ ಖಾನ್‌ ಅವರ ಕಾರಿನ ಮೇಲೆ ಕೆಲವೊಂದು ಕಾರ್ಯಕರ್ತರು ಹುಲಗೂರಿನಲ್ಲಿ ಕಲ್ಲು ತೂರಾಟ ಮಾಡಿರುವ ಕುರಿತು ವರದಿಯಾಗಿದೆ.

ಸೈಯದ್‌ ಅಜ್ಜಂಪೀರ್‌ ಖಾದ್ತಿ ಅವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದು, ಇವರ ಮನವೊಲಿಸಲೆಂದು ಹೋದ ಝಮೀರ್‌ ಅಹ್ಮದ್‌ ಅವರ ಕಾರಿಗೆ ಸೈಯದ್‌ ಖಾದ್ತಿ ಪರ ಬೆಂಬಲಿಗರು ಕಾರಿನ ಮೇಲೆ ಏಕಾಏಕಿ ಕಲ್ಲು ತೂರಾಟ ಮಾಡಿದ್ದಾರೆ.

ಅಭ್ಯರ್ಥಿ ಯಾಸೀರ್‌ ಅಹ್ಮದ್‌ಖಾನ್‌ ಅವರ ಕಾರಿನಲ್ಲಿ ಹೋಗಿದ್ದ ಝಮೀರ್‌ ಅಹ್ಮದ್‌ ಅವರನ್ನು ನಂತರ ಸ್ಥಳೀಯ ಮುಖಂಡರು ಪಾರು ಮಾಡಿ ಕಳುಹಿಸಿದ್ದಾರೆ.

You may also like

Leave a Comment