Home » Vinay kulkarni: ನನ್ನನ್ನು ಸಂಪುಟದಿಂದ ಕೈಬಿಟ್ಟಿದ್ದೀರಿ, ಇದರ ಪರಿಣಾಮ ಲೋಕಸಭೆ ಚುನಾವಣೆಯಲ್ಲಿ ಅನುಭವಿಸ್ತೀರಿ!! ಸರ್ಕಾರದ ವಿರುದ್ಧ ಸ್ವಪಕ್ಷೀಯ ಶಾಸಕ ವಿನಯ್‌ ಕುಲಕರ್ಣಿ ಬಾಂಬ್‌!!

Vinay kulkarni: ನನ್ನನ್ನು ಸಂಪುಟದಿಂದ ಕೈಬಿಟ್ಟಿದ್ದೀರಿ, ಇದರ ಪರಿಣಾಮ ಲೋಕಸಭೆ ಚುನಾವಣೆಯಲ್ಲಿ ಅನುಭವಿಸ್ತೀರಿ!! ಸರ್ಕಾರದ ವಿರುದ್ಧ ಸ್ವಪಕ್ಷೀಯ ಶಾಸಕ ವಿನಯ್‌ ಕುಲಕರ್ಣಿ ಬಾಂಬ್‌!!

by ಹೊಸಕನ್ನಡ
0 comments
Vinay kulkarni

Vinay kulkarni: ರಾಜ್ಯದಲ್ಲಿ ನೂತನವಾಗಿ ಕಾಂಗ್ರೆಸ್ ಸರ್ಕಾರ(Congress Government)ರಚನೆಯಾಗಿ ತಿಂಗಳು ಕಳೆಯುತ್ತಿದೆ. ಬಹಳ ಪೈಪೋಟಿ ನಡುವೆ ಸಿಎಂ(CM) ಆಯ್ಕೆಯಾದ ವಿಚಾರ ಎಲ್ಲರಿಗೂ ತಿಳಿದೇ ಇದೆ. ಇದಲ್ಲದೆ ಅನೇಕ ಲಾಭಗಳ ನಡುವೆ 34 ಜನ ಸಚಿವರ ಆಯ್ಕೆಯೂ ಆಗಿದೆ. ಆದರೆ ಕೆಲವು ಸಚಿವ ಆಕಾಂಕ್ಷಿಗಳು ಟಿಕೆಟ್ ವಂಚಿತರಾಗಿ ಅಸಮಧಾನಿಗಳೂ ಆಗಿದ್ದಾರೆ. ಇವರಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ(Vinay kulkarni)ಕೂಡ ಒಬ್ಬರು. ಸದ್ಯ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರೋ ಇವರು ಕಾಂಗ್ರೆಸ್ ಪಕ್ಷಕ್ಕೇ ಧಮಕಿ ಹಾಕಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.

ನೂತನ ಸರ್ಕಾರದಲ್ಲಿ ಪ್ರಬಲ ಸಚಿವ ಆಕಾಂಕ್ಷಿ ಆಗಿದ್ದವರಲ್ಲಿ ಪ್ರಮುಖರೆಂದರೆ ಧಾರವಾಡ ಗ್ರಾಮೀಣ ಶಾಸಕ ವಿನಯ್ ಕುಲಕರ್ಣಿ (MLA Vinay Kulkarani) ಅವರು. ಇದೀಗ ವಿನಯ್ ಅವರು ಸಂಪುಟದಲ್ಲಿ (Cabinet) ಸ್ಥಾನ ಸಿಗದೇ ಇರೋದಕ್ಕೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು, ನನ್ನನ್ನು ಸಂಪುಟದಿಂದ ಕೈಬಿಟ್ಟಿದ್ದು ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುತ್ತೆ ಎಂದು ಸರ್ಕಾರದ ವಿರುದ್ಧ ಬಾಂಬ್‌ ಸಿಡಿಸಿದ್ದಾರೆ.

ಹೌದು, ಸಂಪುಟದಿಂದ ಕೈಬಿಟ್ಟಿದ್ದು ಲೋಕಸಭೆ ಚುನಾವಣೆ(Parliament election)ಮೇಲೆ ಪರಿಣಾಮ ಬೀರುತ್ತೆ ಎಂದು ಸರ್ಕಾರದ ವಿರುದ್ಧ ಸ್ವಪಕ್ಷೀಯ ಶಾಸಕ ವಿನಯ್‌ ಕುಲಕರ್ಣಿ ಬಾಂಬ್‌ ಸಿಡಿಸಿದ್ದಾರೆ. ಯಾರನ್ನೋ ಸಮಾಧಾನ ಮಾಡಲು ಹೋಗಿ ಈ ತರಹ ಆಗಿದೆ ಎಂದೂ ಹೇಳಿದ್ದಾರೆ. ಲಿಂಗಾಯತ ಸಮಾಜದ 37 ಶಾಸಕರು ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದು, 13 ಮಂದಿ ಪಂಚಮಸಾಲಿ ಲಿಂಗಾಯತರು ಆಯ್ಕೆಯಾಗಿದ್ದಾರೆ. ಸಮಾಜಕ್ಕಾಗಿ ಹೋರಾಟ ಮಾಡಿದವರನ್ನು ಪಕ್ಷ ಅರ್ಥ ಮಾಡಿಕೋಬೇಕಿತ್ತು. ಪಂಚಮಸಾಲಿ ಸಮಾಜ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತೆ ಎಂದೂ ವಿನಯ್ ಕುಲಕರ್ಣಿ ಹೇಳಿದ್ದಾರೆ.

ಅಲ್ಲದೆ ಸಮಾಜ ಸಹ ಇದನ್ನು ಸೂಕ್ಷ್ಮವಾಗಿ ಗಮನಿಸಿದೆ. ಲೋಕಸಭಾ ಚುನಾವಣೆ ವೇಳೆ ಇದರ ಪರಿಣಾಮ ಬೀರಿಲಿದೆ. ಯಾವುದೋ ಒತ್ತಡಕ್ಕೆ ಮಣಿದು ಈ ರೀತಿ ಮಾಡಲಾಗಿದೆ. ಖಾತೆ ಹಂಚಿಕೆಯಲ್ಲಿಯೂ ಲಿಂಗಾಯತರಿಗೆ ಅನ್ಯಾಯ ಆಗಿದೆ ಎನ್ನುವುದು ಎದ್ದು ಕಾಣುತ್ತದೆ. ಪಂಚಮಸಾಲಿ ಸಮಾಜದ‌ 13 ಜನರಲ್ಲಿ ಇಬ್ಬರಿಗೆ ಮಾತ್ರ ಸಚಿವ ಸ್ಥಾನ ಸಿಕ್ಕಿದೆ. ಇನ್ನೂ ಇಬ್ಬರು, ಮೂರು ಜನ ಸಚಿವ ಸ್ಥಾನ ಕೇಳಿದ್ವಿ. ಸಮಾಜ ಕಟ್ಟುವ ಕೆಲಸ ಮಾಡಿ ನಮ್ಮ ಸಮಾಜದ ಮತ ಕಾಂಗ್ರೆಸ್ ಹೋಗುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೀವಿ ಎಂದು ಕುಲಕರ್ಣಿ ಹೇಳಿದ್ದಾರೆ. ಸದ್ಯ ಕಾಂಗ್ರೆಸ್ ಪಾಳಯದಲ್ಲಿ ವಿನಯ್ ಕುಲಕರ್ಣಿ ಹೇಳಿಕೆ ಚರ್ಚೆಗೆ ಕಾರಣವಾಗಿದೆ.

 

ಇದನ್ನು ಓದಿ: Suicide attempt: ಸ್ಲೀಪರ್ ಕೋಚ್ ಬಸ್‌ನಲ್ಲಿ ವಿಷ ಸೇವಿಸಿ ಮಲಗಿದ ಪ್ರೇಮಿಗಳು : ಯುವತಿ ಸಾವು ,ಯುವಕ ಪಾರು 

You may also like

Leave a Comment