Home » K S Eshwarappa: ಈಶ್ವರಪ್ಪನವರನ್ನು ಹತ್ಯೆ ನಡೆಸಲು ಜೈಲಿನಿಂದಲೇ ಸ್ಕೆಚ್ ? ವಿವರ ಬಿಚ್ಚಿಟ್ಟ ಈಶ್ವರಪ್ಪ !

K S Eshwarappa: ಈಶ್ವರಪ್ಪನವರನ್ನು ಹತ್ಯೆ ನಡೆಸಲು ಜೈಲಿನಿಂದಲೇ ಸ್ಕೆಚ್ ? ವಿವರ ಬಿಚ್ಚಿಟ್ಟ ಈಶ್ವರಪ್ಪ !

by ಹೊಸಕನ್ನಡ
1 comment
K S Eshwarappa

K.S Eshwarappa : ಈ ಹಿಂದೆ ನಿತಿನ್ ಗಡ್ಕರಿ(Nithin Gadkhari) ಅವರ ಕೊಲೆಗೆ ಸ್ಕೆಚ್ ಹಾಕಿ ಸದ್ಯ ಹಿಂಡಲಗಾ ಜೈಲಿನಲ್ಲಿ ಬಂಧಿತನಾಗಿರುವ ಜೆ.ಹೆಚ್.ಪೂಜಾರ ಅಲಿಯಾಸ್ ಶಾಹಿರ್ ಇದೀಗ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ(K.S Eshwarappa) ಅವರ ಕೊಲೆಗೆ ಸ್ಕೆಚ್ ಹಾಕಿದ್ದಾನೆ ಎಂಬ ವಿಚಾರ ಬೆಳಕಿಗೆ ಬಂದಿದ್ದು, ಸ್ವತಃ ಈಶ್ವರಪ್ಪ ಅವರೇ ಈ ಸ್ಪೋಟಕ ಮಾಹಿತಿಯೊಂದನ್ನು ನೀಡಿದ್ದಾರೆ.

ಹೌದು, ಬಳ್ಳಾರಿ(Ballari) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಈಶ್ವರಪ್ಪ, ಈ ವಿಚಾರ ಕೇಳಿ ನನಗೆ ಆಘಾತವಾಯಿತು. ಇದೇ ಆರೋಪಿ ಈ ಹಿಂದೆ ನಿತಿನ್ ಗಡ್ಕರಿ ಅವರ ಕೊಲೆಗೆ ಸ್ಕೆಚ್ ಹಾಕಿದ್ದ. ನನ್ನ ಕೊಲೆಗೆ ಸ್ಕೆಚ್ ಹಾಕಲಾಗಿದೆ ಎಂಬ ವಿಷಯದ ಬಗ್ಗೆ ಆರಗ ಜ್ಞಾನೇಂದ್ರ ಅವರು ನನಗೆ ಫೋನ್ ಮಾಡಿ ತಿಳಿಸಿದರು ಎಂದು ಅವರು ಹೇಳಿದ್ದಾರೆ.

ಅಂದಹಾಗೆ ಹೆಚ್ಚಿನ ವೇದಿಕೆಗಳಲ್ಲಿ ಹಿಂದುತ್ವದ ಕುರಿತು, ಹಿಂದುತ್ವದ ಪರವಾಗಿ ಮಾತನಾಡುವ ನಿನಗೆ ಈ
ಹಿಂದೆ ಅನೇಕ ಬಾರಿ ಕೊಲೆ ಬೆದರಿಕೆ ಬಂದಿತ್ತು. ಈ ವಿಷಯ ಸದನಕ್ಕೆ ತಿಳಿಸಿದ್ದೆ. ಆಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇತ್ತು. ಆಗ ಅವರು ನನಗೆ ಭದ್ರತೆ ನೀಡಿದ್ದರು. ಆದರೆ ಸದ್ಯ ನನ್ನ ಕೊಲೆ ಸ್ಕೆಚ್ ಬಗ್ಗೆ ಕಾರಣ ಏನೆಂದು ನನಗೆ ಗೊತ್ತಿಲ್ಲ. ಹಿಂದುತ್ವದ ಕಾರಣಕ್ಕೆ ಕೊಲೆಗೆ ಸ್ಕೆಚ್ ಹಾಕುತ್ತಾರೆಂದರೆ ನಾವು ಹೆದರುವವರಲ್ಲ. ನಾವು ಎಲ್ಲದಕ್ಕೂ ಸಿದ್ಧ ಎಂದರು.

ಇದರೊಂದಿಗೆ ತಮ್ಮ ರಾಜಕೀಯ ನಿವೃತ್ತಿ ಕುರಿತು ಮಾತನಾಡಿದ ಈಶ್ವರಪ್ಪ ಅವರು, “ನಾನು ನಿವೃತ್ತಿ ಘೋಷಣೆ ಮಾಡಿದ ಬೆನ್ನಲ್ಲೇ ರಾಜ್ಯದ ಚುನಾವಣಾ ಪ್ರಭಾರಿ ಧರ್ಮೇಂದ್ರ ಪ್ರಧಾನ್ ಅವರು ಫೋನ್ ಮಾಡಿ ನೀವು ಚುನಾವಣಾ ರಾಜಕೀಯಕ್ಕೆ ರಾಜೀನಾಮೆ ನೀಡಬಾರದು ಎಂದು ಮನವಿ ಮಾಡಿದರು. ಹೀಗಾಗಿ ಫಾರ್ಮ್ಯಾಟ್ ಕಳಿಸುವಂತೆ ಹೇಳಿರುವೆ. ಅವರು ಕಳಿಸಿದ ಫಾರ್ಮ್ಯಾಟ್ ನಲ್ಲಿ ರಾಜೀನಾಮೆ ಪತ್ರ ಕಳಿಸುವೆ” ಎಂದರು.

ಅಲ್ಲದೆ “ನನಗೆ ಟಿಕೆಟ್ ಸಿಕ್ಕಿಲ್ಲ. ಯಾರಿಗೆ ಸಿಗಲಿ, ಬಿಡಲಿ ನಾನು ಟಿಕೆಟ್ ಕೊಡಿ ಎಂದು ಕೇಳಲ್ಲ. ನನಗೆ ಯಾವ ಭರವಸೆಯನ್ನೂ ಕೊಟ್ಟಿಲ್ಲ. ಪಕ್ಷ ನನಗೆ ಸಾಕಷ್ಟು ಅಧಿಕಾರ, ಸ್ಥಾನಮಾನ, ಹುದ್ದೆ ನೀಡಿದೆ. ನಾನು ಬೂತ್ ಮಟ್ಟದಲ್ಲಿ ಕಾರ್ಯಕರ್ತ ಆಗಿದ್ದವನು. ಈಗ ಈ ಹಂತಕ್ಕೆ ಬಂದಿರುವೆ. ಪಕ್ಷ ಚುನಾವಣಾ ರಾಜಕೀಯದಿಂದ ನಿವೃತ್ತ ಆಗಬೇಕೆಂದು ಹೇಳಿದರೆ ಅದನ್ನು ನಾನು ಒಪ್ಪುವೆ, ಪಕ್ಷ ನೀಡುವ ಎಲ್ಲ ಕೆಲಸಗಳನ್ನು ಮಾಡುವೆ ಎಂದರು.

You may also like

Leave a Comment