Home » Shivanand Patil: ‘ಪಾಪ ಮುಸ್ಲಿಮರನ್ನು ಮನೆಯಿಂದ ಓಡಿಸಿದ್ದಾರೆ, ಸೋ ಹಿಂದೂಗಳನ್ನು ಅರೆಸ್ಟ್ ಮಾಡಿ ಅಂತ ನಾನೇ ಹೇಳ್ದೆ’ – ಸಚಿವ ಶಿವಾನಂದ ಪಾಟೀಲ್

Shivanand Patil: ‘ಪಾಪ ಮುಸ್ಲಿಮರನ್ನು ಮನೆಯಿಂದ ಓಡಿಸಿದ್ದಾರೆ, ಸೋ ಹಿಂದೂಗಳನ್ನು ಅರೆಸ್ಟ್ ಮಾಡಿ ಅಂತ ನಾನೇ ಹೇಳ್ದೆ’ – ಸಚಿವ ಶಿವಾನಂದ ಪಾಟೀಲ್

0 comments

Shivanand Patil: ‘ಪಾಪ ಮುಸಲ್ಮಾನರನ್ನು ಮನೆಯಿಂದ ಓಡಿಸಿದ್ದಾರೆ. ಹಿಂದೂಗಳನ್ನು ಅರೆಸ್ಟ್ ಮಾಡಿ ಅಂತ ನಾನೇ ಹೇಳಿದ್ದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ (shivanand patil) ಹೇಳಿದ್ದಾರೆ.

ಶಿಗ್ಗಾವಿ(Shiggavi) ತಾಲೂಕಿನ ಬಂಕಾಪುರದಲ್ಲಿ(Bankapura) ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಶಿವಾನಂದ ಪಾಟೀಲ್, ಮುಸಲ್ಮಾನರನ್ನು ರಾತ್ರಿ ಒಕ್ಕಲೆಬ್ಬಿಸಿ. ಮನೆಯಿಂದ ಓಡಿಸಿದ್ದಾರೆ. ಅವರಿನ್ನೂ ಊರಿಗೆ ಬಂದಿಲ್ಲ. ಹೀಗಾಗಿ ನಾನೇ ಹಿಂದೂಗಳನ್ನು ಅರೆಸ್ಟ್ ಮಾಡಿ ಬಿಡುಗಡೆ ಮಾಡಿ ಅಂತ ಹೇಳಿದ್ದೇನೆ ಎಂದಿದ್ದಾರೆ.

ಅಲ್ಲದೆ ಸವಣೂರು ತಾಲೂಕಿನ ಕಡಕೋಳದಲ್ಲಿ ವಿಷಯವೇ ಇಲ್ಲ. ಗಲಾಟೆ ಯಾರ್ ಮಾಡಿದವರು? ಕಡಕೋಳದಲ್ಲಿ ಒಂದು ಎಂಟ್ರಿ ಆಗಿಲ್ಲ. ಹಾವೇರಿ ಜಿಲ್ಲೆಯಲ್ಲಿ ಎಂಟ್ರಿ ಆಗಿರಬಹುದು. ಆದರೆ ಕಡಕೋಳದಲ್ಲಿ ಒಂದೇ ಒಂದು ಎಂಟ್ರಿ ಆಗಿಲ್ಲ. ಅಲ್ಲಿ ಯಾವುದೂ ವಕ್ಫ್‌ ಅಂತ ಇನ್ನೂ ಎಂಟ್ರಿನೇ ಆಗಿಲ್ಲ. ಆದರೂ ಸುಮ್ಮನೆ ಇಶ್ಯು ಮಾಡ್ತೀರಿ ಅಂದರೆ ಎಂಥ ಮೂರ್ಖತನ?. ನೋಟೀಸ್ ಕೊಟ್ಟರೆ ಎಂಟ್ರಿ ಆದ ಹಾಗೆ ಅಲ್ಲ. ಕಡಕೋಳದಲ್ಲಿ ಗಲಾಟೆ ಆಗಿರೋದು ದುರದೃಷ್ಟಕರ ಎಂದಿದ್ದಾರೆ

ಮುಂದುವರೆದು ಮಾತನಾಡಿದ ಅವರು ‘ಬಹು ಸಂಖ್ಯಾತ ಹಿಂದೂಗಳಿದ್ದರೆ ಮುಸ್ಲಿಂರಿಗೆ ಭಯ. ಮುಸಲ್ಮಾನರು ಬಹುಸಂಖ್ಯಾತರಿದ್ದಲ್ಲಿ ಹಿಂದೂಗಳಿಗೆ ಭಯ. ಈ ರೀತಿಯ ವಾತಾವರಣ ಸೃಷ್ಟಿ ಮಾಡ್ತಾ ಬರ್ತಾ ಇದಾರೆ. ಇದು ‌ಬಹಳ ದುರದೃಷ್ಟಕರ. ಇಷ್ಟು ವರ್ಷ ಸಾಮರಸ್ಯ ಮಾಡಿಕೊಂಡೇ ಬದುಕಿದೀವಲ್ರಿ. ಕಡಕೋಳ ಗ್ರಾಮದಲ್ಲಿ ಏನೂ ಆಗಿಯೇ ಇಲ್ಲ’ ಎಂದು ಸಚಿವರು ಹೇಳಿದ್ದಾರೆ.

You may also like

Leave a Comment