Home » MP New CM: ಮಧ್ಯಪ್ರದೇಶದಲ್ಲಿ ಬಿಜೆಪಿಯ ಅಚ್ಚರಿ ನಡೆ – ಸಿಎಂ ಆಯ್ಕೆ ವಿಚಾರದಲ್ಲಿ ನಾಯಕರಿಗೆಲ್ಲಾ ಬಿಗ್ ಶಾಕ್ ಕೊಟ್ಟ ಹೈಕಮಾಂಡ್ !!

MP New CM: ಮಧ್ಯಪ್ರದೇಶದಲ್ಲಿ ಬಿಜೆಪಿಯ ಅಚ್ಚರಿ ನಡೆ – ಸಿಎಂ ಆಯ್ಕೆ ವಿಚಾರದಲ್ಲಿ ನಾಯಕರಿಗೆಲ್ಲಾ ಬಿಗ್ ಶಾಕ್ ಕೊಟ್ಟ ಹೈಕಮಾಂಡ್ !!

1 comment
MP New CM

MP New CM: ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿ ಆಯ್ಕೆ (Madhya Pradesh New CM) ಪ್ರಕ್ರಿಯೆ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಸದ್ಯ, ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿ ಆಯ್ಕೆ (Madhya Pradesh New CM) ಪ್ರಕ್ರಿಯೆಯಲ್ಲಿ ಬಿಜೆಪಿಯ ಹೈಕಮಾಂಡ್‌ (BJP High Command) ಅಚ್ಚರಿಯ ತೀರ್ಮಾನ ಕೈಗೊಂಡಿದೆ.

ಉಜ್ಜಯಿನಿ ದಕ್ಷಿಣದ ಬಿಜೆಪಿ ಶಾಸಕ ಮೋಹನ್ ಯಾದವ್(MP New CM) ಅವರು ಆರೆಸ್ಸೆಸ್‌ ಹಿನ್ನೆಲೆಯವರಾಗಿದ್ದು, ಕಳೆದ 30 ವರ್ಷಗಳಿಂದ ಬಿಜೆಪಿ ಮತ್ತು ಆರೆಸ್ಸೆಸ್‌ ನೊಂದಿಗೆ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದಾರೆ. ಮೋಹನ್ ಯಾದವ್ ಅವರು ಹಿಂದುತ್ವದ ವಿಚಾರದಲ್ಲಿ ಕಟುವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಿನ್ನೆಲೆ ಬಿಜೆಪಿ ಹೈಕಮಾಂಡ್ ಅವರ ಹೆಸರನ್ನು ಸಿಎಂ ಸ್ಥಾನಕ್ಕೆ ಫೈನಲ್ ಮಾಡಿದೆ ಎಂದು ತಿಳಿದು ಬಂದಿದೆ.

ಮಧ್ಯಪ್ರದೇಶದ ಮುಂದಿನ ಮುಖ್ಯಮಂತ್ರಿಯಾಗಿ ಮೋಹನ್ ಯಾದವ್ (Madhya Pradesh New CM Mohan Yadav)ಅವರ ಹೆಸರನ್ನು ಬಿಜೆಪಿ ಪ್ರಕಟ ಮಾಡುತ್ತಿದ್ದ ಹಾಗೇ ಸ್ವತಃ ಬಿಜೆಪಿ ನಾಯಕರಿಗು ಶಾಕ್ ನೀಡಿದೆ. ಮುಖ್ಯಮಂತ್ರಿಯಾಗಿ ಆಯ್ಕೆಯಾದ ಮೋಹನ್ ಯಾದವ್ ಅವರಿಗು ಕೂಡ ಅಚ್ಚರಿ ಮೂಡಿಸಿದೆ. ಹೀಗಾಗಿ ಮೋಹನ್ ಯಾದವ್ ಮತ್ತು ಇತರ ಬಿಜೆಪಿ ನಾಯಕರೊಳಗೊಂಡ ಹಾಗೆ ಎಲ್ಲರಿಗೂ ಬಿಜೆಪಿ ಹೈಕಮಾಂಡ್‌ನ ನಿರ್ಧಾರ ಶಾಕ್ ತರಿಸಿದೆ. ಮೋಹನ್ ಯಾದವ್ ಒಬಿಸಿ ನಾಯಕರಾಗಿದ್ದು, ಉಜ್ಜಯಿನಿ ದಕ್ಷಿಣದಿಂದ ಮೂರು ಬಾರಿ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದರು. ಅಷ್ಟೇ ಅಲ್ಲದೆ, ಈ ಹಿಂದೆ ಮಧ್ಯಪ್ರದೇಶದ ಉನ್ನತ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

ಇದನ್ನೂ ಓದಿ: Elephants Found In Tamilnadu: ಏಕಕಾಲಕ್ಕೆ 70ಕ್ಕೂ ಅಧಿಕ ಕಾಡಾನೆಗಳು ಪ್ರತ್ಯಕ್ಷ – ಅಬ್ಬಬ್ಬಾ.. ಭಯ ಹುಟ್ಟಿಸುತ್ತೆ ವಿಡಿಯೋ!!

You may also like

Leave a Comment