JDS-BJP: ಮುಂಬರುವ ಲೋಕಸಭಾ ಚುನಾವಣೆಗೆ ಕಮಲ ಪಾಳಯ ಭರದ ತಯಾರಿ ನಡೆಸುತ್ತಿದೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಜೊತೆಗೆ ಬಿಜೆಪಿ ಮೈತ್ರಿ (BJP-JDS Alliance) ಮಾಡಿಕೊಂಡಿರುವುದು ಗೊತ್ತಿರುವ ಸಂಗತಿ.ಇದೀಗ ಜೆಡಿಎಸ್ ನಾಯಕರ ಕೈಗೆ ಸುಲಭವಾಗಿ ಸಿಗುವ ಬಿಜೆಪಿ ಹೈಕಮಾಂಡ್ ವರಿಷ್ಠರು ತಮ್ಮದೇ ಪಕ್ಷದ ರಾಜ್ಯ ನಾಯಕರಿಗೆ ಸಿಗದೇ ಇರುವುದರಿಂದ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಮನೆ ಮಾಡಿದ್ದು, ಕೆಲ ಬಿಜೆಪಿ ನಾಯಕರು ಈ ಕುರಿತು ಆಕ್ರೋಶ ಹೊರ ಹಾಕಿದ್ದಾರೆ.
ಬಿಜೆಪಿ ಹೈಕಮಾಂಡ್ (BJP Highcommand) ನಾಯಕರನ್ನು ಭೇಟಿಯಾಗಿರುವ ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಚುನಾವಣೆಯ ಕುರಿತಂತೆ ಈಗಾಗಲೇ ಅನೇಕ ಬಾರಿ ಚರ್ಚೆ ನಡೆಸಿದ್ದಾರೆ. ಈ ನಡುವೆ ಜೆಡಿಎಸ್ ನಾಯಕರಿಗೆ(JDS-BJP) ಸುಲಭವಾಗಿ ಸಿಗುವ ಬಿಜೆಪಿಯ ರಾಷ್ಟ್ರೀಯ ನಾಯಕರು ರಾಜ್ಯ ಬಿಜೆಪಿ ನಾಯಕರಿಗೆ ಸಿಗುತ್ತಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹೀನಾಯ ಸೋಲುಂಡ ಬಳಿಕ ಕಮಲ ವರಿಷ್ಠರು ಬಿಜೆಪಿ ನಾಯಕರಿಗೆ ಭೇಟಿಗೆ ಅವಕಾಶ ನೀಡುತ್ತಿಲ್ಲ ಎನ್ನಲಾಗಿದೆ. ಈಗಾಗಲೇ ಈ ಕುರಿತು ಮಾಜಿ ಸಿಎಂ ಡಿವಿ ಸದಾನಂದ ಗೌಡ, ಎಂಪಿ ರೇಣುಕಾಚಾರ್ಯ, ಕೆಎಸ್ ಈಶ್ವರಪ್ಪ ಘಟಾನುಘಟಿ ನಾಯಕರು ಈ ಕುರಿತು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ.
ಇದರ ನಡುವೆ, ಮಾಜಿ ಸಿಎಂ, ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಬಿಜೆಪಿ ವರಿಷ್ಠರನ್ನೂ ಮತ್ತೊಮ್ಮೆ ಭೇಟಿಯಾಗಲಿದ್ದು, ಅಕ್ಟೋಬರ್ 14ರ ಅಮಾವಾಸ್ಯೆ ಬಳಿಕ ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮೈತ್ರಿ ಯೋಜನೆಗಳ ಬಗ್ಗೆ, ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ವಿಚಾರದ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Pakistan: ಹಿಂದೂಗಳಿಂದ ಪಾಕಿಸ್ತಾನ ಹೆಸರು ಬದಲಾವಣೆಗೆ ಆಗ್ರಹ! ಯಾಕೆ ಈ ಅಹವಾಲು, ಗೊತ್ತೇ?
