Home » Amith shah: ದೇಶದ ಮುಂದಿನ ಪ್ರಧಾನಿಯಾಗಿ ತಮಿಳು ನಾಯಕ ಆಯ್ಕೆ- ಅಚ್ಚರಿ ಹೇಳಿಕೆ ನೀಡಿದ ಅಮಿತ್ ಶಾ

Amith shah: ದೇಶದ ಮುಂದಿನ ಪ್ರಧಾನಿಯಾಗಿ ತಮಿಳು ನಾಯಕ ಆಯ್ಕೆ- ಅಚ್ಚರಿ ಹೇಳಿಕೆ ನೀಡಿದ ಅಮಿತ್ ಶಾ

by ಹೊಸಕನ್ನಡ
3 comments
Amit Shah

Amith shah: ದೇಶದಲ್ಲಿ ಲೋಕಸಭಾ ಚುನಾವಣೆಯ(Parliament election) ಕಾವು ರಂಗೇರಲಾರಂಭಿಸಿದೆ. ಸದ್ಧಿಲ್ಲದೆ ಪಕ್ಷಗಳು ತಯಾರಿ ಆರಂಭಿಸಿವೆ. ಈ ಬೆನ್ನಲ್ಲೇ ‘ಮುಂದಿನ ದಿನಗಳಲ್ಲಿ ತಮಿಳು(Tamil) ವ್ಯಕ್ತಿಯೊಬ್ಬರನ್ನು ದೇಶದ ಪ್ರಧಾನ ಮಂತ್ರಿಯನ್ನಾಗಿ ಮಾಡುತ್ತೇವೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ(Amith shah) ಅವರು ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

ಹೌದು, ಮುಂಬರುವ ದಿನಗಳಲ್ಲಿ ತಮಿಳುನಾಡಿನ ನಾಯಕ(Tamil leader)ರೊಬ್ಬರನ್ನು ದೇಶದ ಪ್ರಧಾನಿ(PM) ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ, ಹಿರಿಯ ಬಿಜೆಪಿ ನಾಯಕ ಅಮಿತ್‌ ಶಾ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ ವ್ಯಕ್ತವಾದ ಈ ಹೇಳಿಕೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಅಂದಹಾಗೆ ತಮಿಳುನಾಡು ಪ್ರವಾಸ ಕೈಗೊಂಡಿರುವ ಅಮಿತ್ ಶಾ ಅವರು ಚೆನ್ನೈಗೆ(Chennai) ಭೇಟಿ ನೀಡಿದ ವೇಳೆಯಲ್ಲಿ ತಮಿಳುನಾಡಿನ ಬಿಜೆಪಿ ಪದಾಧಿಕಾರಿಗಳೊಂದಿಗೆ ನಡೆಸಿದ ರಹಸ್ಯ ಸಭೆಯಲ್ಲಿ ಈ ರೀತಿಯ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತ ವಿವರಗಳು ಇನ್ನೂ ಬಹಿರಂಗವಾಗಿಲ್ಲ. ಮುಂದಿನ ದಿನಗಳಲ್ಲಿ ತಮಿಳು ಪ್ರಧಾನಿ ಆಯ್ಕೆ ಕುರಿತಂತೆ ಅಮಿತ್ ಶಾ ಮಾತನಾಡಿದ್ದಾರೆ ಎಂದು ಮೂಲಗಳು ಸೂಚಿಸಿವೆ.

ಅಲ್ಲದೆ ಈ ಹಿಂದೆಯೂ ತಮಿಳರು ಈ ದೇಶದ ಪ್ರಧಾನಿಯಾಗುವ ಅವಕಾಶ ಎರಡು ಬಾರಿ ಬಂದಿತ್ತು. ಆದರೆ ಇಲ್ಲಿನ ಪ್ರಾದೇಶಿಕ ಪಕ್ಷವಾದ ಡಿಎಂಕೆಯಿಂದಾಗಿ ಈ ಅವಕಾಶ ಕೈತಪ್ಪಿತು ಎಂದು ಎಂದು ಶಾ ದೂರಿದರು ಎನ್ನಲಾಗಿದೆ. ಜೊತೆಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಕನಿಷ್ಠ 20 ಸ್ಥಾನ ಗೆಲ್ಲಬೇಕು. ಈ ಹಿನ್ನೆಲೆಯಲ್ಲಿ ಎಲ್ಲಾ ಕಾರ್ಯಕರ್ತರೂ ಪ್ರಯತ್ನಿಸಬೇಕು ಎಂದು ಕರೆ ನೀಡಿದರು ಎನ್ನಲಾಗಿದೆ.

ಇದನ್ನೂ ಓದಿ: ಮೂರನೇ ಮಗುವಾದರೆ 5 ಲಕ್ಷ ರೂ. ಉಚಿತದ ಗ್ಯಾರಂಟಿ: ಜತೆಗೆ ಶಿಕ್ಷಣ, ಚಿಕಿತ್ಸೆ, ಮದ್ವೆ ಖರ್ಚಿಯೂ ಉಚಿತ – ಇದು ಕರ್ನಾಟಕದ್ದೇ ಸುದ್ದಿ !

You may also like

Leave a Comment