Home » Congress Government: ದಿಢೀರ್ ಎಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾಂಗ್ರೆಸ್ ಪ್ರಬಲ ನಾಯಕಿ – ಕೈ ಪಾಳಯದಲ್ಲಿ ಭಾರೀ ಸಂಚಲನ !!

Congress Government: ದಿಢೀರ್ ಎಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾಂಗ್ರೆಸ್ ಪ್ರಬಲ ನಾಯಕಿ – ಕೈ ಪಾಳಯದಲ್ಲಿ ಭಾರೀ ಸಂಚಲನ !!

1 comment
Chandra Priyanka

Chandra Priyanka : ಪುದುಚೇರಿಯ ಕಾಂಗ್ರೆಸ್ ಸರ್ಕಾರದಲ್ಲಿ(Congress Government)ಸಾರಿಗೆ (Puducherry Transport Minister) ಸಚಿವೆಯಾಗಿದ್ದ ಚಂದ್ರ ಪ್ರಿಯಾಂಕಾ (Chandra Priyanka) ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಕೈ ಪಾಳಯದಲ್ಲಿ ಭಾರೀ ಸಂಚಲನ ಉಂಟುಮಾಡಿದೆ.

Chandra Priyanka

ಹೌದು, ಕೇಂದ್ರಾಡಳಿತ ಪ್ರದೇಶದ ಸಾರಿಗೆ ವಲಯದಲ್ಲಿ ಸಾರ್ವಜನಿಕ ಸಾರಿಗೆ ಕ್ಷೇತ್ರವನ್ನು ಸುಧಾರಿಸಲು ಮತ್ತು ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲತೆಯನ್ನು ಹೆಚ್ಚಿಸಲು ಅವರು ತಮ್ಮ ಅಧಿಕಾರವಧಿಯಲ್ಲಿ ಹಲವಾರು ಗಮನಾರ್ಹ ಕ್ರಮಗಳನ್ನು ಕೈಗೊಳ್ಳುವ ಮೂಲಕ ಹೆಸರುಗಳಿಸಿದ್ದ ಚಂದ್ರ ಪ್ರಿಯಾಂಕ ಅವರ ದಲಿತ ಸಮುದಾಯದ ಮಹಿಳಾ ನಾಯಕಿಯಾಗಿ ಅನುಭವಿಸಿದ ಸಮಸ್ಯೆಗಳು ಸೇರಿದಂತೆ ಅನೇಕ ವಿಷಯಗಳನ್ನು ಮುಂದಿಟ್ಟು ಅವರು ದಿಢೀರ್ ರಾಜೀನಾಮೆ ನೀಡಿದ್ದು, ಇದು ಸಾರ್ವಜನಿಕರು ಸೇರಿದಂತೆ ಅವರ ಆಪ್ತ ರಾಜಕೀಯ ನಾಯಕರಲ್ಲಿಯೂ ಅಚ್ಚರಿ ಮೂಡಿಸಿದೆ.

ಅಂದಹಾಗೆ ಚಂದ್ರ ಪ್ರಿಯಾಂಕಾ ( ಅವರು ಅಖಿಲ ಭಾರತ NR ಕಾಂಗ್ರೆಸ್‌ನಿಂದ ಸಚಿವರಾಗಿದ್ದರು. ಅವರು ಕೇಂದ್ರಾಡಳಿತ ಪ್ರದೇಶದ 41 ವರ್ಷಗಳ ಇತಿಹಾಸದಲ್ಲಿ ಎರಡನೇ ಮಹಿಳಾ ಸಚಿವರಾಗಿದ್ದರು. ಪ್ರಬಲ ಶಕ್ತಿಗಳ ವಿರುದ್ಧ ಹೋರಾಟ ಮುಂದುವರಿಸಿ ಸಚಿವೆಯಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂಬುದನ್ನು ಮನಗಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಇನ್ನು ಚಂದ್ರ ಪ್ರಿಯಾಂಕ ಅವರು ಸಿಎಂಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ, ಜನರ ಬೆಂಬಲವಿದ್ದರೂ ವಿಧಾನಸಭೆಯಲ್ಲಿ ಪ್ರಚಲಿತದಲ್ಲಿರುವ ವಂಚನೆಯ ರಾಜಕಾರಣ ಮತ್ತು ಸಂಪತ್ತಿನ ಅಸಾಧಾರಣ ಹಿಡಿತವನ್ನು ಎದುರಿಸುವುದು ಸವಾಲಿನ ಸಂಗತಿ ಎಂಬುದನ್ನು ನಾನು ಅರಿತುಕೊಂಡಿದ್ದೇನೆ. ನಾನು ಆಗಾಗ್ಗೆ ಜಾತಿ ಮತ್ತು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.

ಪ್ರಿಯಾಂಕಾ (chandra Priyankha) ಅವರ ನಿರ್ಗಮನದಿಂದ ಪುದುಚೇರಿ ಸಾರಿಗೆ ಕ್ಷೇತ್ರದ ಜೊತೆ ಪುದುಚೇರಿ ಸರ್ಕಾರದ ಸಂಪುಟದಲ್ಲಿ ಮಹತ್ತರ ಬದಲಾವಣೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಚಂದ್ರ ಪ್ರಿಯಾಂಕಾ ಅವರು 2016ರಲ್ಲಿ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು. 41 ವರ್ಷಗಳಲ್ಲೇ ಇವರು ಪುದುಚೇರಿಯ ಮೊದಲ ಮಹಿಳಾ ಸಚಿವರೆನಿಸಿದ್ದರು.

ಇದನ್ನೂ ಓದಿ: Israel Palestine War: ಇಸ್ರೇಲ್’ನ 40 ಮಕ್ಕಳ ರುಂಡ ಕತ್ತರಿಸಿದ ಹಮಾಸ್ ಉಗ್ರರು !! ವೈರಲ್ ವಿಡಿಯೋ ಕಂಡು ಬೆಚ್ಚಿಬಿದ್ದ ವಿಶ್ವ

You may also like

Leave a Comment