Home » ನಿಖತ್ ಜರೀನ್ ಳ ತೋಳಿನ ಮೇಲೆ ಹಸ್ತಾಕ್ಷರ ಮಾಡಿದ ಪ್ರಧಾನಿ ನರೇಂದ್ರ ಮೋದಿ

ನಿಖತ್ ಜರೀನ್ ಳ ತೋಳಿನ ಮೇಲೆ ಹಸ್ತಾಕ್ಷರ ಮಾಡಿದ ಪ್ರಧಾನಿ ನರೇಂದ್ರ ಮೋದಿ

0 comments

ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಚಾಂಪಿಯನ್ ಬಾಕ್ಸರ್ ನಿಖತ್ ಜರೀನ್ ಮತ್ತು ಮೇನಲ್ಲಿ ಇಸ್ತಾನ್‌ಬುಲ್‌ನಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಇತರ ವೃತ್ತಿಪರ ಬಾಕ್ಸರ್ ಗಳಾದ ಮನೀಶಾ ಮೌನ್ ಮತ್ತು ಪರ್ವೀನ್ ಹೂಡಾ ಅವರನ್ನು ಬುಧವಾರ ಭೇಟಿ ಮಾಡಿದರು. ಆ ಸಂದರ್ಭದಲ್ಲಿ ವಿಶ್ವ ಚಾಂಪಿಯನ್ ಬಾಕ್ಸರ್ ನಿಖತ್ ಜರೀನ್ ಅವರ ತೋಳಿನ ಮೇಲೆ ಹಸ್ತಾಕ್ಷರ ಮಾಡಿದರು. ನಿಖತ್ ಅವರ ಆಸೆಯಂತೆ ಪ್ರಧಾನಿ ನರೇಂದ್ರ ಮೋದಿ ಅವರು ನಿಖತ್ ಜರೀನ್ ಅವರ ತೋಳಿನಲ್ಲಿ ಆಟೋಗ್ರಾಫ್ ನೀಡಿದರು.
ಇತ್ತೀಚೆಗೆ ಮುಕ್ತಾಯಗೊಂಡ ಚಾಂಪಿಯನ್‌ಶಿಪ್‌ನಲ್ಲಿ ಭಾರತವು ಒಂದು ಚಿನ್ನ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡಿತು.
ಭಾರತದ ಬಾಕ್ಸರ್ ನಿಖತ್ ಅವರು ಫ್ಲೈವೇಟ್ (52 ಕೆಜಿ) ಫೈನಲ್‌ನಲ್ಲಿ ಥಾಯ್ಲೆಂಡ್‌ನ ಜಿಟ್‌ಪಾಂಗ್ ಜುಟಮಾಸ್ ವಿರುದ್ಧ 5-0 ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದರು. ಈ ಗೆಲುವಿನೊಂದಿಗೆ ನಿಖತ್ ಜರೀನ್ ವಿಶ್ವ ಚಾಂಪಿಯನ್ ಕಿರೀಟವನ್ನು ಅಲಂಕರಿಸಿದ ಐದನೇ ಭಾರತೀಯ ಬಾಕ್ಸರ್ ಎನಿಸಿಕೊಂಡರು.

ನಿಖತ್ ಅವರ ಚಿನ್ನದ ಜೊತೆಗೆ, ಮನೀಶಾ ಮೌನ್ (57 ಕೆಜಿ) ಮತ್ತು ಚೊಚ್ಚಲ ಆಟಗಾರ್ತಿ ಪರ್ವೀನ್ ಹೂಡಾ (63 ಕೆಜಿ) ಕಂಚಿನ ಪದಕಗಳನ್ನು ಪಡೆದರು.

You may also like

Leave a Comment