Home » D.K.Shiva Kumar : ಪಕ್ಷ ಸೇರಿರುವ ಯಾರಿಗೂ ಟಿಕೆಟ್ ಭರವಸೆ ನೀಡಿಲ್ಲ,ಹಾಗಾಗಿ ಅಸಮಾಧಾನದ ಪ್ರಶ್ನೆಯೇ ಇಲ್ಲ-ಡಿ.ಕೆ.ಶಿವ ಕುಮಾರ್

D.K.Shiva Kumar : ಪಕ್ಷ ಸೇರಿರುವ ಯಾರಿಗೂ ಟಿಕೆಟ್ ಭರವಸೆ ನೀಡಿಲ್ಲ,ಹಾಗಾಗಿ ಅಸಮಾಧಾನದ ಪ್ರಶ್ನೆಯೇ ಇಲ್ಲ-ಡಿ.ಕೆ.ಶಿವ ಕುಮಾರ್

by ಹೊಸಕನ್ನಡ
1 comment
D.K.Shiva Kumar

D.K.Shiva Kumar : ಬೆಂಗಳೂರು : ಕಾಂಗ್ರೆಸ್‌ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾದ ನಂತರ ಭುಗಿಲೆದ್ದ ಟಿಕೆಟ್‌ ಆಕಾಂಕ್ಷಿಗಳ ಮುನಿಸು ಇನ್ನೂ ಶಮನವಾಗಿಲ್ಲ. ಬಹುತೇಕ ಕ್ಷೇತ್ರಗಳಲ್ಲಿ ಟಿಕೆಟ್‌ ವಂಚಿತರ ಆಕ್ರೋಶ ಮುಗಿಲುಮುಟ್ಟಿದ್ದು, ಹೈಕಮಾಂಡ್‌ ನಿಲುವಿನ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಇನ್ನೂ ಹಲವು ಕ್ಷೇತ್ರಗಳಲ್ಲಿ ಟಿಕೆಟ್‌ ವಂಚಿತರು ಬಂಡಾಯವಾಗಿ ಸ್ಪರ್ಧಿಸುವ ಘೋಷಣೆ ಮಾಡಿದ್ದರೆ, ಕೆಲವೆಡೆ ಅನಿವಾರ್ಯವಾಗಿ ಜೆಡಿಎಸ್‌, ಬಿಜೆಪಿಯತ್ತ ಮುಖ ಮಾಡುವ ಮೂಲಕ ತಮ್ಮ ರಾಜಕೀಯ ನೆಲೆ ಗಟ್ಟಿಗೊಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ.

ಈ ಬೆಳವಣಿಗೆಯ ಕುರಿತು ಕೆ.ಪಿ.ಸಿ.ಸಿ.ಅಧ್ಯಕ್ಷ ಡಿ.ಕೆ.ಶಿವ ಕುಮಾರ್ (D.K.Shiva Kumar) ಪ್ರತಿಕ್ರಿಯೆ ನೀಡಿದ್ದು,ರಾಜಕಾರಣ ಅಂದ್ರೆ ಪುಟ್ಬಾಲ್ ಅಲ್ಲ, ಚೆಸ್ ಗೇಮ್- ಕಾಂಗ್ರೆಸ್‌ ಪಕ್ಷಸೇರಿರುವ ಯಾವ ನಾಯಕರಿಗೂ ಯಾವುದೇ ಭರವಸೆಯನ್ನು ನಾವು ನೀಡಿರಲಿಲ್ಲ ಎಂದು ಹೇಳಿದ್ದಾರೆ.

ಪಕ್ಷ ಸೇರಿದವರಿಗೆ ಯಾವುದೇ ಭರವಸೆ ನೀಡಿಲ್ಲ. ಹಾಗಾಗಿ ಯಾರೂ ಟಿಕೆಟ್ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುವ ಪ್ರಶ್ನೆಯೇ ಇಲ್ಲ.ಟಿಕೆಟ್‌ ಸಿಗದವರ ಅಸಮಾಧಾನದ ಬಗ್ಗೆ ನಾನು ಈಗ ಏನೂ ಮಾತನಾಡುವುದಿಲ್ಲ ಎಂದು ಡಿಕೆಶಿ ಹೇಳಿದ್ದಾರೆ.

 

 

You may also like

Leave a Comment