ದೇಶದ 18ನೇ ಸಾರ್ವತ್ರಿಕ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದೆ. ಕೇಂದ್ರ ಚುನಾವಣಾ ಆಯೋಗ ಇದೀಗ ಲೋಕಸಭಾ ಚುನಾವಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಜಮ್ಮು ಕಾಶ್ಮೀರದ ಭದ್ರತೆ ಕುರಿತ ಪರಿಶೀಲನೆ ನಡೆಸಲಾಗಿದೆ. ಇದೇ ಮಾರ್ಚ್ 9 ರ ಬಳಿಕ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: Yadagiri: ನಡು ರಸ್ತೆಯಲ್ಲಿ ನೂರಾರು ಕಾಂಡಮ್ ಬಾಕ್ಸ್ ಪತ್ತೆ !! ಅಷ್ಟಕ್ಕೂ ಹೋಗುತ್ಯಿದ್ದದ್ದು ಎಲ್ಲಿಗೆ ಗೊತ್ತೆ?
543 ಲೋಕಸಭಾ ಕ್ಷೇತ್ರಗಳಿಗೆ ಎಪ್ರಿಲ್, ಮೇ ತಿಂಗಳಲ್ಲಿ ಲೋಕಸಭಾ ಕ್ಷೇತ್ರಗಳಿಗೆ ಚುನಾವನೆ ನಡೆಯೋ ಸಾಧ್ಯತೆ ಇದೆ ಎನ್ನಲಾಗಿದೆ. ಎಲೆಕ್ಷನ್ ದಿನಾಂಕ ಘೋಷಣೆಯ ಒಂದೂವರೆ ತಿಂಗಳ ಬಳಿಕ ಮೊದಲ ಹಂತದ ಮತದಾನ ನಡೆಯಲಿದೆ. ಚುನಾವಣೆ ಘೋಷಣೆಯ ದಿನಾಂಕಕ್ಕೂ ಮೊದಲ ಹಂತದ ಮತದಾನದ ನಡುವೆ 45 ದಿನಗಳ ಅಂತರ ಇರುವ ಸಾಧ್ಯತೆ ಇದೆ ಎನ್ನಲಾಗಿದೆ.
