Home » Parliament Election: ಕಾಂಗ್ರೆಸ್’ಗೆ ಬೆಂಬಲ ಘೋಷಿಸಿದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್

Parliament Election: ಕಾಂಗ್ರೆಸ್’ಗೆ ಬೆಂಬಲ ಘೋಷಿಸಿದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್

0 comments
Parliament Election

Parliment Election : ಬಿಜೆಪಿಯ ಶಾಸಕರಾದರೂ ಕಾಂಗ್ರೆಸ್‌ ನಾಯಕರ ಜೊತೆ ಕಾಣಿಸಿಕೊಳ್ಳುತ್ತ ಸುದ್ದಿಯಾಗುವ ಯಶವಂತಪುರ ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್(S T Somshekhar)ಅವರು ಇದೀಗ ಲೋಕಸಭಾ ಚುನಾವಣೆಯ(Parliament Election) ಲ್ಲಿ ಕಾಂಗ್ರೆಸ್(Congress)ಗೆ ಬೆಂಬಲ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: Belthangady: ಹೆರಿಗೆ ವೇಳೆ ವಿಪರೀತ ರಕ್ತಸ್ರಾವ- ಮಹಿಳೆ ಸಾವು, ವೈದ್ಯರ ನಿರ್ಲಕ್ಷ್ಯವೇ ಕಾರಣ-ಕುಟುಂಬಸ್ಥರಿಂದ ಗಂಭೀರ ಆರೋಪ

ಇದನ್ನೂ ಓದಿ: Putturu: ಕಡಬದಲ್ಲಿ ಶಂಕಿತ ನಕ್ಸಲರ ಆಗಮನ; ಊಟ ಮಾಡಿ ದಿನಸಿ ಪಡೆದು ಶಂಕಿತರ ತಂಡ

ಹೌದು, ಈ ಹಿಂದೆಯೂ ರಾಜ್ಯಸಭೆ, ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದ್ದ ಬಿಜೆಪಿ ಶಾಸಕ ಎಸ್‌.ಟಿ. ಸೋಮಶೇಖರ್, ಕೆಂಗೇರಿ ಉಪನಗರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಸಹಕರಿಸುವಂತೆ ತಮ್ಮ ಬೆಂಬಲಿಗರಿಗೆ ಸೂಚಿಸಿದರು. ಈ ಮೂಲಕ ಅವರು ನನ್ನ ಬೆಂಬಲ ಕಾಂಗ್ರೆಸ್’ಗೆ ಎಂದು ಘೋಷಿಸಿದ್ದಾರೆ.

ಬಿಜೆಪಿ(BJP)ಯವರ ಕೈಯಲ್ಲಿ ಏನ್‌ ಮಾಡೋಕಾಗುತ್ತೋ ಮಾಡಿಕೊಳ್ಳಲಿ, ನಾನು ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ಮಾಡ್ತೀನಿ ಎಂದು ಬಹಿರಂಗವಾಗಿಯೇ ಎಸ್‌ಟಿ ಸೋಮಶೇಖರ್‌ ಹೇಳಿದ್ದಾರೆ. ಅದಲ್ಲದೇ ಬೆಂಗಳೂರು ಉತ್ತರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸ್ಪರ್ಧೆಗೆ ತೀವ್ರ ವಿರೋಧವನ್ನು ಕೂಡ ಎಸ್‌ಟಿ ಸೋಮಶೇಖರ್‌ ವ್ಯಕ್ತಪಡಿಸಿದ್ದು, ಜನರಿಂದ ಗೋಬ್ಯಾಕ್‌ ಅನಿಸಿಕೊಂಡು ಬಂದವರಿಗೆ ನಾವು ಸ್ವಾಗತ ಕೋರಬೇಕಾ ಎಂದು ಪ್ರಶ್ನಿಸಿದ್ದಾರೆ.

ಸಭೆ ಬಳಿಕ ಮಾತಾಡಿದ ಎಸ್ ಟಿ ಎಸ್‌, ಬಿಜೆಪಿಯಿಂದ (BJP) ಲೋಕಸಭೆ ಅಭ್ಯರ್ಥಿ ಘೋಷಣೆಯಾದರೂ, ಇದುವರೆಗೂ ಬಿಜೆಪಿಯ ಯಾರೊಬ್ಬರೂ ನನ್ನ ಬೆಂಬಲ ಕೇಳಿಲ್ಲ. ನನ್ನ ಕ್ಷೇತ್ರದಲ್ಲಿ 7-8 ಬಾರಿ ಪ್ರಚಾರ ಮಾಡಿದ್ದಾರೆ. ಆದರೆ ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಹೀಗಾಗಿ ನನ್ನ ಕಾರ್ಯಕರ್ತರ ಸಭೆ ಕರೆದಿದ್ದೇನೆ. ಇಷ್ಟೆಲ್ಲಾ ಆದ ಮೇಲೆ ಸುಮ್ಮನೆ ಇದ್ದರೆ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತೆ.‌ ನನ್ನ ಕ್ಷೇತ್ರಕ್ಕೆ ಯಾರು ಸಹಾಯ ಮಾಡುತ್ತಾರೋ ಅವರಿಗೆ ಬೆಂಬಲ ನೀಡುತ್ತೇನೆ ಎಂದು ಹೇಳಿದ್ದಾರೆ.

You may also like

Leave a Comment