Home » Anna malai: ಲೋಕಸಭಾ ಚುನಾವಣೆಗೆ ಕರ್ನಾಟಕದಿಂದ ಅಣ್ಣಾ ಮಲೈ ಕಣಕ್ಕೆ?! ಯಾವ ಕ್ಷೇತ್ರದಿಂದ ಗೊತ್ತಾ?

Anna malai: ಲೋಕಸಭಾ ಚುನಾವಣೆಗೆ ಕರ್ನಾಟಕದಿಂದ ಅಣ್ಣಾ ಮಲೈ ಕಣಕ್ಕೆ?! ಯಾವ ಕ್ಷೇತ್ರದಿಂದ ಗೊತ್ತಾ?

1 comment
Anna malai

Anna malai: 2024ರ ಲೋಕಸಭಾ ಚುನಾವಣೆ ಕಾವು ಸದ್ದಿಲ್ಲದೆ ಕಾವೇರುತ್ತಿದೆ. ಈಗಾಗಲೆ ಕೆಲವು ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ರಣಕಹಳೆ ಊದಿವೆ. ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ ಆದರೂ ಇನ್ನೂ ಕರ್ನಾಟಕದ ಯಾವೊಂದ ಕ್ಷೇತ್ರಕ್ಕೂ ಅಭ್ಯರ್ಥಿಗಳ ಘೋಷಣೆ ಆಗಿಲ್ಲ. ಆದರೀಗ ಅಚ್ಚರಿ ಸುದ್ದಿಯೊಂದು ಕೇಳಿಬರುತ್ತಿದ್ದು ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾ ಮಲೈ ಅವರು ಕರ್ನಾಟಕದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Physical Abuse: ಸಿಸಿದ್ದಗಂಗಾ ಮಠದ ಜಾತ್ರೆಗೆ ಬಂದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ದುಷ್ಕರ್ಮಿಗಳು; ಆರೋಪಿಗಳು ಅರೆಸ್ಟ್‌

ಹೌದು, ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಮೊದಲಿನಂತೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಬಿಜೆಪಿ(BJP) ವರಿಷ್ಠರ ಪಡೆ ರಣತಂತ್ರಗಳ ಮೇಲೆ ರಣತಂತ್ರ ಹೆಣೆಯುತ್ತಿದ್ದು ಈಗ ಅಣ್ಣಾಮಲೈ(Anna malai) ಅವರನ್ನು ಬಿಜೆಪಿ ವರಿಷ್ಠರು, ಕರ್ನಾಟಕ(Karnataka)ದಿಂದ ಚುನಾವಣೆ ಅಖಾಡಕ್ಕೆ ಇಳಿಸುತ್ತಾರೆಂಬ ಗುಮಾನಿ ಎದುರಾಗಿದೆ.

ಅಣ್ಣಾಮಲೈ ಅಂದ್ರೆ ತಮಿಳುನಾಡಿನ ಮೂಲೆ ಮೂಲೆಯಲ್ಲೂ ಹವಾ ಇದೆ. ಇನ್ನು ಕರ್ನಾಟಕದಲ್ಲಿ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿದ ಅವರು ನಮ್ಮ ರಾಜ್ಯದಲ್ಲೂ ಅವರು ದೊಡ್ಡ ಹೆಸರು ಸಂಪಾದಿಸಿದ್ದಾರೆ. ‘ಸಿಂಗಂ ಅಣ್ಣಾಮಲೈ’ ಅಂತಾನೆ ಅವರನ್ನು ಇಲ್ಲಿನ ಜನರು ಕರೆಯುತ್ತಿದ್ದರು. ಈಗ ಇದೆ ಅಣ್ಣಾಮಲೈ ಕರ್ನಾಟಕದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ ಎಂಬ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ಚರ್ಚೆ ಶುರುವಾಗಿದೆ. ಆದರೆ ಯಾವ ಕ್ಷೇತ್ರದಿಂದ ಎಂಬುದು ಸ್ಪಷ್ಟವಾಗಿಲ್ಲ ಎನ್ನಲಾಗಿದೆ.

You may also like

Leave a Comment