Home » Pratap simha: ಟಿಕೆಟ್ ಮಿಸ್ ಆದ ಬಗ್ಗೆ ಮನಮಿಡಿಯುವ ಪೋಸ್ಟ್ ಹಂಚಿಕೊಂಡ ಪ್ರತಾಪ್ ಸಿಂಹ- ಎಂತವರಿಗೂ ಅಯ್ಯೋ ಅನ್ನಿಸುತ್ತೆ!!

Pratap simha: ಟಿಕೆಟ್ ಮಿಸ್ ಆದ ಬಗ್ಗೆ ಮನಮಿಡಿಯುವ ಪೋಸ್ಟ್ ಹಂಚಿಕೊಂಡ ಪ್ರತಾಪ್ ಸಿಂಹ- ಎಂತವರಿಗೂ ಅಯ್ಯೋ ಅನ್ನಿಸುತ್ತೆ!!

1 comment
Prathap simha

Pratap simha: ರಾಜ್ಯದ ಹೈವೋಲ್ಟೇಜ್ ಕ್ಷೇತ್ರವಾದ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ, ಪ್ರಬಲ ನಾಯಕ, ಯುವ ನೇತಾರ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಮಿಸ್ ಆಗಿದ್ದು, ಅದು ಅರಸರ ಕುಡಿ ಯದುವೀರ್ ಅವರ ಪಾಲಾಗಿದೆ. ಇದೀಗ ಟಿಕೆಟ್ ಮಿಸ್ ಆದ ಬೆನ್ನಲ್ಲೇ ಪ್ರತಾಪ್ ಸಿಂಹ(Pratap simha) ಅವರು ಮನಮಿಡಿಯುವ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ.

ಇದನ್ನೂ ಓದಿ: Crime News: ಮಿಜೋರಾಂನಿಂದ ₹110 ಕೋಟಿ ಮೌಲ್ಯದ ಮಾದಕ ದ್ರವ್ಯ ಸಾಗಣೆ : ಅಸ್ಸಾಂನಲ್ಲಿ ಮಹಿಳೆಯ ಬಂಧನ

https://x.com/mepratap/status/1768225184635560032?t=DuJh4DVHzkxrUsG0X82BXg&s=08

ಹೌದು, ಮೋದಿ ಸರ್ಕಾರದ(Modi government)ಎರಡೂ ಅವಧಿಯಲ್ಲೂ ಕೊಡಗು-ಮೈಸೂರು ಕ್ಷೇತ್ರದ ಸಂಸದರಾಗಿ 10 ವರ್ಷಗಳಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ ಪ್ರತಾಪ್ ಸಿಂಹ ಅವರಿಗೆ ಈ ಸಲ ಟಿಕೆಟ್ ಮಿಸ್ ಆಗಿದೆ. ಯಾಕಾಗಿ ಹೈಕಮಾಂಡ್ ಹೀಗೆ ಮಾಡಿತು ಎಂಬುದು ಇನ್ನೂ ಪ್ರಶ್ನೆಯಾಗೇ ಉಳಿದಿದೆ. ಆದರೆ ಮೈಸೂರಿನ ಜನತೆಗೆ ಪ್ರತಾಪ್ ಸಿಂಹ ಎಂದರೆ ಈಗಲೂ ಅಚ್ಟು ಮೆಚ್ಚು. ಹೀಗಾಗಿ ಈ ಕುರಿತಂತೆ ಪ್ರತಾಪ್ ಸಿಂಹ ಎಂತವರಿಗೂ ಅಯ್ಯೋ ಎನ್ನುವಂತ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ.

ತನ್ನ ಅಭಿಮಾನಿಗಳಿಗಾಗಿ, ಕಾರ್ಯಕರ್ತರಿಗಾಗಿ ಸಂಸದ ಪ್ರತಾಪ್ ಸಿಂಹ ಅವರು ‘ನನ್ನ ಪ್ರೀತಿಯ ಕಾರ್ಯಕರ್ತರೇ ಮತ್ತು ಕೊಡಗು-ಮೈಸೂರಿನ ಬಂಧುಗಳೇ, ಟಿಕೆಟ್ ಕೈತಪ್ಪಿದೆ, ಇವನ ಬಳಿ ಹೇಗೆ ಕೆಲಸಕ್ಕಾಗಿ ಕರೆ ಮಾಡುವುದು ಎಂದು ಅಂಜಬೇಡಿ, ಈಗಲೂ ಮತ್ತು ಮಾಜಿಯಾದ ಮೇಲೂ ಕೈಲಾದ ಕೆಲಸ ಮಾಡಿಕೊಡುತ್ತೇನೆ. ಸೋಮವಾರದಿಂದ ಪ್ರಚಾರ ಕಾರ್ಯಕ್ಕೆ ಬರುತ್ತೇನೆ’ ಎಂದು ಮನಮಿಡಿಯುವ ಪೋಸ್ಟ್ ಹಂಚಿಕೊಂಡಿದ್ದಾರೆ.

ಅಂದಹಾಗೆ ಪ್ರತಾಪ್‌ ಸಿಂಹ ಅವರಿಗೆ ಈ ಬಾರಿಯ ಟಿಕೆಟ್ ಕೈತಪ್ಪಿದ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಬೇಸರ ವ್ಯಕ್ತವಾಗುತ್ತಿದೆ.

You may also like

Leave a Comment