ರಾಜ್ಯಾದ್ಯಂತ ಲೋಕಸಭಾ ಕಾವು ಹೆಚ್ಚಾದಂತೆ ಒಬ್ಬೊಬ್ಬ ರಾಜಕೀಯ ನಾಯಕರು ತಮ್ಮದೇ ರೀತಿಯ ಹೇಳಿಕೆಯನ್ನು ನೀಡುತ್ತಿದ್ದಾರೆ. ಇದೀಗ ಶೋಭಾ ಕರಂದ್ಲಾಜೆ ಅವರು ಸಹ ಟಿಕೆಟ್ ವಿಚಾರವಾಗಿ ತಮ್ಮ ನಿಲುವಿನ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: Jayaprakash Hegde: ಜಯಪ್ರಕಾಶ್ ಹೆಗ್ಡೆ ಇಂದು ಕಾಂಗ್ರೆಸ್ ಸೇರ್ಪಡೆ
ರಾಜಕೀಯದಲ್ಲಿ ಗೆಲ್ಲುವ ಸೀಟನ್ನು ಎಲ್ಲರೂ ಕೇಳುತ್ತಾರೆ. ಹೀಗಾಗಿ ಗೊಂದಲ ಸಹಜ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿಯೇ ಮಾಡುತ್ತೇನೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಒಂದೆರಡು ದಿನಗಳಲ್ಲಿ ಬಿಜೆಪಿ ಟಿಕೆಟ್ ಘೋಷಣೆಯಾಗಲಿದೆ. ಪಕ್ಷ ಯಾವುದೇ ತೀರ್ಮಾನ ತೆಗೆದುಕೊಂಡರೂ ನಾವು ಅದಕ್ಕೆ ಬದ್ದ ಎಂದು ತಿಳಿಸಿದ್ದಾರೆ.
ಪ್ರತಿಯೊಬ್ಬ ಬಿಜೆಪಿ ಸಂಸದರು ಕ್ಷೇತ್ರಗಳಲ್ಲೂ ಉತ್ತಮ ಅಭಿವೃದ್ಧಿ ಕೆಲಸಗಳು ನಡೆದಿವೆ. ರಸ್ತೆ, ರೈಲ್ವೆ, ಅಮೃತ ರೈಲ್ವೆ ಯೋಜನೆಗಳು ಜಾರಿಗೆ ಬಂದಿದೆ. ಯಾವುದೇ ಹಳ್ಳಿಗೆ ಹೋದರೂ ಜನ ಅಭಿವೃದ್ಧಿ ಕಂಡಿದ್ದಾರೆ. ಅಭಿವೃದ್ಧಿ ಆಧಾರದಲ್ಲಿ ಮತ ಕೇಳುತ್ತೇವೆ.
ರಾಜ್ಯದ ಎಲ್ಲಾ ಮತ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂಬುದು ನಮ್ಮ ವಿಶ್ವಾಸ. ಪ್ರಧಾನಿ ಮೋದಿ ಅವರನ್ನು ಜನ ಪ್ರೀತಿಸುತ್ತಾರೆ. ಟಿಕೆಟ್ ಕೇಳುವಾಗ ಗೊಂದಲ ಸಹಜ. ಇದಕ್ಕೂ ಚುನಾವಣೆಗೂ ಸಂಬಂಧ ಇಲ್ಲ. ನಾನು ಸ್ಪರ್ಧೆ ಮಾಡಿಯೇ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಆದಾಗ್ಯೂ, ಕೇಂದ್ರ ಚುನಾವಣಾ ಮಂಡಳಿ ಸೀಟು ಹಂಚಿಕೆ ಕುರಿತಾಗಿ ಯಾವುದೇ ತೀರ್ಮಾನ ತೆಗೆದು ಕೊಂಡರೂ ಸಹ ಅದಕ್ಕೆ ನಮ್ಮ ಸಂಪೂರ್ಣ ಒಪ್ಪಿಗೆ ಇರಲಿದೆ ಎಂದು ತಿಳಿಸಿದರು.
