3
ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಭಾರತದಿಂದ ಯುವ ವೃತ್ತಿಪರರಿಗೆ ಯುಕೆಯಲ್ಲಿ ಕೆಲಸ ಮಾಡಲು 3,000 ವೀಸಾಗಳಿಗೆ ಚಾಲನೆ ನೀಡಿ ಖುಷಿ ಸುದ್ದಿ ನೀಡಿದ್ದಾರೆ. ಜಿ20 ಶೃಂಗಸಭೆ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬೆನ್ನಲ್ಲೇ ಈ ಸುದ್ದಿ ಹೊರಬಿದ್ದಿದೆ. 17ನೇ ಆವೃತ್ತಿಯ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಸುನಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಕೆಲವೇ ಗಂಟೆಗಳ ನಂತರ ಡೌನಿಂಗ್ ಸ್ಟ್ರೀಟ್ ರೀಡೌಟ್‍ನಲ್ಲಿ ಈ ಪ್ರಕಟಣೆ ಹೊರಬಿದ್ದಿದೆ.
18-30 ವರ್ಷ ವಯಸ್ಸಿನ ಪದವಿ-ಶಿಕ್ಷಿತ ಭಾರತೀಯ ಪ್ರಜೆಗಳಿಗೆ ಯುಕೆಗೆ ಬರಲು ಮತ್ತು ಎರಡು ವರ್ಷಗಳವರೆಗೆ ಕೆಲಸ ಮಾಡಲು 3,000 ವೀಸಾಗಳನ್ನು ನೀಡುತ್ತದೆ ಎಂದು ಯುಕೆ ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.
