Brij Bhushan Sharan Singh: ನವದೆಹಲಿ: ಬಿಜೆಪಿ (BJP) ಸಂಸದ ಮತ್ತು ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‍ಭೂಷಣ್ (Brij Bhushan Sharan Singh) ವಿರುದ್ಧದ ಲೈಂಗಿಕ ಕಿರುಕುಳ ಆರೋಪದಲ್ಲಿ ಸ್ಫೋಟಕ. ಟ್ವಿಸ್ಟ್ ಒಂದು ದೊರೆತಿದೆ. ಆಪ್ರಾಪ್ತೆ ಎನ್ನಲಾದ ಸಂತ್ರಸ್ತೆ ಆಗ ಅಪ್ರಾಪ್ತೆ ಆಗಿರಲಿಲ್ಲ ಎನ್ನುವ ವಿಚಾರ ಹೊರಬಿದ್ದಿದೆ. ಈ ಮೂಲಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದಂತಾಗಿದೆ.
ಬ್ರಿಜ್‍ಭೂಷಣ್ ವಿರುದ್ಧ ಈ ಹಿಂದೆ ದಾಖಲಿಸಿದ್ದ ಎಫ್‍ಐಆರ್‌ನಲ್ಲಿ ಅಪ್ರಾಪ್ತೆಗೆ ಬ್ರಿಜ್‍ಭೂಷಣ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿತ್ತು. ಆದರೆ ಸಂತ್ರಸ್ತೆಯ ತಂದೆ ಹೇಳಿಕೆ ನೀಡಿ, ‘ ಕಿರುಕುಳಕ್ಕೆ ಒಳಗಾದೆ ಎಂದು ಹೇಳುತ್ತಿರುವ ದಿನಕ್ಕೆ ಆಕೆ ಅಪ್ರಾಪ್ತೆ ಆಗಿರಲಿಲ್ಲ’ ಎಂದು ಹೇಳಿದ್ದಾರೆ. ಇದರಿಂದಾಗಿ ಈಗ ಅಲ್ಲಿನ ಮ್ಯಾಜಿಸ್ಟ್ರೇಟ್ ಎದುರು ಸಂತ್ರಸ್ತೆ ಮತ್ತೊಮ್ಮೆ ಹೇಳಿಕೆ ನೀಡಿದ್ದಾಳೆ. ಹಿಂದೆ ಎಫ್‍ಐಆರ್‌ನಲ್ಲಿ ದಾಖಲಿಸಲಾದ ವಯಸ್ಸಿಗೆ ಸಂಬಂಧಿಸಿದ ಮಾಹಿತಿಯನ್ನು ನಾವು ಮಾರ್ಪಾಡು ಮಾಡಿಸಿದ್ದೇವೆ. ಹೀಗಾಗಿ ಪೋಕ್ಸೋ ಆರೋಪಕ್ಕೆ(POCSO) ಸಂಬಂಧಿಸಿ ಕೋರ್ಟ್ ತೀರ್ಮಾನ ತೆಗೆದುಕೊಳ್ಳಬೇಕಿದೆ ಎಂದು ಸಂತ್ರಸ್ತೆಯ ತಂದೆ ತಿಳಿಸಿದ್ದಾರೆ.
ಇದು ಬ್ರಿಜ್ ಭೂಷಣ್ ಗೆ ಸಿಕ್ಕಿದ ಒಂದು ಪಾಸಿಟಿವ್ ಟ್ವಿಸ್ಟ್ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ನಿನ್ನೆ ಪ್ರತಿಭಟನಾ ನಿರತ ಕ್ರೀಡಾಪಟುಗಳೊಂದಿಗೆ ಕ್ರೀಡಾ ಸಚಿವ ಅನುರಾಗ ಟಾಕೂರ್ ಮಾತನಾಡಿದ್ದರು. ಸುಧೀರ್ ಗ 5 ಗಂಟೆಗಳ ಕಾಲ ನಡೆದ ಮಾತುಕತೆ ಫಲಪ್ರದವಾಗಿದ್ದು ಕ್ರೀಡಾಪಟುಗಳು ಮುಷ್ಕರದಿಂದ ಹಿಂದೆ ಸರಿದಿದ್ದರು. ಜೂ.15 ರೊಳಗೆ ಬ್ರಿಜ್‍ಭೂಷಣ್ ವಿರುದ್ಧ ತನಿಖೆ ಮುಗಿಯಲಿದೆ ಎಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ (Anurag Thakur) ಬುಧವಾರ ತಿಳಿಸಿದ್ದ ಕಾರಣ ಪ್ರತಿಭಟನೆಯನ್ನು ನಿಲ್ಲಿಸಲಾಗಿತ್ತು. ಇದೀಗ ಹೊಸ ವಿದ್ಯಮಾನ ನಡೆದಿದೆ. ಇನ್ನು ಒಂದು ವಾರಗಳ ಸಮಯದೊಳಗೆ ತನಿಖೆ ನಡೆದು ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಬೇಕಾಗಿದೆ. ಅಲ್ಲಿಯವರೆಗೆ ಕ್ರೀಡಾಳುಗಳು ಮುಷ್ಕರವನ್ನು ಹಿಂಪಡೆದಿದ್ದಾರೆ.
ಇದನ್ನು ಓದಿ: 83 ವರ್ಷದ ವೃದ್ದನಿಗೆ 29 ರ ಪ್ರೇಯಸಿ ಆಕೆ ಗರ್ಭಿಣಿ ಆದಾಗ ವೃದ್ದನಿಗೆ ಯಾಕೋ ಡೌಟ್, DNA ಹೇಳಿತ್ತು ಅದೊಂದು ಕರಾಮತ್ತು !
