Home » Siddaramaiah: ಸಿದ್ದರಾಮಯ್ಯ ಸರ್ಕಾರಿ ನಿವಾಸದಲ್ಲಿ ಹೈಅಲರ್ಟ್‌ : 100ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

Siddaramaiah: ಸಿದ್ದರಾಮಯ್ಯ ಸರ್ಕಾರಿ ನಿವಾಸದಲ್ಲಿ ಹೈಅಲರ್ಟ್‌ : 100ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

0 comments
Siddaramaiah

Siddaramaiah: ಕರ್ನಾಟಕ ಮುಂದಿನ ಸಿಎಂ ಆಯ್ಕೆ ಅಂತಿಮ ಹಂತಕ್ಕೆ ತಲುಪಿದ್ದು, ಇಂದು ಸಂಜೆ ನಡೆಯುವ ಶಾಸಕಾಂಗ ಸಭೆಯಲ್ಲಿ ಅಧಿಕೃತವಾಗಿ ಘೋಷಣೆಯಷ್ಟೇ ಬಾಕಿಯಿದೆ. ಈ ಹಿನ್ನಲೆ ಸಿದ್ದು ನಿವಾಸದಲ್ಲಿ 100ಕ್ಕೂ ಹೆಚ್ಚು ಪೊಲೀಸರ ನಿಯೋಜಿಸಿ ಭದ್ರತೆ ಒದಗಿಸಲಾಗಿದೆ

ಮೇ.1ರಂದು ಕರ್ನಾಟಕ ವಿಧಾನ ಸಭೆ ಚುನಾವಣೆ ನಡೆದಿದ್ದು, ಮೇ.13ರಂದು ಫಲಿತಾಂಶ ಹೊರ ಬಿದಿದ್ದು, ಭಾರೀ ಬಹುಮತದೊಂದಿಗೆ ಕಾಂಗ್ರೆಸ್‌ ಗೆಲುವಿನ ಹಾದಿಯನ್ನು ಹಿಡಿದಿದೆ. ಈ ಬೆನ್ನಲ್ಲೆ ರಾಜ್ಯ ರಾಜಕಾರಣದಲ್ಲಿ ಮುಂದಿನ ಸಿಎಂ ಆಯ್ಕೆ ಬಗೆ ಹರಿದಿದೆ. ಹಲವು ಚರ್ಚೆ, ಸಮಲೋಚನೆ ಬಳಿಕ ಮುಂದಿನ ಸಿಎಂ ಆಯ್ಕೆ ಕಸರತ್ತು ಅಂತಿಮ ಹಂತಕ್ಕೆ ತಲುಪಿದ್ದು ಮುಂದಿನ ಸಿಎಂ ಸಿದ್ದರಾಮಯ್ಯ, (Siddaramaiah) ಉಪ ಮುಖ್ಯಮಂತ್ರಿ ಡಿಕೆಶಿವಕುಮಾರ್‌ ಹೆಸರು ಫಿಕ್ಸ್‌ ಆಗಿದೆ.

ಈ ನಿಟ್ಟಿನಲ್ಲಿ ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವಂತ ಸಿದ್ಧರಾಮಯ್ಯ ನಿವಾಸದಲ್ಲಿ ಪೊಲೀಸರಿಂದ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಈಗಾಗಲೇ ಸಿದ್ಧರಾಮಯ್ಯ ಅವರ ಸರ್ಕಾರಿ ನಿವಾಸದ ಸುತ್ತಮುತ್ತ 100ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಅಲ್ಲದೇ ನಿವಾಸದ ಮುಂದೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಅಭಿಮಾನಿಗಳು ಸಂಭ್ರಮದ ಭರದಲ್ಲಿ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ಭದ್ರತೆ ವಹಿಸಲಾಗಿದೆ.

ಕಳೆದ 5 ದಿನಗಳಿಂದ ಸಿಎಂ ಆಯ್ಕೆ ಕಸರತ್ತು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಹತ್ವದ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದ್ದು, ಮುಂದಿನ ಸಿಎಂ ಹಾಗೂ ಡಿಸಿಎಂ ಹುದ್ದೆ ಅಧಿಕೃತ ಹೆಸರು ಘೋಷಣೆ ಆಗುತ್ತದೆ. ಅಲ್ಲದೇ ಡಿಕೆಶಿವಕುಮಾರ್ ಮನೆಯ ಮುಂದೆಯೂ ಪೊಲೀಸರಿಂದ ಹೆಚ್ಚಿನ ಭದ್ರತೆ ವಹಿಸಲಾಗಿದೆ.

 

ಇದನ್ನು ಓದಿ: Madhyapradesh: ನನಗೀಗ ಮಗು ಪಡೇಯೊ ಬಯಕೆ, ಸೋ.. ನನ್ನ ಗಂಡನನ್ನು ಪೆರೋಲ್ ಮೇಲೆ ಮನೆಗೆ ಕಳಿಸಿ! ಜೈಲು ಅಧಿಕಾರಿಗಳಿಗೆ ಪತ್ರ ಬರೆದ ಖೈದಿಯ ಹೆಂಡ್ತಿ!!! 

You may also like

Leave a Comment