Home » BJP: ಬಿಜೆಪಿಗೆ ಬಿಗ್ ಶಾಕ್- ಕೇಂದ್ರ ಮಂತ್ರಿ, ರಾಜ್ಯದ ಪ್ರಬಲ ಸಂಸದರಿಂದ ರಾಜಕೀಯ ನಿವೃತ್ತಿ ಘೋಷಣೆ?!

BJP: ಬಿಜೆಪಿಗೆ ಬಿಗ್ ಶಾಕ್- ಕೇಂದ್ರ ಮಂತ್ರಿ, ರಾಜ್ಯದ ಪ್ರಬಲ ಸಂಸದರಿಂದ ರಾಜಕೀಯ ನಿವೃತ್ತಿ ಘೋಷಣೆ?!

0 comments

BJP: ಬಿಜೆಪಿಯಲ್ಲಿ ರಾಜಕೀಯ ನಿವೃತ್ತಿಯನ್ನು ಘೋಷಿಸುವಂತಹ ಪರಭಾ ಶುರುವಾಗಿ ಬಿಟ್ಟಿದೆ ಅದರಲ್ಲೂ ಕೂಡ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹೈಕಮಾಂಡ್ ಸೂಚನೆಯ ಮೇರೆಗೆ ಅನೇಕ ಸಚಿವರು ಸಂಸದರು ನಾಯಕರು ರಾಜೀನಾಮೆ ಘೋಷಿಸುತ್ತಿದ್ದಾರೆ. ಇದೀಗ ಮತ್ತೊಬ್ಬ ಸಂಸದ, ಕೇಂದ್ರ ಸಚಿವವರು ರಾಜಕೀಯ ನಿವೃತ್ತಿ ಘೋಷಣೆ ಮಾಡುವ ಸುಳಿವು ನೀಡಿದ್ದಾರೆ.

ಹೌದು, ಇತ್ತೀಚೆಗಷ್ಟೆ ಮಾಜಿ ಸಿಎಂ, ಮಾಜಿ ಕೇಂದ್ರ ಸಚಿವ ಹಾಗೂ ಹಾಲಿ ಸಂಸದರಾದ ಡಿ ವಿ ಸದಾನಂದಗೌಡರು(DV Sadananda gowda)ತಮ್ಮ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದರು. ಇದೀಗ ಈ ಬೆನ್ನಲ್ಲೇ ಚಿತ್ರದುರ್ಗ ಸಂಸದ ಹಾಗೂ ಕೇಂದ್ರ ಸಾಮಾಜಿಕ ನ್ಯಾಯ, ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ(A Narayana Swamy) ಅವರು ಪರೋಕ್ಷವಾಗಿ ರಾಜಕೀಯ ನಿವೃತ್ತಿ ಸುಳಿವು ನೀಡಿದ್ದಾರೆ.

ಅಂದ ಹಾಗೆ ನಿನ್ನೆ ಚಿತ್ರದುರ್ಗದ ಕಾಲೇಜು ಒಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನನ್ನ 25 ವರ್ಷ ರಾಜಕೀಯ ಜೀವನದಲ್ಲಿ ಸಾಕಷ್ಟು ಬ್ರಷ್ಟ ವ್ಯವಸ್ಥೆಗಳನ್ನು ನೋಡಿದ್ದೇನೆ, ಎಲ್ಲಿಡೆ ಭ್ರಷ್ಟಾಚಾರ ತಾಂಡವಡುತ್ತಿದೆ. ಇಂತಹ ಹಾಳು ವ್ಯವಸ್ಥೆಯಲ್ಲಿ ನನಗೆ ಇರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ರಾಜಕೀಯ ಬಿಡೋಣ ಎಂದು ತೀರ್ಮಾನಿಸಿದ್ದೇನೆ. ಯಾರಾದರೂ ಯುವಕರು ಬಂದರೆ, ಅವರಿಗೆ ಅವಕಾಶ ಸಿಕ್ಕರೆ ನಾನು ಅದನ್ನು ಸ್ವಾಗತಿಸುತ್ತೇನೆ, ಪಾಲಿಟಿಕ್ಸ್ ನಲ್ಲಿ ನನ್ನಂಥವರು ಇರಬಾರದು ಎನ್ನುವ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಾನು ಟಿಕೆಟ್ ಆಕಾಂಕ್ಷಿ ಅಲ್ಲ ಎಂಬುದನ್ನೂ ಪರೋಕ್ಷವಾಗಿ ಹೇಳಿದ್ದಾರೆ.

You may also like

Leave a Comment