Home » Muniswamy: ಲೋಕಸಭೆಯಲ್ಲಿ ಭದ್ರತಾ ಲೋಪ ಪ್ರಕರಣ- ಪಾಸ್ ಕೊಟ್ಟ ಪ್ರತಾಪ್ ಸಿಂಹಗೆ ಶಿಕ್ಷೆ ?! ಬಿಜೆಪಿ ಸಂಸದರಿಂದ ಅಚ್ಚರಿ ಸ್ಟೇಟ್ಮೆಂಟ್

Muniswamy: ಲೋಕಸಭೆಯಲ್ಲಿ ಭದ್ರತಾ ಲೋಪ ಪ್ರಕರಣ- ಪಾಸ್ ಕೊಟ್ಟ ಪ್ರತಾಪ್ ಸಿಂಹಗೆ ಶಿಕ್ಷೆ ?! ಬಿಜೆಪಿ ಸಂಸದರಿಂದ ಅಚ್ಚರಿ ಸ್ಟೇಟ್ಮೆಂಟ್

1 comment

Muniswamy: ಲೋಕಸಭೆಯೊಳಗೆ ಅಪರಿಚಿತರ ನಮಗೆ ಸ್ಮೋಕ್ ಬಾಂಬ್ ದಾಳಿ ನಡೆಸಿರುವ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಈ ವಿಚಾರ ಸಂಬಂಧ ಭಾರಿ ಚರ್ಚೆಯಾಗುತ್ತಿದ್ದು ತನಿಖೆ ಕೂಡ ನಡೆಯುತ್ತಿದೆ. ಅಲ್ಲದೆ ಸಂಸದ ಪ್ರತಾಪ್ ಸಿಂಹ ಅವರ ಪಾಸ್ ಪಡೆದು ಇವರು ಒಳಗೆ ಹೋಗಿದ್ದರು ಎಂಬ ವಿಚಾರ ಕೂಡ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು ಈ ಹಿನ್ನೆಲೆಯಲ್ಲಿ ಪ್ರತಾಪ್ ಸಿಂಹ ಅವರಿಗೆ ಶಿಕ್ಷೆಯಾಗುತ್ತದೆ ಎಂಬುದುರ ಬಗ್ಗೆ ಬಿಜೆಪಿ ಸಂಸದ ಮುನಿಸ್ವಾಮಿ(Muniswamy) ಹೇಳಿಕೆ ನೀಡಿದ್ದಾರೆ.

 

ಕೋಲಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಮುನಿಸ್ವಾಮಿಯವರು ಭದ್ರತಾ ಲೋಪ ಎಲ್ಲರಿಗೂ ನೋವುಂಟು ಮಾಡಿದೆ. ಇನ್ನು ಕೂಡ ಹೆಚ್ಚಿನ ಭದ್ರತೆ ಬೇಕಾಗಿದೆ. ಉನ್ನತ ಮಟ್ಟದ ತನಿಖೆ ಕೂಡ ನಡೆಯುತ್ತಿದೆ. ಒಂದು ವೇಳೆ ಪ್ರತಾಪ್ ಸಿಂಹ(Prathap Simha) ತಪ್ಪು ಎಸಗಿದ್ದರೆ ಅವರಿಗೂ ಕೂಡ ಶಿಕ್ಷೆ ಆಗುತ್ತದೆ. ದೇಶದ ರಕ್ಷಣೆ ವಿಚಾರದಲ್ಲಿ ಯಾವುದೇ ತಾರತಮ್ಯ ಇಲ್ಲ ಎಂದು ಹೇಳಿದ್ದಾರೆ.

 

ಅಲ್ಲದೆ ದಯವಿಟ್ಟು ಯಾರೂ ಕೂಡ ಇದನ್ನು ರಾಜಕೀಯವಾಗಿ ಪರಿವರ್ತಿಸಬೇಡಿ. ಇದು ರಾಜಕೀಯ ವಿಚಾರವಲ್ಲ, ದೇಶದ ಭದ್ರತೆಯ ವಿಚಾರ. ಮೋದಿಯವರ ಖ್ಯಾತಿಯನ್ನು ಕುಗ್ಗಿಸಲು ಈ ರೀತಿಯ ಪಿತೂರಿಗಳನ್ನು ನಡೆಸಲಾಗುತ್ತದೆ. ಪಂಚರಾಜ್ಯಗಳ ಚುನಾವಣೆಯ ಫಲಿತಾಂಶವನ್ನು ಸಹಿಸಲಾರದೆ ಈ ಷಡ್ಯಂತ್ರವನ್ನು ಮಾಡಲಾಗುತ್ತಿದೆ. ಹೀಗಾಗಿ ಇದರ ಬಗ್ಗೆ ಯಾರು ಚಿಂತೆ ಮಾಡಬೇಡಿ. ಪ್ರಧಾನಿಯವರು ಇರೋತನಕ ದೇಶ ರಕ್ಷಣೆಯಾಗಿ ಸುರಕ್ಷಿತವಾಗಿರುತ್ತದೆ ಎಂದು ಹೇಳಿದ್ದಾರೆ.

You may also like

Leave a Comment