Home » Zameer Ahmed Khan: ‘ಮುಸ್ಲಿಂ ಸ್ಪೀಕರ್’ಗೆ ಬಿಜೆಪಿಯ ನಾಯಕರು ಕೈ ಮುಗಿಯಲೇ ಬೇಕು- ಇದು ಕಾಂಗ್ರೆಸ್ ತಾಕತ್ತು !! ವಿವಾದ ಸೃಷ್ಟಿಸಿದ ಸಚಿವ ಜಮೀರ್

Zameer Ahmed Khan: ‘ಮುಸ್ಲಿಂ ಸ್ಪೀಕರ್’ಗೆ ಬಿಜೆಪಿಯ ನಾಯಕರು ಕೈ ಮುಗಿಯಲೇ ಬೇಕು- ಇದು ಕಾಂಗ್ರೆಸ್ ತಾಕತ್ತು !! ವಿವಾದ ಸೃಷ್ಟಿಸಿದ ಸಚಿವ ಜಮೀರ್

0 comments
Zameer Ahmed Khan

U.T. Khader: ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರೊಬ್ಬರು ಸ್ಪೀಕರ್ ಆಗಿದ್ದಾರೆ. ಇಂದು ಬಿಜೆಪಿ ಶಾಸಕರು ಯುಟಿ ಖಾದರ್(U.T. Khader) ಮುಂದೆ ಕೈಮುಗಿದು ನಮಸ್ಕಾರ ಮಾಡುತ್ತಾರೆ ಎಂಬ ಹೇಳಿಕೆ ಈಗ ವಿವಾದ ಸೃಷ್ಟಿಸಿದೆ.

ತೆಲಂಗಾಣ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಸಂದರ್ಭ ಸಚಿವ ಜಮೀರ್ ಅಹ್ಮದ್ ಖಾನ್ (B. Z. Zameer Ahmed Khan)ಈ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಐದು ಮುಸ್ಲಿಮರಿಗೆ ಪ್ರಮುಖ ಹುದ್ದೆ ನೀಡಲಾಗಿದೆ. ನನಗೆ ಹಾಗೂ ರಹೀಂ ಖಾನ್ ಅವರಿಗೆ ಸಚಿವ ಸ್ಥಾನ ನೀಡಿದ್ದಲ್ಲಿ ಸಲೀಂ ಅಹ್ಮದ್ ಅವರಿಗೆ ವಿಧಾನಪರಿಷತ್ ಮುಖ್ಯ ಸಚೇತಕ ಹುದ್ದೆ ನೀಡಲಾಗಿದೆ. ನಜೀರ್ ಅಹ್ಮದ್ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಮಾಡಲಾಗಿದೆ ಎಂದಿದ್ದಾರೆ.

ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಕಾಂಗ್ರೆಸ್ ಪಕ್ಷ (Congress Party)ಇಂದು ಬಿಜೆಪಿ ಶಾಸಕರು ಯು.ಟಿ ಖಾದರ್ ಮುಂದೆ ಕೈಮುಗಿದು ಸರ್ ನಮಸ್ಕಾರ ಮಾಡುತ್ತಾರೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಡಿದ್ದಾರೆ. ಸಚಿವ ಜಮೀರ್ ಅಹ್ಮದ್ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದು ಕ್ಷಮೆ ಕೇಳಬೇಕೆಂದು ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಒತ್ತಾಯ ಮಾಡಿದ್ದಾರೆ. ಸಂವಿಧಾನಕ್ಕೆ ಅಗೌರವ ನೀಡುವಂಥ ಹೇಳಿಕೆ ನೀಡಿದ ಸಚಿವ ಜಮೀರ್ ಅಹಮ್ಮದ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರೆದು ಬುದ್ಧಿಮಾತು ಹೇಳಬೇಕು ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಆಗ್ರಹಿಸಿದ್ದಾರೆ. ಸ್ಪೀಕರ್ ಪೀಠದ ಕುರಿತಂತೆ ಜಮೀರ್ ಹೇಳಿಕೆಗೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದನದ ಗೌರವ ಉಳಿಯಲು ಸಭಾಧ್ಯಕ್ಷರ ಸ್ಥಾನದ ಗೌರವ ಉಳಿಯಬೇಕಾದರೆ ಆ ಪದ ಬಳಕೆಗೆ ಕ್ಷಮೆ ಕೇಳಲು ಆಗ್ರಹ ಮಾಡಿದ್ದಾರೆ.

You may also like

Leave a Comment