Home » Sukhpal Singh Khaira: ಡ್ರಗ್ಸ್ ಕೇಸ್ ಅಡಿಯಲ್ಲಿ ಕಾಂಗ್ರೆಸ್ ಶಾಸಕ ಅರೆಸ್ಟ್ !!

Sukhpal Singh Khaira: ಡ್ರಗ್ಸ್ ಕೇಸ್ ಅಡಿಯಲ್ಲಿ ಕಾಂಗ್ರೆಸ್ ಶಾಸಕ ಅರೆಸ್ಟ್ !!

1 comment
Sukhpal Singh Khaira

Sukhpal Singh Khaira: ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಬೆಳಿಗ್ಗೆ ಪಂಜಾಬ್‌ನ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ(Sukhpal Singh Khaira) ಅವರನ್ನು ಚಂಡೀಗಢದಲ್ಲಿ ಬಂಧಿಸಲಾಗಿದೆ. ಆದರೆ ಈ ಪ್ರಕರಣವನ್ನು ಶಾಸಕರ ತಲೆಗೆ ಕಟ್ಟಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

Sukhpal Singh Khaira

ಹೌದು, 2015ರ ಡ್ರಗ್ಸ್ ಪ್ರಕರಣದಲ್ಲಿನ ಡ್ರಗ್ಸ್ ಹಾಗೂ ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್‌ನ ಕಾಂಗ್ರೆಸ್ ಶಾಸಕ ಸುಖ್‌ಪಾಲ್ ಸಿಂಗ್ ಖೈರಾ ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಅದಕ್ಕೂ ಮುನ್ನ ಚಂಡೀಗಡದಲ್ಲಿರುವ ಅವರ ಬಂಗಲೆ ಮೇಲೆ ದಾಳಿ ನಡೆಸಲಾಗಿದೆ.

ಅಂದಹಾಗೆ ಜಲಾಲಾಬಾದ್ ಪೊಲೀಸ್ ಠಾಣೆಯ ಅಧಿಕಾರಿಗಳು ಸೆಕ್ಟರ್ 5ರಲ್ಲಿನ ಖೈರಾ ಅವರ ನಿವಾಸದ ಮೇಲೆ ಗುರುವಾರ(ಇಂದು) ಮುಂಜಾನೆ ದಾಳಿ ನಡೆಸಿದರು. ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆಯಡಿ ಈ ಹಿಂದೆ ದಾಖಲಾಗಿದ್ದ ಪ್ರಕರಣದ ಭಾಗವಾಗಿ ಅಂತಾರಾಷ್ಟ್ರೀಯ ಕಳ್ಳಸಾಗಣೆದಾರರೊಂದಿಗೆ ಸಂಪರ್ಕ ಹೊಂದಿದ್ದು, ಅವರಿಗೆ ಆಶ್ರಯ ನೀಡಿದ್ದು, ಮಾದಕವಸ್ತು ಕಳ್ಳಸಾಗಣೆದಾರರಿಂದ ಆರ್ಥಿಕ ಲಾಭ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಇನ್ನು ರೇಡ್ ವೇಳೆ ಕಾಂಗ್ರೆಸ್ ಶಾಸಕ ಖೈರಾ ಅವರು ಫೇಸ್‌ಬುಕ್ ಲೈವ್ ಹೋಗಿದ್ದರು. ಅದರಲ್ಲಿ ಅವರು ಪೊಲೀಸರ ಜತೆ ವಾಗ್ವಾದ ನಡೆಸುವುದು ಕಂಡುಬಂದಿದೆ. ಅವರ ಕುಟುಂಬದ ಸದಸ್ಯರೊಬ್ಬರು ನೇರ ವಿಡಿಯೋ ಪ್ರಸಾರ ಮಾಡಿದ್ದು, ರೇಡ್ ನಡೆಸಲು ವಾರಂಟ್ ತೋರಿಸುವಂತೆ ಮತ್ತು ತಮ್ಮ ಬಂಧನಕ್ಕೆ ಕಾರಣ ತಿಳಿಸುವಂತೆ ಪೊಲೀಸರನ್ನು ಖೈರಾ ಪ್ರಶ್ನಿಸಿದ್ದಾರೆ.

ವಿಡಿಯೋದಲ್ಲಿ ಶಾಸಕ ಖೈರಾ ‘ಪಂಜಾಬ್ ಸರ್ಕಾರ್ ಮುರ್ದಾಬಾದ್’ ಎಂದು ಕೂಗುತ್ತಿದ್ದಾಗ ಪೊಲೀಸ್ ಸಿಬ್ಬಂದಿ ಅವರನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಶಾಸಕರ ಕುಟುಂಬಸ್ಥರು ಬಂಧನವನ್ನು ವಿರೋಧಿಸಿ ಪೊಲೀಸರನ್ನು ತಮ್ಮ ವಾಹನಕ್ಕೆ ಬಲವಂತವಾಗಿ ಹತ್ತಿಸಿಕೊಂಡರು. ನಂತರ ಅವರನ್ನು ಜಲಾಲಾಬಾದ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಈ ಬಂಧನವು ಎಎಪಿ ಮತ್ತು ಕಾಂಗ್ರೆಸ್ ನಡುವಿನ ಸಂಬಂಧವನ್ನು ಹಾಳುಮಾಡುತ್ತದೆ ಎಂದು ಅನೇಕ ರಾಜಕೀಯ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ಏನಿದು ಪ್ರಕರಣ?
ಸದರಿ ಡ್ರಗ್ಸ್‌ ಪ್ರಕರಣವನ್ನು ಮಾರ್ಚ್ 2015 ರಲ್ಲಿ ಜಲಾಲಾಬಾದ್, ಫಾಜಿಲ್ಕಾದಲ್ಲಿ ದಾಖಲಿಸಲಾಗಿತ್ತು, ಇದರ ಪರಿಣಾಮವಾಗಿ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆಯಡಿ 2017 ರಲ್ಲಿ ಒಂಬತ್ತು ವ್ಯಕ್ತಿಗಳಿಗೆ ಶಿಕ್ಷೆ ವಿಧಿಸಲಾಯಿತು. ಪ್ರಕರಣದಲ್ಲಿ ಹೆಚ್ಚುವರಿ ಆರೋಪಿಯಾಗಿ ಸಮನ್ಸ್ ಪಡೆದ ಖೈರಾ ವಿರುದ್ಧದ ವಿಚಾರಣಾ ನ್ಯಾಯಾಲಯದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸ್ಥಗಿತಗೊಳಿಸಿತ್ತು.

https://x.com/PTI_News/status/1707220642049757338?t=9xYEXPAhrmzceHvi7EJKJw&s=08

ಇದನ್ನೂ ಓದಿ: D K Shivkumar: ತಮಿಳು ನಾಡಿಗೆ ನೀರು ಬಿಡಲ್ಲ, ಆದರೂ ನೀರು ಹೋಗುತ್ತೆ !! ಡಿಕೆಶಿ ಮಾಡಿದ್ರು ನೋಡಿ ಹೊಸ ಲಾಜಿಕ್- ಏನದು?

You may also like

Leave a Comment