Home » Congress Guarantee Scheme: ಮಹಿಳೆಯರಿಗೆ ಮತ್ತೊಂದು ಲಾಟ್ರಿ- ‘ಗೃಹಲಕ್ಷ್ಮೀ’ ಜೊತೆಗೆ 500ರೂ ಗೆ LPG ಸಿಲಿಂಡರ್, ಯಜಮಾನಿಗೆ 10,000 ಹಣ – ಕಾಂಗ್ರೆಸ್ ನಿಂದ ಅಚ್ಚರಿಯ ಘೋಷಣೆ!!

Congress Guarantee Scheme: ಮಹಿಳೆಯರಿಗೆ ಮತ್ತೊಂದು ಲಾಟ್ರಿ- ‘ಗೃಹಲಕ್ಷ್ಮೀ’ ಜೊತೆಗೆ 500ರೂ ಗೆ LPG ಸಿಲಿಂಡರ್, ಯಜಮಾನಿಗೆ 10,000 ಹಣ – ಕಾಂಗ್ರೆಸ್ ನಿಂದ ಅಚ್ಚರಿಯ ಘೋಷಣೆ!!

1 comment
Congress Guarantee Scheme

Congress Guarantee Scheme: ಕರ್ನಾಟಕದಲ್ಲಿ ಕಾಂಗ್ರೆಸ್ ಪಂಚ ಗ್ಯಾರಂಟಿ ಸೂತ್ರದ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಇದೀಗ ಕರ್ನಾಟಕ ಮಾದರಿಯಲ್ಲೇ ರಾಜಸ್ಥಾನದಲ್ಲೂ ಕೂಡ ‘ಗೃಹಲಕ್ಷ್ಮಿ’ ಗ್ಯಾರಂಟಿ ಯೋಜನೆಯನ್ನು ಕಾಂಗ್ರೆಸ್‌ ಪ್ರಕಟಿಸಿದೆ.

ಕರ್ನಾಟಕದಲ್ಲಿ ಮನೆ ಯಜಮಾನಿಯರಿಗೆ ಗೃಹಿಣಿಯರಿಗೆ ಮಾಸಿಕ ₹2000 ನೀಡುವಂತೆ ರಾಜಸ್ಥಾನದಲ್ಲಿ ಪಕ್ಷ ಗೆದ್ದಲ್ಲಿ ವಾರ್ಷಿಕ ₹10 ಸಾವಿರ ನೀಡುವ ಘೋಷಣೆ ಮಾಡಲಾಗಿದೆ.ಪಂಚ ರಾಜ್ಯಗಳ ವಿಧಾನಸಭೆ (Assembly Election) ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಕಾಂಗ್ರೆಸ್‌ ರಣತಂತ್ರ ರೂಪಿಸಿದ್ದು, ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದ ರೀತಿಯ ಗ್ಯಾರಂಟಿಗಳ ಘೋಷಣೆ ಮಾಡಿದ್ದು ₹500ಕ್ಕೆ ಸಿಲಿಂಡರ್‌ ಹಾಗೂ ಮನೆ ಒಡತಿಗೆ ವಾರ್ಷಿಕ ₹10 ಸಾವಿರ ನೀಡುವುದಾಗಿ ರಾಜಸ್ತಾನದಲ್ಲಿ ಕಾಂಗ್ರೆಸ್( Congress Guarantee Scheme)ಘೋಷಣೆ ಮಾಡಿದೆ.

ಕಾಂಗ್ರೆಸ್‌ (congress) ಮತ್ತೆ ಅಧಿಕಾರಕ್ಕೆ ಬಂದರೆ ಎರಡೂ ಗ್ಯಾರಂಟಿಗಳ ಅನುಷ್ಠಾನವಾಗಲಿದೆ ಎಂದು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ (Ashok Gehlot) ಝುಂಝುನುನಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಕಾಂಗ್ರೆಸ್‌ ಮತ್ತೆ ಗೆದ್ದರೆ 1.05 ಕೋಟಿ ಕುಟುಂಬಕ್ಕೆ ಗೃಹ ಬಳಕೆ ಸಿಲಿಂಡರ್‌ 500 ರೂಪಾಯಿ ಮತ್ತು ಕುಟುಂಬದ ಒಡತಿಗೆ ಗೃಹ ಲಕ್ಷ್ಮಿ (Gruhalakshmi scheme) ಯೋಜನೆಯಡಿ ವಾರ್ಷಿಕವಾಗಿ ಕಂತು ರೂಪದಲ್ಲಿ 10,000 ರು. ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ

ಇದನ್ನೂ ಓದಿ: Drought Relief: ಬರ ಪರಿಹಾರ ಕುರಿತು ಬಂತು ಬಿಗ್ ಅಪ್ಡೇಟ್- ಇದನ್ನು ಕೇಳಿದ್ರೆ ರಾಜ್ಯದ ಜನತೆಗೆ ಖುಷಿಯೋ ಖುಷಿ

You may also like

Leave a Comment