HD Kumaraswamy: ರಾಜ್ಯ ರಾಜಕೀಯದಲ್ಲಿ ಬಿಜೆಪಿ(BJP) ಹಾಗೂ ಜೆಡಿಎಸ್(JDS) ಪಕ್ಷಗಳು ಭಾರೀ ಸದ್ಧುಮಾಡುತ್ತಿವೆ. ಸದಾ ಕಚ್ಚಾಡುತ್ತಿದ್ದ ಎರಡೂ ಪಕ್ಷಗಳು ಇದೀಗ ಬಾಯಿ, ಬಾಯಿ ಎನ್ನುತ್ತಾ ಮೈತ್ರಿ ಮಾಡಿಕೊಂಡು ಲೋಕ ಸಮರದಲ್ಲಿ ಸೆಣೆಸಲು ಅಣಿಯಾಗಿವೆ. ಆದರೆ ಈ ನಡುವೆ ಮಾಜಿ ಸಿಎಂ ಕುಮಾರಸ್ವಾಮಿ(HD Kumaraswamy) ಅವರು ಬಿಜೆಪಿ ಕುರಿತು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಹೌದು, ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡ ಕೂಡಲೆ ಇಷ್ಟು ದಿನ ಬಿಜೆಪಿ ಅಂದರೆ ಕೆಂಡ ಕಾರುತ್ತಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಅವರು ಇದೀಗ ಬಿಜೆಪಿ ಕುರಿತು ಮೃದು ಸ್ವಭಾವ ತಳೆದಿದ್ದಾರೆ. ಅಲ್ಲದೆ ದೇಶದಲ್ಲಿ ಎಮರ್ಜೆನ್ಸಿ ವಿರುದ್ದ ಜಯಪ್ರಕಾಶ್ ನಾರಾಯಣ್ (ಜೆಪಿ) ನೇತೃತ್ವದಲ್ಲಿ ಜನತಾ ಪಾರ್ಟಿ ಸ್ಥಾಪಿಸಿದರು. ಅದರ ಒಂದು ತುಣಕು ಈಗಿನ ಬಿಜೆಪಿಯಾಗಿದೆ ಎಂದು ಅಚ್ಚರಿಯ ಹೇಳಿಕೆಯನ್ನೂ ನೀಡಿದ್ದಾರೆ.
ಬೆಂಗಳೂರಿನ ಅರಮನೆಯಲ್ಲಿ ಭಾನುವಾರ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಜೆಡಿಎಸ್ ಪಕ್ಷ ಹುಟ್ಟಿದ್ದು ಎಲ್ಲಿ ಎಂದು ಎಲ್ಲರೂ ಕೇಳ್ತಾರೆ. ದೇಶದಲ್ಲಿ ಕಾಂಗ್ರೆಸ್ ಪ್ರಧಾನಿ ಇದಿರಾಗಾಂಧಿ ಹೇರಿದ ಎಮರ್ಜೆನ್ಸಿ ವಿರುದ್ದ ಜನತಾ ಪರಿವಾರ ಹುಟ್ಟಿತು. ಆಗ 5 ಪಾರ್ಟಿ ಸೇರಿ ಜನತಾಪಾರ್ಟಿ ಹುಟ್ಟಿಕೊಂಡಿತು. ಜಯಪ್ರಕಾಶ್ ನಾರಾಯಣ್ (ಜೆಪಿ) ಅವರಿಂದ ಜನತಾ ಪಾರ್ಟಿ ಸ್ಥಾಪನೆಯಾಯಿತು. ಅದರ ತುಣಕು ಇಂದಿನ ಬಿಜೆಪಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಅಲ್ಲದೆ ರಾಜ್ಯದಲ್ಲಿ ಕಾಂಗ್ರೆಸ್‌ನವರು ನಮ್ಮನ್ನ ಮುಖ್ಯಮಂತ್ರಿ ಮಾಡ್ತೀವಿ ಅಂತ ಕೈ ಎತ್ತಿಸಿ ನಡು ನೀರಿನಲ್ಲಿ ಕೈ ಬಿಟ್ಟರು. ಇಂಡಿಯಾ ಒಕ್ಕೂಟಕ್ಕೆ ಕನಿಷ್ಠ ಪಕ್ಷವೂ ಹೆಚ್.ಡಿ.ದೇವೇಗೌಡರಿಗೆ ಆಹ್ವಾನ ನೀಡಲಿಲ್ಲ. ನಿಮಗೆ ಯಾವ ನೈತಿಕತೆ ಇದೆ ದೇವೇಗೌಡರ ಬಗ್ಗೆ ಮಾತಾಡೋಕೆ. ಪಕ್ಷಕ್ಕೆ ದುಡಿದ ಕಾರ್ಯಕರ್ತರಿಂದ ಹಿಡಿದು ಚುನಾವಣೆಯಲ್ಲಿ ಸೋತಿರೋರನ್ನ ಮುಂದಿನ ದಿನಗಳಲ್ಲಿ ವಿಧಾನಸೌಧಕ್ಕೆ ಕರೆದುಕೊಂಡು ಹೋಗ್ತೀನಿ. ಯಾರನ್ನು ಕೈ ಬಿಡೋದಿಲ್ಲ. ಕಾಂಗ್ರೆಸ್ ಆಮಿಷಕ್ಕೆ ಒಳಗಾಗಬೇಡಿ ಎಂದು ಹೇಳಿದರು.
ಮೈತ್ರಿ ಕುರಿತು ಏನಂದ್ರು?
2006ರಲ್ಲಿ ದೇವೇಗೌಡರ ವಿರೋಧವಾಗಿ ಮಾಡಿದ್ದ ದೋಸ್ತಿ ನಿರ್ಧಾರ, ಇವತ್ತು ಅವರ ಒಪ್ಪಿಗೆ ಪಡೆದು ಮಾಡ್ತಿದ್ದೇನೆ. 2006 ರಲ್ಲಿ ಬಿಜೆಪಿಗೆ ಅಧಿಕಾರ ಕೊಡದೇ ಇರೋಕೆ ಕಾಂಗ್ರೆಸ್ ಅವರೇ ಕಾರಣ. ಅವತ್ತು ಶಾಸಕರನ್ನ ಬಸ್ ನಲ್ಲಿ ಕರೆದುಕೊಂಡು ಹೋದವರು ಈಗ ಮುಸ್ಲಿಮರ ರಕ್ಷಣೆಗೆ ನಾನೇ ಇದ್ದೀನಿ ಅಂತ ಹೇಳ್ತಿದ್ದಾರೆ. ನಮ್ಮ ನಿಲುವು ಸರ್ವಜನಾಂಗದ ಶಾಂತಿಯ ತೋಟ ಅಂತ ನಾವು ಹೊಸ ಅಧ್ಯಾಯ ಪ್ರಾರಂಭ ಮಾಡ್ತಿದ್ದೇವೆ. 2006 ರಲ್ಲಿ ಆದ ಅಧ್ಯಾಯ ಮತ್ತೆ ಆಗಬೇಕು ಅಂತ ತೀರ್ಮಾನ ಮಾಡಲಾಗಿದೆ. ನಿಮ್ಮೆಲ್ಲರ ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ ತೀರ್ಮಾನ ಮಾಡ್ತೀವಿ ಎಂದರು.
