HD Revanna: ಮಾಜಿ ಸಚಿವ ಹೆಚ್.ಡಿ.ರೇವಣ್ಣ (HD Revanna) ಅವರು ಎಲ್ಲಾ ವಿಷಯಗಳಲ್ಲಿ ವಾಸ್ತು, ಮೂಢನಂಬಿಕೆ ಮತ್ತು ಜ್ಯೋತಿಷ್ಯವನ್ನು ಬಲವಾಗಿ ಅನುಸರಿಸುವುದಾಗಿ ಬಹಿರಂಗವಾಗಿ ಹೇಳಿದ್ದಾರೆ.
ಸದ್ಯ ಸಂಸದ ಪ್ರಜ್ವಲ್ ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳು ಮತ್ತು ಕಾರ್ಯಕ್ರಮಗಳ ಪರಿಶೀಲನಾ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ರೇವಣ್ಣ, ಹಾಸನದಲ್ಲಿ ನೂತನವಾಗಿ ನಿರ್ಮಿಸಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹತ್ತಾರು ಜನ ಉಳಿಯುವುದರಿಂದ, ಚಿಕಿತ್ಸೆ ಪಡೆಯುವುದರಿಂದ ವಿದ್ಯುತ್ ಪೂರೈಕೆ ಕೇಂದ್ರದಲ್ಲಿ ವಾಸ್ತು ಪ್ರಕಾರವೇ ಕೆಲಸ ಮಾಡಿ ಎಂದು ಶಾಸಕ ಎಚ್.ಡಿ. ರೇವಣ್ಣ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸತ್ಯಭಾಮಾ ಅವರಿಗೆ ಸೂಚನೆ ನೀಡಿದ್ದಾರೆ.
ಅಲ್ಲದೇ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸುವ ಮೊದಲು ನಾನು ವಾಸ್ತುವನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದೇನೆ. ವಾಸ್ತುವನ್ನು ಕಟ್ಟುನಿಟ್ಟಾಗಿ ಅನುಸರಿಸಿ 250 ಕೋಟಿ ರೂಪಾಯಿ ವೆಚ್ಚದಲ್ಲಿ ಹಿಮ್ಸ್ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಹಾಗಾಗಿ ಹಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಉಪಕೇಂದ್ರ ಸ್ಥಾಪಿಸುವಾಗ ವಾಸ್ತು ಪ್ರಕಾರವೇ ನಿರ್ಮಿಸಿ, ಏಕೆಂದರೆ ನಿತ್ಯ ನೂರಾರು ಜನ ಇಲ್ಲಿಗೆ ಭೇಟಿ ನೀಡುತ್ತಾರೆ ಎಂದಿದ್ದಾರೆ.
ಆದರೆ ಅವರ ಪುತ್ರ ಸಂಸದ ಪ್ರಜ್ವಲ್, ಶಾಸಕ ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಸಿ.ಸತ್ಯಬಾಮಾ ಸೇರಿದಂತೆ ಚುನಾಯಿತ ಪ್ರತಿನಿಧಿಗಳು ಸಭೆಯಲ್ಲಿದ್ದರೂ ಒಬ್ಬರು ಅವರ ಸಲಹೆಗೆ ಪ್ರತಿಕ್ರಿಯಿಸಲಿಲ್ಲ.
ತಮ್ಮ ವೃತ್ತಿ ಜೀವನವಾಗಲಿ, ವೈಯಕ್ತಿಕ ಜೀವನವಾಗಲಿ ವಾಸ್ತುವಿಗೆ ಪ್ರಾಮುಖ್ಯತೆ ನೀಡುತ್ತಿದ್ದರು. ರೇವಣ್ಣ ಅವರು ಚುನಾವಣಾ ಕಚೇರಿ ಪ್ರವೇಶಿಸುವಾಗ ಹಾಗೂ ನಾಮಪತ್ರ ಸಲ್ಲಿಸುವಾಗ ವಾಸ್ತು ವಿಚಾರದಲ್ಲಿ ರಾಜಿ ಮಾಡಿಕೊಂಡಿಲ್ಲ. ಎಲ್ಲವೂ ಜ್ಯೋತಿಷಿಗಳ ಸಲಹೆಯಂತೆಯೆ ನಡೆಯುತ್ತಾರೆ. ರೇವಣ್ಣ ಅನೇಕ ಸಂದರ್ಭಗಳಲ್ಲಿ ಬರಿಗಾಲಲ್ಲಿ ಅಧಿಕಾರಿಗಳ ಸಭೆಗಳಿಗೆ ಹಾಜರಾಗಿದ್ದು ಇದೆ .
ಇದನ್ನೂ ಓದಿ: ಇಡೀ ಏರಿಯಾದ ಕರೆಂಟ್ ಕಿತ್ತದ್ದು ಒಂದು ಮೀನು, ಅದಕ್ಕೆ ಸಾಥ್ ನೀಡಿದ್ದು ಒಂದು ಹಕ್ಕಿ – Viral News!
