Karnataka budget 2023: ಸಿಎಂ ಸಿದ್ದರಾಮಯ್ಯನವರು (CM Siddaramaiah) ಕರ್ನಾಟಕದಲ್ಲಿ14 ನೇ ಬಾರಿ ಬಜೆಟ್ (Budget) ಮಂಡಿಸುತ್ತಿದ್ದಾರೆ. 2023-24 ಸಾಲಿನಲ್ಲಿ ಬಜೆಟ್ ಒಟ್ಟು ವೆಚ್ಚ 3,27,747 ಕೋಟಿ ಎಂದು ಉಲ್ಲೇಖಿಸಲಾಗಿದೆ. ಗ್ಯಾರಂಟಿ ಗಳಿಂದಾಗಿ ಸಾಲದ ಪ್ರಮಾಣವು ಹೆಚ್ಚಳವಾಗಲಿದೆ ಎಂಬ ಮಾತು ಕೇಳಿ ಬರುತ್ತಿತ್ತು. ಆದರೆ, ಈ ಬಾರಿ ಸರ್ಕಾರದ ಆದಾಯದಲ್ಲಿ ಶೇ.26ರಷ್ಟನ್ನು ಸಾಲದಿಂದ ಸಂಗ್ರಹ ಮಾಡಿದೆ.
2023-24 ನೇ ಸಾಲಿನ ಬಜೆಟ್‌ನಲ್ಲಿ (Karnataka budget 2023) ಯಾವ ವಲಯಕ್ಕೆ ಎಷ್ಟು ರೂಪಾಯಿ ಖರ್ಚು ಮಾಡಲಾಗಿದೆ ಎಂಬುದನ್ನು ಈ ಕೆಳಗೆ ಮಾಹಿತಿ ನೀಡಲಾಗಿದೆ.
ರಾಜ್ಯ ಸರ್ಕಾರದ ಆದಾಯದ ಮೂಲಗಳು ಈ ರೀತಿ ಇದೆ:
ಅಬಕಾರಿ ಇಲಾಖೆಯಿಂದ 36.000 ಕೋಟಿ ರೂ. ವಾಣಿಜ್ಯ ತೆರಿಗೆಗಳಿಂದ (ಜಿಎಸ್‌ಟಿ ಸೇರಿ) 1.1000 ಕೋಟಿ ಆದಾಯದ ನಿರೀಕ್ಷೆಯಿದೆ. ಅದೇ ರೀತಿ ನೋಂದಾಣಿ ಮತ್ತು ಮುದ್ರಾಂಕ ಇಲಾಖೆಯಿಂದ 25000 ಕೋಟಿ ರೂ. ಆದಾಯ ನಿರೀಕ್ಷೆಯಿದೆ . ಮೋಟಾರು ವಾಹನ ತೆರಿಗೆಗಳಿಂದ 11.500 ಕೋಟಿ ರೂ ಹಾಗೂ ಇತರೆ ತೆರಿಗೆಯಿಂದ 2153 ಕೋಟಿ ರೂ. ಗಣಿ ಮತ್ತು ಭೂ ವಿಜ್ಞಾನದಿಂದ 9.000 ಕೋಟಿ ರೂ ಆದಾಯ ಬರಬಹುದು ಎಂಬ ನಿರೀಕ್ಷೆ ಇದೆ.
ಈ ಸಾಲಿನ ರಾಜಸ್ವ ಜಮೆಗಳು ಒಟ್ಟು 238410 ಕೋಟಿ ರೂಪಾಯಿ. ಇದರಲ್ಲಿ ರಾಜ್ಯದ ಒಟ್ಟು ಸ್ವಂತ ತೆರಿಗೆ ರಾಜಸ್ವವು (ಜಿಎಸ್‌ಟಿ ಒಳಗೊಂಡಂತೆ) 175653 ಕೋಟಿ ಹಾಗು ತೆರಿಗೆಯೇತರ ರಾಜಸ್ವ ಗಳಿಂದ 12500 ಕೋಟಿ ರೂಪಾಯಿ ಸಂಗ್ರಹಿಸಬಹುದೆಂದು ನಿರೀಕ್ಷಿಸಲಾಗಿದೆ. ಕೇಂದ್ರ ತೆರಿಗೆಯ ಪಾಲಿನ ರೂಪದಲ್ಲಿ 37,252 ಕೋಟಿ ರೂಗಳನ್ನು ಹಾಗೂ ಕೇಂದ್ರ ಸರಕಾರದಿಂದ ಸಹಾಯಾನುದಾನ ರೂಪದಲ್ಲಿ 13,005 ಕೋಟಿ ರೂಗಳನ್ನು ಪಡೆಯುವುದನ್ನು ರಾಜ್ಯ ಸರಕಾರ ನಿರೀಕ್ಷಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯ ಸರ್ಕಾರದ ವೆಚ್ಚಗಳು (ಅನುದಾನ) ಈ ರೀತಿ ಇದೆ:
*ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ: 24166 ಕೋಟಿ ರೂ ಅನುದಾನ ಹಂಚಿಕೆ.
*ಇಂಧನ ಇಲಾಖೆ 22.773 ಕೋಟಿ ರೂ ವೆಚ್ಚ
*ನಗರಾಭಿವೃದ್ಧಿ ಮತ್ತು ನೀರಾವರಿ ಇಲಾಖೆ: 19.44 ಕೋಟಿ ರೂ.
* ಕೃಷಿ ಮತ್ತು ತೋಟಗಾರಿಕೆ ಇಲಾಖೆ: 5 860 ಕೋಟಿ ರೂ.
*ಶಿಕ್ಷಣ ಇಲಾಖೆ : 37597 ಕೋಟಿ ರೂ
*ಸಮಾಜ ಕಲ್ಯಾಣ ಇಲಾಖೆ: 11.173 ಕೋಟಿ ರೂ.
*ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ: 10460 ಕೋಟಿ ರು ಅನುದಾನ ಹಂಚಿಕೆ.
*ರೀಲೋಕೋಪಯೋಗಿ ಇಲಾಖೆಗೆ: 10143 ಕೋಟಿ ರೂ.
*ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ: 18 .38 ಕೋಟಿ
*ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ 16. 638 ಕೋಟಿ ರೂ ವೆಚ್ಚ
*ಕಂದಾಯ ಇಲಾಖೆಗೆ: 16167 ಕೋಟಿ ರೂ ಅನುದಾನ ಹಂಚಿಕೆ
*ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ 324 ಕೋಟಿ ರೂ ಹಾಗೂ
*ಆರೋಗ್ಯ ಮತ್ತು ಕುಟುಂಬ ಇಲಾಖೆಗೆ 14 950 ಕೋಟಿ ರೂ ವೆಚ್ಚ.
ಇದನ್ನು ಓದಿ: Karnataka Budget 2023: Swiggy, Zomato ನಂತಹ ಡೆಲಿವರಿ ಬಾಯ್ಸ್ ಗೆ ತಲಾ 4 ಲಕ್ಷ ರೂಪಾಯಿ…… ಸರ್ಕಾರದಿಂದ ಮೆಗಾ ಕೊಡುಗೆ !
