Home » Indian Congress: ಇಸ್ರೇಲ್-ಪ್ಯಾಲೇಸ್ತೀನ್ ಯುದ್ಧದಲ್ಲಿ ಪ್ಯಾಲೇಸ್ತೀನ್ ಗೆ ನಮ್ಮ ಬೆಂಬಲ ಎಂದ ಕಾಂಗ್ರೆಸ್ !! ಭಾರೀ ಅಚ್ಚರಿ ಮೂಡಿಸಿದ ನಡೆ

Indian Congress: ಇಸ್ರೇಲ್-ಪ್ಯಾಲೇಸ್ತೀನ್ ಯುದ್ಧದಲ್ಲಿ ಪ್ಯಾಲೇಸ್ತೀನ್ ಗೆ ನಮ್ಮ ಬೆಂಬಲ ಎಂದ ಕಾಂಗ್ರೆಸ್ !! ಭಾರೀ ಅಚ್ಚರಿ ಮೂಡಿಸಿದ ನಡೆ

2 comments
Indian Congress

Indian Congress: ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ ಯುದ್ಧ ಇಡೀ ವಿಶ್ವವನ್ನೇ ಗಮನಸೆಳೆದಿದೆ. ಹಲವು ರಾಷ್ಟ್ರಗಳು ಇಸ್ರೇಲ್ ಪರ ನಿಂತಿವೆ. ಅಂತೆಯೇ ಭಾರತ ಕೂಡ ಇಸ್ರೇಲ್ ಪರ ಎಂದಿಗೂ ಇದ್ದೇವೆ ಎಂದು ಹೇಳಿದೆ. ಆದರೆ ಈ ನಡುವೆ ಅಚ್ಚರಿ ಎಂಬಂತೆ ಕಾಂಗ್ರೆಸ್‌(Indian Congress)ಕಾರ್ಯಕಾರಿ ಸಮಿತಿ (CWC) ಪ್ಯಾಲೆಸ್ಟೈನ್‌ ಹಕ್ಕುಗಳನ್ನು (Palestinian Rights) ಬೆಂಬಲಿಸಿ ನಿರ್ಣಯ ಅಂಗೀಕರಿಸಿದೆ.

ಹೌದು, ಇಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯುಸಿ) ಸಭೆಯಲ್ಲಿ ಪ್ಯಾಲೆಸ್ತೀನ್-ಇಸ್ರೇಲ್ ಸಂಘರ್ಷದ ಬಗ್ಗೆ ದುಃಖ ವ್ಯಕ್ತಪಡಿಸಿ ಕದನ ವಿರಾಮಕ್ಕೆ ಒತ್ತಾಯಿಸಿದ ನಿರ್ಣಯ ಅಂಗೀಕರಿಸಲಾಯಿತು. ಸಭೆಯಲ್ಲಿ ಕಳೆದ ಎರಡು ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟ ಮಧ್ಯಪ್ರಾಚ್ಯದಲ್ಲಿ ನಡೆದ ಯುದ್ಧದ ಬಗ್ಗೆ ದುಃಖವನ್ನು ವ್ಯಕ್ತಪಡಿಸಿತು. ಭೂಮಿ, ಸರ್ಕಾರ ಮತ್ತು ಘನತೆ ಮತ್ತು ಗೌರವದಿಂದ ಬದುಕಲು ಪ್ಯಾಲೇಸ್ಟಿಯನ್ ಜನರ ಹಕ್ಕುಗಳಿಗಾಗಿ ಕಾಂಗ್ರೆಸ್‌ ನೀಡಿದ ದೀರ್ಘಕಾಲದ ಬೆಂಬಲವನ್ನು ಪುನರುಚ್ಚರಿಸುತ್ತದೆ ಎಂದು ಹೇಳಿದೆ.

ಇದನ್ನೂ ಓದಿ: Moodbidre: ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಉದ್ಯೋಗಿ

ಅಲ್ಲದೆ ಕಾಂಗ್ರೆಸ್ ಅಂಗೀಕರಿಸಿದ ನಿರ್ಣಯದ 7 ನೇ ಅಂಶವು ಹೀಗೆ ಹೇಳುತ್ತದೆ, ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದ ಯುದ್ಧ ಮತ್ತು ಸಾವಿರಕ್ಕೂ ಹೆಚ್ಚು ಜನರ ನಷ್ಟದ ಬಗ್ಗೆ CWC ತನ್ನ ಆಳವಾದ ದುಃಖ ವ್ಯಕ್ತಪಡಿಸುತ್ತದೆ. ಪ್ಯಾಲೇಸ್ತೀನ್ ಜನರ ಭೂಮಿ, ಸ್ವ-ಆಡಳಿತ ಮತ್ತು ಸ್ವಾಭಿಮಾನ ಮತ್ತು ಘನತೆಯಿಂದ ಬದುಕುವ ಹಕ್ಕುಗಳಿಗಾಗಿ ತನ್ನ ದೀರ್ಘಾವಧಿಯ ಬೆಂಬಲವನ್ನು CWC ಪುನರುಚ್ಚರಿಸುತ್ತದೆ. ಸಿಡಬ್ಲ್ಯೂಸಿ ತಕ್ಷಣದ ಕದನ ವಿರಾಮ ಮತ್ತು ಪ್ರಸ್ತುತ ಸಂಘರ್ಷಕ್ಕೆ ಕಾರಣವಾಗುವ ಅನಿವಾರ್ಯ ಸಮಸ್ಯೆಗಳು ಸೇರಿದಂತೆ ಎಲ್ಲಾ ಬಾಕಿ ಉಳಿದಿರುವ ವಿಷಯಗಳ ಕುರಿತು ಮಾತುಕತೆಗಳನ್ನು ಪುನರಾರಂಭಿಸಲು ಕರೆ ನೀಡುತ್ತದೆ ಎಂದು ಹೇಳಲಾಗಿದೆ.

ಅಂದಹಾಗೆ ಶನಿವಾರ ಹಮಾಸ್ ಉಗ್ರರು (Hamas Militants) ತಮ್ಮ ನಿಯಂತ್ರಣದಲ್ಲಿರುವ ಗಾಜಾಪಟ್ಟಿಯಿಂದ (Gaza Strip) ಇಸ್ರೇಲ್ (Israel) ಮೇಲೆ ಬರೋಬ್ಬರಿ 5,000 ರಾಕೆಟ್ ದಾಳಿ (Rocket Attack) ಮಾಡಿದ್ದರು. ಈ ದಾಳಿಯ ಬೆನ್ನಲ್ಲೇ ಇಸ್ರೇಲ್ ಈಗ ಯುದ್ಧ (War) ಘೋಷಣೆ ಮಾಡಿದೆ.

ಇದನ್ನೂ ಓದಿ: Yashvanth gruji: ರಾಜ್ಯದ ಈ 8 ಜನ ರಾಜಕಾರಣಿಗಳು ಸದ್ಯದಲ್ಲೇ ಜೈಲು ಸೇರ್ತಾರೆ- ಸ್ಪೋಟಕ ಭವಿಷ್ಯ ನುಡಿದ ಯಶ್ವಂತ್ ಗುರೂಜಿ!!

You may also like

Leave a Comment