Congress: ಇಷ್ಟು ದಿನ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಬಿಜೆಪಿಯ(BJP) ಪ್ರಭಾವಿ ನಾಯಕರು ಪಕ್ಷ ಬಿಟ್ಟು ಬೇರೆ ಬೇರೆ ಪಕ್ಷಗಳಿಗೆ ಸೇರಿ ಶಾಕ್ ಕೊಡುತ್ತಿದ್ದರು. ಆದರೀಗ ಸದ್ಯ ಕಾಂಗ್ರೆಸ್(Congress) ಸರದಿ ಶುರುವಾಗಿದೆ. ಇಬ್ಬರು ಪ್ರಭಾವಿ ನಾಯಕರೀಗ ಪಕ್ಷ ಬಿಟ್ಟು ಬಿಜೆಪಿ ಸೇರಿದ್ದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಹೌದು, ಕೆಲವು ರಾಜ್ಯಗಳು ಇನ್ನೇನು ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆಯನ್ನು ಎದುರಿಸಲಿವೆ. ಅದರಲ್ಲಿ ರಾಜಸ್ಥಾನ(Rajastana) ಕೂಡ ಒಂದು. ಇಲ್ಲೆಲ್ಲಾ ಪಕ್ಷಗಳು ಚುನಾವಣೆ ಗೆಲ್ಲಲು ಭರ್ಜರಿ ತಯಾರಿ ನಡೆಸುತ್ತಿವೆ. ಆದರೀಗ ಈ ನಡುವೆ ಕಾಂಗ್ರೆಸ್‌ಗೆ ಡಬಲ್ ಶಾಕ್ ಎದುರಾಗಿದೆ. ಯಾಕೆಂದ್ರೆ ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ಗೆಲ್ಲಲು ಕಾಂಗ್ರೆಸ್ ಕಸರತ್ತು ನಡೆಸುತ್ತಿರುವ ಬೆನ್ನಲ್ಲೇ ಇಬ್ಬರು ಪ್ರಮುಖ ನಾಯಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡಿದ್ದಾರೆ.
ರಾಜಸ್ಥಾನ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕಿ ಜ್ಯೋತಿ ಮಿರ್ಧಾ ಹಾಗೂ ಸವಾಯಿ ಸಿಂಗ್ ಚೌಧರಿ ಪಕ್ಷ ತೊರೆದು ಬಿಜೆಪಿ ಸೇರಿಕೊಂಡಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಸ್ಥಾನ ಕಾಂಗ್ರೆಸ್ ತೀವ್ರ ಸಂಕಷ್ಟ ಎದುರಿಸುತ್ತಿದೆ. ಒಂದೆಡೆ ಅಶೋಕ್ ಗೆಹ್ಲೋಟ್ ಬಣ, ಮತ್ತೊಂದೆಡೆ ಸಚಿನ್ ಪೈಲೆಟ್ ಬಣ. ಎರಡೂ ಬಣದಲ್ಲಿ ಗುರುತಿಸಿಕೊಳ್ಳಲು ಇಷ್ಟವಿಲ್ಲದ ನಾಯಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಹೀಗಾಗಿ ನಾಯಕರು ಪಕ್ಷಾಂತರದ ನಿರ್ಧಾರ ಕೈಗೊಳ್ಳುತ್ತಿದ್ದು ಬಣಗಳಿಂದ ಮುಕ್ತಿ ಹೊಂದಲು ಬಯಸುತ್ತಿದ್ದಾರೆ.
ಅಂದಹಾಗೆ ಜ್ಯೋತಿ ಮಿರ್ಧಾ ಹಾಗೂ ಸವಾಯಿ ಸಿಂಗ್ ಚೌಧರಿ ದೆಹಲಿಯಲ್ಲಿ ಬಿಜೆಪಿ ಸೇರಿಕೊಂಡಿದ್ದಾರೆ. ರಾಜಸ್ಥಾನ ಬಿಜೆಪಿ ರಾಜ್ಯಾಧ್ಯಕ್ಷ ಸಿಪಿ ಜೋಶಿ(C P Joshi) ಹಾಗೂ ದೆಹಲಿಯ ಕೆಲ ನಾಯಕರ ಸಮ್ಮುಖದಲ್ಲಿ ಇಬ್ಬರು ನಾಯಕರು ಬಿಜೆಪಿ ಸೇರಿಕೊಂಡಿದ್ದಾರೆ. ರಾಜಸ್ಥಾನದಲ್ಲಿ ಭರ್ಜರಿ ಪ್ರಚಾರ ಕಾರ್ಯ ಆರಂಭಿಸಿರುವ ಬಿಜೆಪಿ ಪರಿವರ್ತನಾ ರ್ಯಾಲಿ ಆಯೋಜಿಸಿದೆ. ಇದಕ್ಕಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾರನ್ನು ಆಹ್ವಾನಿಸಿದೆ.
