Home » Nitin Gadkari: ‘2024 ರ ಲೋಕಸಭಾ ಚುನಾವಣೆಯಲ್ಲಿ ಇದಾವುದು ಇರೋದಿಲ್ಲ, ನಾವು ಅದಾವುದನ್ನೂ ಹಾಕುವುದಿಲ್ಲ’ !! ಅಚ್ಚರಿಯ ಹೇಳಿಕೆ ನೀಡಿದ ನಿತಿನ್ ಗಡ್ಕರಿ !

Nitin Gadkari: ‘2024 ರ ಲೋಕಸಭಾ ಚುನಾವಣೆಯಲ್ಲಿ ಇದಾವುದು ಇರೋದಿಲ್ಲ, ನಾವು ಅದಾವುದನ್ನೂ ಹಾಕುವುದಿಲ್ಲ’ !! ಅಚ್ಚರಿಯ ಹೇಳಿಕೆ ನೀಡಿದ ನಿತಿನ್ ಗಡ್ಕರಿ !

1 comment

Nitin Gadkari: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ‘2024 ರ ಲೋಕಸಭಾ ಚುನಾವಣೆಯಲ್ಲಿ ಇದಾವುದು ಇರೋದಿಲ್ಲ, ನಾವು ಅದಾವುದನ್ನೂ ಹಾಕುವುದಿಲ್ಲ’ ಎಂಬ ಹೇಳಿಕೆಯ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಷ್ಟಕ್ಕೂ ಇದರ ಅರ್ಥವೇನು? ಈ ಮಾಹಿತಿ ಓದಿ!!!.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪ್ರದೇಶದಲ್ಲಿ ಬ್ಯಾನರ್ ಮತ್ತು ಪೋಸ್ಟರ್‌ಗಳನ್ನು (poster) ಹಾಕುವುದಿಲ್ಲ‌‌. ಚಹಾ ಸಹ ನೀಡುವುದಿಲ್ಲ, ನೀವು ಮತ ಹಾಕಲು ಬಯಸಿದರೆ ಮತ ಚಲಾಯಿಸಿ. ಇಲ್ಲದಿದ್ದರೆ ಮತ (Vote) ಹಾಕಬೇಡಿ ಎಂದು ಗಡ್ಕರಿ ಹೇಳಿದ್ದಾರೆ.

ಶುಕ್ರವಾರ ಕೇಂದ್ರ ಸಚಿವ ಗಡ್ಕರಿ ಅವರು ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯಲ್ಲಿ ಸಿಮೆಂಟ್‌ ಕಾಂಕ್ರೀಟ್‌ ರಸ್ತೆಯನ್ನು ಉದ್ಘಾಟಿಸಿದ್ದು, ಈ ವೇಳೆ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯ ಕುರಿತು ಮಾತನಾಡಿದರು. ಲೋಕಸಭಾ ಕ್ಷೇತ್ರವಾದ ನಾಗುರದಲ್ಲಿ ಪ್ರಚಾರದ ಸಮಯದಲ್ಲಿ ಬ್ಯಾನರ್, ಪೋಸ್ಟರ್ ಹಾಕುವುದಿಲ್ಲ, ಜನರಿಗೆ ಚಹಾ ನೀಡಲಾಗುವುದಿಲ್ಲ. ನಾನು ಲಂಚ ತೆಗೆದುಕೊಳ್ಳುವುದಿಲ್ಲ ಮತ್ತು ಹಾಗೆ ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ. ಪ್ರಾಮಾಣಿಕವಾಗಿ ಜನರ ಸೇವೆ ಮಾಡುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದರು.

ಇದನ್ನೂ ಓದಿ: Gruhalakshmi scheme: ಇನ್ನೂ ಗೃಹಲಕ್ಷ್ಮೀ ಹಣ ಬಂದಿಲ್ಲವೇ? ಹಾಗಿದ್ರೆ ಇಲ್ಲಿ ಹೇಳಿದಂತೆ ಮಾಡಿ, 2ಕಂತಿನ ಹಣವನ್ನು ಒಟ್ಟೊಟ್ಟಿಗೆ ಪಡೆಯಿರಿ

You may also like

Leave a Comment