Dr. G parameshwar: ರಾಜ್ಯದಲ್ಲಿ ಇನ್ನು ಮುಂದೆ ಪೋಲೀಸರು(Police) ಸಮವಸ್ತ್ರ ಧರಿಸಿದ ಸಂದರ್ಭದಲ್ಲಿ ಕುಂಕುಮ, ವಿಭೂತಿ ಹಚ್ಚುವಂತಿಲ್ಲ ಎಂದು ರಾಜ್ಯ ಪೊಲೀಸರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್(Home Minister parameshwar) ಸೂಚನೆ ನೀಡಿದ್ದಾರೆ ಎಂಬ ಸುದ್ದಿ ಬೆಳಿಗ್ಗೆ ಇಂದ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಆದರೆ ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವರು ನಾನು ಈ ರೀತಿಯ ಯಾವುದೇ ಸೂಚನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹೌದು, ರಾಜ್ಯದಲ್ಲಿ ಇನ್ನು ಮುಂದೆ ಪೋಲೀಸರು ಸಮವಸ್ತ್ರ ಧರಿಸಿದ ಸಂದರ್ಭದಲ್ಲಿ ಕುಂಕುಮ, ವಿಭೂತಿ ಹಚ್ಚುವಂತಿಲ್ಲ ಎಂಬ ಹೇಳಿಕೆ ಕುರಿತು ಗೃಹ ಸಚಿವ ಡಾ. ಜಿ ಪರಮೇಶ್ವರ್ (Dr. G parameshwar) ಅವರು ಸ್ಪಷ್ಟೀಕರಣ ನೀಡಿದ್ದು, ನಾನು ಈ ರೀತಿಯಾಗಿ ಯಾವುದೇ ಹೇಳಿಕೆಯಾಗಲಿ, ಸೂಚನೆಯಾಗಲಿ ನೀಡಿಲ್ಲ. ಇಂತಹ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಅಂದಹಾಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪೋಲೀಸರು ಕುಂಕುಮ, ಬೊಟ್ಟು, ವಿಭೂತಿ ಏನುಬೇಕಾದರೂ ಇಡಬಹುದು. ಒಟ್ಟಿನಲ್ಲಿ ಯೂನಿಫಾರ್ಮ್ ನಲ್ಲಿ ಇದ್ದರೆ ಆಯಿತು. ಅಲ್ಲದೆ ಅವರು ಅವರಿಗಿರುವ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಿದರೆ ಸಾಕು ಎಂದು ಹೇಳಿದ್ದಾರೆ.
ಇದನ್ನು ಓದಿ: happy heart: ಕೊಲೆಸ್ಟ್ರಾಲ್ ದೇಹದಲ್ಲಿ ಹೆಚ್ಚಾದಾಗ ದೇಹದಲ್ಲಿ ಈ ರೀತಿಯಾಗಿ ಬದಲಾವಣೆಗಳು ಆಗುತ್ತದೆ !
