Home » Sanatana Dharma row: ‘ಆ’ ಸತ್ಯಗಳನ್ನು ಮುಚ್ಚಿಡಲು ಮೋದಿ, ಮತ್ತವರ ಕಂಪೆನಿ ‘ಸನಾತನ ಧರ್ಮ’ ಬಳಸುತ್ತಿದೆ- ಉದಯನಿಧಿಯ ಸ್ಪೋಟಕ ಹೇಳಿಕೆ !!

Sanatana Dharma row: ‘ಆ’ ಸತ್ಯಗಳನ್ನು ಮುಚ್ಚಿಡಲು ಮೋದಿ, ಮತ್ತವರ ಕಂಪೆನಿ ‘ಸನಾತನ ಧರ್ಮ’ ಬಳಸುತ್ತಿದೆ- ಉದಯನಿಧಿಯ ಸ್ಪೋಟಕ ಹೇಳಿಕೆ !!

5 comments

Sanatana Dharma row : ಮಣಿಪುರದಲ್ಲಿ ಪ್ರಚೋದಿತ ಗಲಭೆಯಿಂದ 250 ಕ್ಕೂ ಹೆಚ್ಚು ಮಂದಿ ಸಾವು ನೋವು ಸಂಭವಿಸಿದೆ. ಈ ನಡುವೆ, 7.5 ಲಕ್ಷ ಕೋಟಿ ಭ್ರಷ್ಟಾಚಾರ ಸೇರಿದಂತೆ ಇನ್ನಿತರ ಸತ್ಯವನ್ನು ಮರೆ ಮಾಚುವ ನಿಟ್ಟಿನಲ್ಲಿ ಜನರ ಗಮನವನ್ನು ಬೇರೆಡೆಗೆ ನೀಡುವಂತೆ ಮಾಡುವ ಉದ್ದೇಶದಿಂದ ಮೋದಿ ಮತ್ತು ಅವರ ಕಂಪನಿಯು ಸನಾತನ ತಂತ್ರವನ್ನು ಬಳಕೆ ಮಾಡುತ್ತಿದೆ ಉದಯನಿಧಿ(Udhayanidhi stalin)ಅವರು ಹೇಳಿದ್ದಾರೆ.

‘ಸನಾತನ ಧರ್ಮ ನಿರ್ಮೂಲನೆ’ (Sanatana Dharma row)ಹೇಳಿಕೆ ವಿರುದ್ದ ಬಲವಾದ ಟೀಕೆಗಳು ಬಂದರೂ ಸಹ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ತಮ್ಮ ಹೇಳಿಕೆಯಿಂದ ಹಿಂದೆ ಸರಿಯದೆ ತಮ್ಮಬಗ್ಗೆ ವಿರೋಧ ಭುಗಿಲೆದ್ದರು ಕೂಡ ಉದಯನಿಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸನಾತನ ಧರ್ಮದ ಕುರಿತು ವಿವಾದಾತ್ಮತ ಹೇಳಿಕೆ ನೀಡಿ ಭಾರಿ ಸುದ್ದಿಯಾಗುತ್ತಿದೆ. ಸಹೋದ್ಯೋಗಿ ಉದಯನಿಧಿ ಸ್ಟಾಲಿನ್ ಬೆನ್ನಿಗೆ ನಿಂತಿರುವ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ಉದಯನಿಧಿಯನ್ನು ಗುರಿಯಾಗಿಸಿಕೊಂಡು ಪ್ರಧಾನಿ ಮೋದಿ ವಾಗ್ದಾಳಿ ಸರಿಯಲ್ಲ ಎಂದು ಹೇಳಿದ್ದಾರೆ.

ಉದಯನಿಧಿ ಸ್ಟಾಲಿನ್ ಅವರ ಸನಾತನ ಧರ್ಮ ವಿರೋಧಿ ಹೇಳಿಕೆಗಳ ಕುರಿತು ದೇಶಾದ್ಯಂತ ತೀವ್ರ ಗದ್ದಲದ ನಡುವೆ, ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ‘ತಮ್ಮ ಮಗ ಸನಾತನ ಧರ್ಮದಲ್ಲಿ ಬೋಧಿಸಲಾದ “ಅಮಾನವೀಯ ತತ್ವಗಳ” ಬಗ್ಗೆ ಮಾತಾಡಿದ್ದಾರೆ. ಅವರು ಯಾವುದೇ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅಪರಾಧ ಮಾಡುವ ಉದ್ದೇಶವಿಲ್ಲದೆ ಪರಿಶಿಷ್ಟ ಜಾತಿಗಳು, ಬುಡಕಟ್ಟುಗಳು ಮತ್ತು ಮಹಿಳೆಯರ ವಿರುದ್ಧ ತಾರತಮ್ಯ ಮಾಡುವ ಸನಾತನ ತತ್ವಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಉದಯನಿಧಿಯವರು ಕಳೆದ ಒಂಬತ್ತು ವರ್ಷಗಳಲ್ಲಿ ಪ್ರಧಾನಿ ಏನು ಕೂಡ ಮಾಡಿಲ್ಲ ಎಂದು ಹೇಳಿದ್ದಾರೆ. ನೋಟುಗಳನ್ನು ರದ್ದುಗೊಳಿಸುತ್ತಾರೆ, ಗುಡಿಸಲುಗಳನ್ನು ಮರೆಮಾಡಲು ಗೋಡೆ ನಿರ್ಮಿಸುತ್ತಾರೆ. ಹೊಸ ಸಂಸತ್ತಿನ ಕಟ್ಟಡವನ್ನು ನಿರ್ಮಿಸುತ್ತಾರೆ. ಅಷ್ಟೆ ಅಲ್ಲದೆ ಅಲ್ಲಿ ಸೆಂಗೋಲ್ ಅನ್ನು ಪ್ರತಿಷ್ಠಾಪಿಸುತ್ತಾರೆ. ದೇಶದ ಹೆಸರನ್ನು ಬದಲಾಯಿಸುತ್ತಾರೆ, ಗಡಿಯಲ್ಲಿ ನಿಂತು ಬಿಳಿ ಧ್ವಜ ಹಾರಿಸುತ್ತಾರೆ ಎಂದು ತಮಿಳುನಾಡು ಸಚಿವರು ಮೋದಿಯನ್ನು ಲೇವಡಿ ಮಾಡಿದ್ದಾರೆ.

ಮಣಿಪುರದಲ್ಲಿ ಪ್ರಚೋದಿತ ಗಲಭೆಯಿಂದ 250 ಕ್ಕೂ ಹೆಚ್ಚು ಜನರ ಹತ್ಯೆ ಮತ್ತು 7.5 ಲಕ್ಷ ಕೋಟಿ ಭ್ರಷ್ಟಾಚಾರ ಒಳಗೊಂಡು ಇನ್ನಿತರ ಸತ್ಯ ಹೊರ ಬೀಳಬಾರದು ಎಂಬ ಉದ್ದೇಶದಿಂದ ಜನರ ಚಿತ್ತವನ್ನು ಬೇರೆಡೆಗೆ ಕೊಂಡೊಯ್ಯಲು ಮೋದಿ ಮತ್ತು ಅವರ ಕಂಪನಿಯು ಸನಾತನ ತಂತ್ರವನ್ನು ಬಳಸುತ್ತಿದೆ ಎಂದು ಉದಯನಿಧಿ ಹೇಳಿದ್ದಾರೆ. ಸನಾತನ ಧರ್ಮ ನಿರ್ಮೂಲನೆ ಹೇಳಿಕೆ ವಿರುದ್ಧ ಬಿಜೆಪಿ ಮತ್ತು ಕಾನೂನು ಸವಾಲುಗಳ ಕುರಿತು ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಹಾಗೂ ಸಚಿವ ಉದಯನಿಧಿ, ಇದು ಅವರು ಬದುಕುಳಿಯಲು ಮಾಡುತ್ತಿರುವ ರಣತಂತ್ರ ಎಂದು ಮೋದಿಯನ್ನು ಟೀಕೆ ಮಾಡಿದ್ದಾರೆ.

ಇದನ್ನೂ ಓದಿ: Hit and Run Case: ‘ಕಾಮಿಡಿ ಸ್ಟಾರ್’ ಚಂದ್ರಪ್ರಭಾ ಕಾರು ಅಪಘಾತ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ! ಅಪಘಾತ ನೋಡಿದ ಆಟೋ ಚಾಲಕ ಹೇಳಿದ್ದೇನು ?

You may also like

Leave a Comment