Home » PM Modi: ‘ಎದೆ ಬಡಿದುಕೊಂಡು ಅಳಲು ಇನ್ನೂ ಸಾಕಷ್ಟು ಸಮಯವಿದೆ’- ಮೋದಿ | ಭಾರೀ ಕುತೂಹಲ ಕೆರಳಿಸಿದ ಪ್ರಧಾನಿ ಹೇಳಿಕೆ

PM Modi: ‘ಎದೆ ಬಡಿದುಕೊಂಡು ಅಳಲು ಇನ್ನೂ ಸಾಕಷ್ಟು ಸಮಯವಿದೆ’- ಮೋದಿ | ಭಾರೀ ಕುತೂಹಲ ಕೆರಳಿಸಿದ ಪ್ರಧಾನಿ ಹೇಳಿಕೆ

1 comment
PM Modi

PM Modi: ಇಂದಿನಿಂದ ಸಂಸತ್ತಿನ ವಿಶೇಷ ಅಧಿವೇಶನ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಸಂಸತ್ತಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ(Narendra modi) ಅವರು ಅಧಿವೇಶನಕ್ಕೂ ಮುನ್ನ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ‘ಎದೆ ಬಡಿದುಕೊಂಡು ಅಳಲು ಇನ್ನೂ ಸಮಯವಿದೆ’ ಎಂದು ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ.

ಹೌದು, ಸಂಸತ್ ಅಧಿವೇಶನಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ ಅವರು ಚಂದ್ರಯಾನ-3 ಮತ್ತು ಜಿ-20 ಯಶಸ್ಸನ್ನು ಪ್ರಸ್ತಾಪಿಸಿದರು. ಚಂದ್ರಯಾನ-3 ಚಂದ್ರಯಾನದ ಯಶಸ್ಸು, ನಮ್ಮ ತ್ರಿವರ್ಣ ಧ್ವಜ ಇಂದು ವಿಶ್ವದಲ್ಲಿ ಹಾರಾಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಶಿವಶಕ್ತಿ ಪಾಯಿಂಟ್ ಹೊಸ ಸ್ಫೂರ್ತಿಯ ಕೇಂದ್ರವಾಗಿದೆ. ತ್ರಿವರ್ಣ ಬಿಂದು ನಮ್ಮಲ್ಲಿ ಹೆಮ್ಮೆಯನ್ನು ತುಂಬುತ್ತಿದೆ ಎಂದರು. ಜಿ-20ಯಲ್ಲಿ ನಾವು ಜಾಗತಿಕ ದಕ್ಷಿಣದ ಧ್ವನಿಯಾಗಿದ್ದೇವೆ ಎಂಬ ಅಂಶದ ಬಗ್ಗೆ ಭಾರತ ಯಾವಾಗಲೂ ಹೆಮ್ಮೆಪಡುತ್ತದೆ. ಆಫ್ರಿಕನ್ ಒಕ್ಕೂಟದ ಶಾಶ್ವತ ಸದಸ್ಯತ್ವ ಮತ್ತು ಜಿ-20 ನಲ್ಲಿ ಸರ್ವಾನುಮತದ ಘೋಷಣೆ, ಇವೆಲ್ಲವೂ ಭಾರತದ ಉಜ್ವಲ ಭವಿಷ್ಯವನ್ನು ಸೂಚಿಸುತ್ತಿವೆ ಎಂದು ಹೇಳಿದರು.

ಅಲ್ಲದೆ ಈ ವೇಳೆ ಪ್ರಧಾನಿ ಮೋದಿ(PM Modi)ಯಾರ ಹೆಸರನ್ನೂ ತೆಗೆದುಕೊಳ್ಳದೆ ಪ್ರತಿಪಕ್ಷಗಳನ್ನು ಲೇವಡಿ ಮಾಡಿದ ಮೋದಿ ಅವರು ಎದು ಬಡಿದುಕೊಂಡು ಅಳೋಕೆ ಸಾಕಷ್ಟು ಸಮಯವಿದೆ. ಅದನ್ನು ಬೇರೆ ಸಮಯದಲ್ಲಿ ಮುಂದುವರಿಸಿ. ನಿಮ್ಮಲ್ಲಿ ನಂಬಿಕೆಯನ್ನು ತುಂಬುವ ಕೆಲವು ಸಮಯಗಳಿವೆ. ಹಳೆಯ ಕೆಡುಕುಗಳನ್ನು ಬಿಟ್ಟು ಹೊಸ ಮನೆಯನ್ನು ಪ್ರವೇಶಿಸಲು ಉತ್ಸಾಹ ಮತ್ತು ಒಳ್ಳೆಯತನದಿಂದ ಮುನ್ನಡೆಯಿರಿ ಎಂದು ಮೋದಿ ತಿಳಿಸಿದರು.

ಬಳಿಕ ಮಾತನಾಡಿದ ಅವರು ‘ಈ ಅಧಿವೇಶನ ಚಿಕ್ಕದಾಗಿರಬಹುದು, ಆದರೆ ಸಮಯದ ದೃಷ್ಟಿಯಿಂದ ಇದು ತುಂಬಾ ದೊಡ್ಡದಾಗಿದೆ. ಇದೊಂದು ಐತಿಹಾಸಿಕ ನಿರ್ಧಾರಗಳ ಅಧಿವೇಶನ. ಈ ಅಧಿವೇಶನದ ಒಂದು ವಿಶೇಷತೆ ಏನೆಂದರೆ ನಿಮ್ಮ 75 ವರ್ಷಗಳ ಪಯಣ ಈಗ ಹೊಸ ಸ್ಥಳದಿಂದ ಆರಂಭವಾಗುತ್ತಿದೆ. ಈ ಹಂತದವರೆಗಿನ ಪ್ರಯಾಣವು 75 ವರ್ಷಗಳ ಸುದೀರ್ಘವಾಗಿತ್ತು. ಅದೊಂದು ಸ್ಪೂರ್ತಿದಾಯಕ ಕ್ಷಣ. ಈಗ, ಆ ಪ್ರಯಾಣವನ್ನು ಹೊಸ ಸ್ಥಳದಲ್ಲಿ, ಹೊಸ ನಿರ್ಣಯಗಳೊಂದಿಗೆ, ಹೊಸ ಆತ್ಮವಿಶ್ವಾಸದೊಂದಿಗೆ ಮತ್ತು 2047 ರ ಕಾಲಮಿತಿಯೊಳಗೆ ದೇಶವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಬೇಕಾಗಿದೆ ಎಂದರು.

https://x.com/ANI/status/1703637772240826562?t=BBGEdn3jpy_fR7WDT_7NNA&s=08

ಇದನ್ನೂ ಓದಿ: Uttara kannada: ಉತ್ತರ ಕನ್ನಡದ ಹಾಸ್ಟೆಲ್ ಹುಡುಗಿಯರು ಕೈ ಕುಯ್ದುಕೊಂಡ ಪ್ರಕರಣಕ್ಕೆ ರೋಚಕ ಟ್ವಿಸ್ಟ್- ಇದು PUBG ಎಫೆಕ್ಟ್ ?!

You may also like

Leave a Comment