Home » Lakshmi Hebbalkar: ಗುದ್ದಲಿ ಎತ್ತಿಲ್ಲ, ಪೂಜೆನೇ ಆಗಿಲ್ಲ, ಕಮಿಷನ್ ಎಲ್ಲಿಂದ ಬಂತು ಮಾರ್ರೆ? ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿಗೆ ಕೊಟ್ರು ಗುದ್ಲಿ ಏಟು !

Lakshmi Hebbalkar: ಗುದ್ದಲಿ ಎತ್ತಿಲ್ಲ, ಪೂಜೆನೇ ಆಗಿಲ್ಲ, ಕಮಿಷನ್ ಎಲ್ಲಿಂದ ಬಂತು ಮಾರ್ರೆ? ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿಗೆ ಕೊಟ್ರು ಗುದ್ಲಿ ಏಟು !

by ಹೊಸಕನ್ನಡ
0 comments
Lakshmi hebbalkar

Lakshmi Hebbalkar: ಕಾಂಗ್ರೆಸ್ ಮೇಲೆ ಬಿಜೆಪಿ 15 % ಪ್ಲಸ್ 50 % ಕಮಿಷನ್ ಆರೋಪ ಮಾಡುತ್ತಿದೆ. ಬಿಜೆಪಿಯು ‘ ಪೇ ಸಿಎಂ ಕಮಿಷನ್ ‘ ಕಾಂಗ್ರೆಸ್ಸಿಗೆ ಅದು ಹಿಂದಿನ ‘ಪೇಟಿಎಂ ‘ ಆರೋಪಕ್ಕೆ ನೀಡಿದ ತಿರುಗುಬಾಣವಾಗಿದೆ. ಬಿಜೆಪಿಯ ಕಮಿಷನ್ ಆರೋಪಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ತಿರುಗೇಟು ನೀಡಿದ್ದಾರೆ. ‘ಇನ್ನೂ ಗುದ್ದಲಿ ಎತ್ತೇ ಇಲ್ಲ, ಕಮೀಷನ್ ಎಲ್ಲಿಂದ ಬಂತು ಮಾರ್ರೆ ?’ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉಡುಪಿಯಲ್ಲಿ ಹೇಳಿಕೆ ನೀಡಿದ್ದಾರೆ.
ಉಡುಪಿಯಲ್ಲಿ (Usupi) ಮಾಧ್ಯಮಗಳ ಜೊತೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರರು, ನಮ್ಮ ಸರ್ಕಾರ ಬಂದ ನಂತರ, ಕಳೆದ 3 ತಿಂಗಳಲ್ಲಿ ಯಾವುದೇ ಹೊಸ ಯೋಜನೆ ಮಾಡಿಲ್ಲ. ಹೊಸ ಯೋಜನೆಗಳನ್ನು ಮಾಡಿದರೆ ಮಾತ್ರ ಕಮಿಷನ್ ವಿಚಾರ ಬರುತ್ತದೆ. ಹೊಸ ಗುದ್ದಲಿ ಪೂಜೆ, ಟೆಂಡರ್ ಆದರೆ ಕಮಿಷನ್ ವಿಚಾರ ಬರ್ತದೆ. ಇರೋ ಕಾಮಗಾರಿಗಳು ನಡೆಯುತ್ತಿರುವಾಗ ಕಮಿಷನ್ ವಿಚಾರ ಎಲ್ಲಿಂದ ಬರುತ್ತದೆ, ಹೇಗೆ ಬರುತ್ತದೆ ಎಂದು ಅವರು ಮಾಧ್ಯಮಗಳನ್ನು ಪ್ರಶ್ನಿಸಿದ್ದಾರೆ.
ಬಿಬಿಎಂಪಿ ವಿಚಾರದಲ್ಲಿ ಬಂದಿರುವ ಆರೋಪ ಬಗ್ಗೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ. ಈಗ ನಾವು ಕಮಿಷನ್ ಕೇಳಿರುವ ಯಾವುದೇ ಪ್ರಕರಣಗಳು ಇಲ್ಲ. ಮುಖ್ಯಮಂತ್ರಿಗಳೇ ಈ ಬಗ್ಗೆ ವಿಶೇಷ ತಂಡ ರಚನೆ ಮಾಡಿದ್ದಾರೆ. ಬೋಗಸ್ ಬಿಲ್ ಆಗಿದೆಯಾ ಎಂದು ತನಿಖಾ ತಂಡ ವಿಚಾರಣೆ ಮಾಡುತ್ತದೆ ಎಂದು ಹೆಬ್ಬಾಳ್ಕರ್ ಹೇಳಿದರು.

ಇದನ್ನೂ ಓದಿ: Actor Upendra: ‘ಬುದ್ಧಿವಂತ’ ನಿಗೆ ಹೈಕೋರ್ಟ್ ನಿಂದ ರಿಲೀಫ್ ! FIR ಗೆ ತಡೆ!!!

You may also like