CM Siddaramaiah: ರಾಜ್ಯ ದಲ್ಲಿ ಹಲವು ದಿನನಿತ್ಯ ವಸ್ತುಗಳ ಬೆಲೆ ಏರಿಕೆ ಆಗಿದ್ದು, ಹಾಲು ಮೊಸರಿನ ದರ ಕೂಡ ಹೆಚ್ಚಾಗಿದೆ. ಹೀಗಾಗಿ ಈ ಬೆಲೆ ಏರಿಕೆಗ ಆಗಲು ಕಾರಣವೇನು? ಯಾರು ಕಾರಣ ಎಂದು ಸಿಎಂ ಸಿದ್ದರಾಮಯ್ಯ(CM Siddaramaiah)ಸ್ಪಷ್ಟಪಡಿಸಿದ್ದಾರೆ.
ಹೌದು, ರಾಜ್ಯದಲ್ಲಿ ನೂತನವಾಗಿ ಕಾಂಗ್ರೆಸ್ ಸರ್ಕಾರ(Congress Government)ಅಧಿಕಾರಕ್ಕೆ ಬಂದ ಬಳಿಕ ಕೆಲವು ದಿನನಿತ್ಯ ಬಳಸುವ ವಸ್ತುಗಳು ಹಾಗೂ ಆಹಾರ ಪದಾರ್ಥಗಳ ಬೆಳೆಗಳು ಹೆಚ್ಚಾಗಿವೆ. ಅಂತೆಯೇ ನಂದಿನ ಹಾಲು(Milk), ಮೊಸರಿನಲ್ಲೂ ಏರಿಕೆ ಕಂಡಿದೆ. ಈ ಕಾರಣ ಇಟ್ಟುಕೊಂಡು ಪೂರತಿಪಕ್ಷವಾದ ಬಿಜೆಪಿ, ಸರ್ಕಾರವನ್ನು ತಿವಿಯುತ್ತಾ ಬಂದಿದೆ. ಆದರೀಗ ಸಿಎಂ ಸಿದ್ದರಾಮಯ್ಯನವು ಹಾಲು, ಮೊಸರಿನ ದರ ಹೆಚ್ಚಿಸಿದ್ದು ಯಾರೆಂದು ಬಿಜೆಪಿಗೆ ಪಾಠ ಮಾಡಿದ್ದಾರೆ.
ಇಂದು ವಿಧಾನ ಪರಿಷತ್(Vidhanaparishath) ಕಲಾಪದಲ್ಲಿ ಅನ್ನ ಭಾಗ್ಯ ಯೋಜನೆ(Anna bhagya) ಕುರಿತು ಸಿಎಂ ಸಿದ್ದರಾಮಯ್ಯ ಮತ್ತು ರವಿಕುಮಾರ್(Ravikumar) ನಡುವೆ ಮಾತಿನ ಜಟಾಪಟಿ ನಡೆಯಿತು. ಈ ವೇಳೆ ವಿಚಾರವು ಬೆಲೆ ಏರಿಕೆ ಬಗ್ಗೆ ತಿರುಗಿತು. ಆಗ ಸಿದ್ದರಾಮಯ್ಯನವರು ‘ಕುಳಿತುಕೊಳ್ಳಪ್ಪ, ಹಾಲು, ಮಜ್ಜಿಗೆ, ಮೊಸರಿನ ಮೇಲೆ ಟ್ಯಾಕ್ಸ್ ಹಾಕಿದ್ದು ಯಾರು? ಎಲ್ಲಾ ಟ್ಯಾಕ್ಸ್ ಹಾಕಿ ರೇಟ್ ಏರ್ಸಿದ್ದಿರಾ. ನೀವು ಬಡವರ ಪರವೇ?’ ಎಂದು ಹೇಳುವ ಮೂಲಕ ರವಿಕುಮಾರ್ ಹೇಳಿಕೆಗೆ ತಿರುಗೇಟು ನೀಡಿದರು.
ಈ ಮಧ್ಯೆ ಧ್ವನಿ ಎತ್ತಿದ ಆಹಾರ ಸಚಿವ ಕೆ.ಎಚ್. ಮುನಿಯಪ್ಪ(K H muniyappa) ‘ನಾನು ಅನ್ನಭಾಗ್ಯ ಯೋಜನೆ ಅಕ್ಕಿಗಾಗಿ ಕೇಂದ್ರ ಆಹಾರ ಸಚಿವರನ್ನು ಭೇಟಿ ಮಾಡಲು ಸಮಯ ಕೇಳಿದ್ದೇ. ಆದ್ರೆ, ಅವರು ಸಮಯವೇ ಕೊಡಲಿಲ್ಲ. ನಾನು ಮಾಧ್ಯಮಗಳ ಮುಂದೆ ಹೇಳಿದ ನಂತರದಲ್ಲಿ ಸಮಯ ಕೊಟ್ಟಿದ್ದು. ಇದಕ್ಕಿಂತ ಉದಾಹರಣೆ ಬೇಕಾ ನಿಮ್ಮ ಬಡವರ ಪರ ಧ್ವನಿಗೆ ಎಂದು ಮೂದಲಿಸಿದರು.
ಇದನ್ನು ಓದಿ: Shakti Scheme: ಸರ್ಕಾರಿ ಬಸ್ ಸಾವಾಸ, ಭಾರೀ ಏರಿದ ಕರಾವಳಿ ಸ್ತ್ರೀ ಪ್ರಯಾಣಿಕರ ಸಂಖ್ಯೆ !
