CM Ibrahim: JDS ರಾಜ್ಯಾಧ್ಯಕ್ಷ ಸ್ಥಾನದಿಂದ (JDS Stae President) ಹೊರಗೆ ಹಾಕಿದ ನಂತರ ಕೆಂಡಾಮಂಡಲವಾಗಿರುವ ಸಿಎಂ ಇಬ್ರಾಹಿಂ (CM Ibrahim) ಅವರು ಜೆಡಿಎಸ್-ಬಿಜೆಪಿ ಮೈತ್ರಿಯನ್ನು (BJP-JDS Alliance) ವಿರೋಧಿಸಿ ತಮ್ಮದೇ ಒರಿಜಿನಲ್ ಜೆಡಿಎಸ್ ಎಂದು ಹೇಳಿದ್ದ ಇಬ್ರಾಹಿಂ ಅವರನ್ನು ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಲಾಗಿದೆ.
ಇದೀಗ ಈ ನಿರ್ಧಾರದಿಂದ ಕೊತ ಕೊತ ಕುದಿಯುತ್ತಿರುವ ಸಿಎಂ ಇಬ್ರಾಹಿಂ ಅವರು, ದೇವೇಗೌಡರಿಗೆ (HD Devegowda) ಪುತ್ರ ವ್ಯಾಮೋಹ ಇನ್ನೂ ಇದೆ. ದೇವೇಗೌಡರೇ ನೀವು ನನ್ನನ್ನು ಕೆಣಕಿದ್ದೀರಿ. ಇದರ ಪರಿಣಾಮ ಏನು ಅಂತ ಕಾದು ನೋಡಿ ಎಂದು ಸವಾಲು ಹಾಕಿದ್ದಾರೆ. ನನ್ನನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಯಿಂದ ತೆಗೆಯೋ ಅಧಿಕಾರ ನಿಮಗಿಲ್ಲ. ನೋಟಿಸ್ ಕೊಡಬೇಕು. ಕಾರ್ಯಕಾರಿ ಸಮಿತಿಯ 2/3 ನೇ ಸದಸ್ಯರ ಅನುಮತಿ ಕೂಡಾ ಪಡೆದು ನೋಟೀಸ್ ನೀಡಬೇಕು. ನಾನು ಚುನಾವಣಾ ಆಯೋಗದಲ್ಲಿ ನಿಮ್ಮ ನಿರ್ಧಾರವನ್ನು ಪ್ರಶ್ನೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ನಿಜವಾದ ಜನತಾ ದಳ ನಮ್ಮದು. ತುಂಬಾ ಜನ ಶಾಸಕರು ನನ್ನ ಜೊತೆ ಇದ್ದಾರೆ. ನಾನು ಇದನ್ನು ಇಲ್ಲಿಗೆ ಬಿಡಲ್ಲ, ಜಿಲ್ಲೆ ಜಿಲ್ಲೆಗಳಲ್ಲಿ ಸಭೆ ಮಾಡ್ತೀನಿ, ನನ್ನ ಹೋರಾಟ ಶುರುವಾಗಿದೆ, ಒರಿಜಿನಲ್ ಜೆಡಿಎಸ್ ನಮ್ಮದೇ ಎಂದು ಪ್ರೂವ್ ಮಾಡ್ತೀನಿ, ನಿತೀಶ್ ಕುಮಾರ್, ಲಾಲೂ ಪ್ರಸಾದ್ ಯಾದವ್, ಅರವಿಂದ ಕೇಜಿವ್ರಾಲ್, ಎಲ್ಲರೂ ನನ್ನ ಸಂಪರ್ಕದಲ್ಲಿ ಇದ್ದಾರೆ ಎಂದು ಇಬ್ರಾಹಿಂ ಹೇಳಿದ್ದಾರೆ.
ನಾನು ದೇವೇಗೌಡರನ್ನು ನನ್ನ ತಂದೆ ಸಮಾನ ರೀತಿ ನೋಡ್ತಾ ಇದ್ದೆ. ಅದಕ್ಕೇ ನಾನು ನನ್ನ ಪರಿಷತ್ ಸ್ಥಾನ ಬಿಟ್ಟು ನಿಮ್ಮ ಬಳಿ ಬಂದೆ ಎಂದು ಹೇಳಿದ ಅವರು, ಕಾಲಾಯೇ ತಸ್ಮೈ ನಮಃ, ವಿನಾಶ ಕಾಲೇ ವಿಪರೀತ ಬುದ್ಧಿ, ಮಹಾಭಾರತದಲ್ಲಿ ಆದ ಹಾಗೆ ಜೆಡಿಎಸ್‌ಗೂ ಆಗುತ್ತದೆ ಎಂದು ಹಿಡಿ ಶಾಪ ಹಾಕಿದ್ದಾರೆ.
