Priyanka Gandhi: ಛತ್ತೀಸ್ ಗಢ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರ ಸಾಲ ಮನ್ನಾ ಮಾಡುವುದಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ(Priyanka Gandhi) ವಾದ್ರಾ ಭರವಸೆ ನೀಡಿದ್ದಾರೆ.
ಛತ್ತೀಸ್ ಗಢ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಯಪುರ ಸಮೀಪದ ಖೈರಗಡ ವಿಧಾನಸಭಾ ಕ್ಷೇತ್ರದಲ್ಲಿ ಅವರು ಚುನಾವಣಾ ರ್ಯಾಲಿ ನಡೆಸಿ ಮಾತಾಡುತ್ತಿದ್ದರು. ಅಲ್ಲಿನ ರ್ಯಾಲಿಯಲ್ಲಿ ಮಾತನಾಡಿದ ಅವರು, ಪ್ರತಿ ಗ್ಯಾಸ್ ಸಿಲಿಂಡರ್ ಗೆ 500 ರೂ. ಸಬ್ಸಿಡಿ ನೀಡುವುದಾಗಿ ಹೇಳಿದ್ದಾರೆ. ಮತ್ತು ಉಚಿತ 200 ಯೂನಿಟ್ ವಿದ್ಯುತ್ ಮತ್ತು ಮಹಿಳೆಯರ ಸಾಲ ಮನ್ನಾ ಮಾಡುವುದಾಗಿ ಕೂಡಾ ಭರವಸೆ ನೀಡಿದ್ದಾರೆ.
ಇಲ್ಲಿನ ಮಹಿಳೆಯರಿಗೆ ಅನುಕೂಲವಾಗುವ ಒಳ್ಳೆಯ ಯೋಜನೆಗಳನ್ನು ಜಾರಿಗೆ ತರಲಾಗುವುದು ಮತ್ತು ಸ್ವಸಹಾಯ ಸಂಘಗಳ ಸಾಲ, ಸಕ್ಸಮ ಯೋಜನೆಯ ಮೂಲಕ ಮಹಿಳೆಯರು ಪಡೆದಿರುವ ಸಾಲಗಳನ್ನು ಮನ್ನಾ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Free Ration Update: ಉಚಿತ ಪಡಿತರದ ಲಾಭ ಪಡೆಯುವವರಿಗೆ ಸರಕಾರದಿಂದ ಮಹತ್ವದ ಘೋಷಣೆ! ಇನ್ನು ಈ ಜನರಿಗೆ ಸಿಗಲ್ಲ ಉಚಿತ ರೇಷನ್!!!
