Home » ಶಿವಮೊಗ್ಗ ಹರ್ಷ ಹತ್ಯೆ ಪ್ರಕರಣ : ಇನ್ನಾದರೂ SDPI ಸಂಘಟನೆ ಬ್ಯಾನ್ ಮಾಡಲಿ- ಪ್ರತಾಪ್ ಸಿಂಹ ಆಕ್ರೋಶ

ಶಿವಮೊಗ್ಗ ಹರ್ಷ ಹತ್ಯೆ ಪ್ರಕರಣ : ಇನ್ನಾದರೂ SDPI ಸಂಘಟನೆ ಬ್ಯಾನ್ ಮಾಡಲಿ- ಪ್ರತಾಪ್ ಸಿಂಹ ಆಕ್ರೋಶ

0 comments

ಬೆಂಗಳೂರು : ಕಾರ್ಯಕರ್ತನ ಕಗ್ಗೊಲೆ ನೋಡಿ ಮನಸ್ಸಿಗೆ ನೋವಾಗುತ್ತಿದೆ. ನಮ್ಮ‌ ಸರಕಾರದ ಅವಧಿಯಲ್ಲಿಯೇ ಇಂತಹ ಘಟನೆ ಆಗ್ತಿರೋದು ನಾಚಿಕೆ ಆಗ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತನ ಹತ್ಯೆ ಕುರಿತು ಮಾತನಾಡಿದ್ದಾರೆ.

ನಮ್ಮ‌ ಸರಕಾರದ ಅವಧಿಯಲ್ಲೇ ಈ ಘಟನೆಗಳಾಗುತ್ತಿರುವುದು ಬೇಸರ ತರುತ್ತಿದೆ. ಎಸ್ ಡಿ ಪಿ ಐ ಸಂಘಟನೆ ನಿಷೇಧ ಮಾಡಿದ್ದರೆ ಇಂತಹ ಘಟನೆ ನಡೆಯುತ್ತಿತ್ತೇ ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಹಿಂದೂಗಳ‌ ಕಗ್ಗೊಲೆಯಾಗುತ್ತಿದೆ. ಸಿ ಎಂ ಮಾತು ನಿಲ್ಲಿಸಿ ಕೃತಿಯಲ್ಲಿ ಕಠಿಣತೆ ತೋರಬೇಕು. ಪ್ರತಿ ಹತ್ಯೆ ನಡೆದಾಗಲೂ ಎಸ್ ಡಿ ಪಿ ಐ ಸಂಘಟನೆ ನಿಷೇಧ ಹೇಳಿದ್ದೆವು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಈಗಲಾದರೂ ಸಂಘಟನೆ ಬ್ಯಾನ್ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

You may also like

Leave a Comment