Nandini Milk: ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ದರ ಏರಿಕೆ ಬೆನ್ನಲ್ಲೇ ನಂದಿನ ಹಾಲಿನ(Nandini Milk) ಪ್ರತೀ ಲೀಟರ್ಗೆ 2 ರೂ ಹೆಚ್ಚಳ ಮಾಡಿ KMF ಆದೇಶ ಹೊರಡಿಸಿತ್ತು. ಈ ಬೆನ್ನಲ್ಲೇ ರಾಜ್ಯದಲ್ಲಿ ಭಾರೀ ಆಕ್ರೋಶ ಕೇಳಿಬಂದಿತ್ತು. ಇದಕ್ಕೆ ಸಿಎಂ ಸಿದ್ದರಾಮಯ್ಯನವರು(CM Siddaramaiah) ಪ್ರತಿಕ್ರಿಯಿಸಿದ್ದು, ನಾವು ಹಾಲಿನ ದರ ಏರಿಸಿಲ್ಲ. ಆದರೆ 2 ರೂ ಹೆಚ್ಚಿಗೆ ಮಾಡಿದ್ದೇವೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
Gruhalakshmi Scheme: ಇನ್ಮುಂದೆ ಈ ದಿನಾಂಕದಂದು ಕರೆಕ್ಟ್ ಆಗಿ ಖಾತೆಗೆ ಜಮಾ ಆಗುತ್ತೆ ಗೃಹಲಕ್ಷ್ಮೀ ದುಡ್ಡು !!
ಹೌದು, ನಂದಿನಿ ಹಾಲಿನ ದರ 2ರೂ ಏರಿಕೆಯಾಗುತ್ತಿದ್ದಂತೆ ಪ್ರತಿಪಕ್ಷಗಳು ಹಾಗೂ ಸಾಮಾನ್ಯ ನಾಗರಿಕರಿಂದ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಗ್ಯಾರಂಟಿ ಭಾಗ್ಯಗಳನ್ನು ಒಂದೆಡೆ ಕೊಡುತ್ತಿದ್ದೇವೆ ಎಂದು ಹೇಳುತ್ತಿರುವ ಸರ್ಕಾರ ಇನ್ನೊಂದೆಡೆ ವಿದ್ಯುತ್, ಬಸ್ಸಿನ ದರ, ಆಸ್ತಿ ಮುದ್ರಾಂಕ ಶುಲ್ಕ ನಂತರ ಇದೀಗ ಹಾಲಿನ ದರ ಹೆಚ್ಚಿಸಿ ಸಾಮಾನ್ಯ ಜನರಿಗೆ ಬರೆ ಎಳೆದಿದೆ ಎಂದು ಆಕ್ರೋಶ ಕೇಳಿ ಬಂದಿತ್ತು. ಈ ಬೆನ್ನಲ್ಲೇ ಎಚ್ಚೆತ್ತ ಸಿದ್ದರಾಮಯ್ಯ ಯಾಕೆ ಹೀಗಾಯಿತು ಎಂಬುದರ ಬಗ್ಗೆ ಮಾತನಾಡಿದ್ದಾರೆ.
ಯಾಕೆ 2 ರೂ ಹೆಚ್ಚಳ?
ಕರ್ನಾಟಕದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿದ್ದರಿಂದ ನಂದಿನಿ ಹಾಲಿನ ಪ್ಯಾಕೆಟ್ ಅಲ್ಲಿ ತಲಾ 50 ಮಿ.ಲೀ. ಹಾಲನ್ನು ಹೆಚ್ಚು ತುಂಬಲಾಗುತ್ತಿದೆ. ಹೀಗಾಗಿ ಹೆಚ್ಚುವರಿ ಹಾಲಿಗೆ 2 ರೂಪಾಯಿ ದರ ನಿಗದಿಪಡಿಸಿ ಗ್ರಾಹಕರಿಂದ ಸಂಗ್ರಹಿಸಲಾಗುತ್ತಿ. ಇದರ ವಿನಃ ಹಾಲಿನ ಬೆಲೆಯಲ್ಲಿ ಏರಿಕೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
