Home » Bangalore: ವಕ್ಫ್‌ ವಿರುದ್ಧ ಹೋರಾಟ, ಪ್ರಮೋದ್‌ ಮುತಾಲಿಕ್‌ ವಶಕ್ಕೆ

Bangalore: ವಕ್ಫ್‌ ವಿರುದ್ಧ ಹೋರಾಟ, ಪ್ರಮೋದ್‌ ಮುತಾಲಿಕ್‌ ವಶಕ್ಕೆ

0 comments

Bangalore: ರಾಜ್ಯದಲ್ಲಿ ಹಿಂದೂಗಳು, ರೈತರು ಹಾಗೂ ಮಠ-ಮಂದಿರಗಳ ಭೂಮಿಯನ್ನು ವಕ್ಫ್‌ ಹೆಸರಿಗೆ ಮಾಡಿಕೊಳ್ಳುತ್ತಿರುವ ಹಿನ್ನೆಲೆ ವಕ್ಫ್‌ ಸಚಿವ ಜಮೀರ್‌ ಅಹಮದ್‌ ಖಾನ್‌ ಕಚೇರಿಗೆ ಮುತ್ತಿಗೆ ಹಾಕಲೆಂದು ಹೋಗಿದ್ದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.

ಚಾಮರಾಜಪೇಟೆ ಆಟದ ಮೈದಾನ ಬಳಿಯ ಮಹದೇಶ್ವರ ದೇವಾಲಯದಲ್ಲಿ ಪೂಜೆ ಮಾಡಿ ವಕ್ಫ್‌ ಹೋರಾಟಕ್ಕೆ ಮುಂದಾದ ಶ್ರೀರಾಮ ಸೇನೆ , ಕಾಲ್ನಡಿಗೆಯಲ್ಲಿ ಸಚಿವ ಜಮಿರ್‌ ಅಹ್ಮದ್‌ ಕಚೇರಿಗೆ ಕಾಲ್ನಡಿಗೆಯಲ್ಲಿ ತೆರಳಿ ಮನವಿ ಪತ್ರ ಸಲ್ಲಿಕೆ ಮಾಡುವುದಾಗಿ ಪೊಲೀಸರಿಂದ ಅನುಮತಿಯನ್ನು ಪಡೆದಿದ್ದರು. ಈ ಕಾರಣದಿಂದ ಶ್ರೀರಾಮ ಸೇನೆ ಕಾರ್ಯಕರ್ತರೊಂದಿಗೆ ತೆರಳಿ ಮನವಿ ಪತ್ರ ನೀಡಲು ಮುಂದಾದ ಪ್ರಮೋದ್‌ ಮುತಾಲಿಕ್‌ ದೊಡ್ಡ ಮಟ್ಟದಲ್ಲಿ ರ್ಯಾಲಿ ನಡೆಸಿದ್ದು, ಗುಂಪು ಸೇರಿದ್ದರಿಂದ ಪೊಲೀಸರು ತಡೆಯಲು ಮುಂದಾಗಿದ್ದಾರೆ. ನಂತರ, ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಅವರಿಗೆ ಕಾಲ್ನಡಿಗೆಯಲ್ಲಿ ರ್ಯಾಲಿ ಮಾಡಿಕೊಂಡು ಹೋಗಬಾರದು, ವಾಹನದ ಮೂಲಕ ಹೋಗಿ ಮನವಿ ಪತ್ರ ಕೊಡಲು ಪೊಲೀಸರು ಹೇಳಿದ್ದಾರೆ.

ಆದರೆ ಇದಕ್ಕೆ ಪ್ರಮೋದ್‌ ಮುತಾಲಿಕ್‌ ಬಗ್ಗಲಿಲ್ಲ. ಸಚಿವ ಜಮೀರ್‌ ಅಹಮದ್‌ ಖಾನ್‌ ಚಾಮರಾಜಪೇಟೆಯ ಶಾಸಕರ ಕಚೇರಿಗೆ ಮುತ್ತಿಗೆ ಹಾಕುವುದಕ್ಕೆ ಮುಂದಾಗಿದ್ದರಿಂದ ಪೊಲೀಸರು ವಶಕ್ಕೆ ಪಡೆದಿದ್ದು, ಬಸ್ಸಿನಲ್ಲಿ ತುಂಬಿಕೊಂಡು ಹೋಗಿದ್ದಾರೆ.

You may also like

Leave a Comment