Home » Veer Savarkar: ‘ತಾತ ಕ್ಷಮೆ ಕೇಳಿದ್ದನ್ನು ಸಾಬೀತು ಮಾಡಿ’ ; ರಾಹುಲ್‌ ಗಾಂಧಿಗೆ ಸವಾಲು ಎಸೆದ ರಂಜಿತ್ ಸಾವರ್ಕರ್ !!

Veer Savarkar: ‘ತಾತ ಕ್ಷಮೆ ಕೇಳಿದ್ದನ್ನು ಸಾಬೀತು ಮಾಡಿ’ ; ರಾಹುಲ್‌ ಗಾಂಧಿಗೆ ಸವಾಲು ಎಸೆದ ರಂಜಿತ್ ಸಾವರ್ಕರ್ !!

5 comments
Veer Savarkar

Veer Savarkar: ಈ ಹಿಂದೆ ಉದ್ಧವ್ ಠಾಕ್ರೆ ಅವರು, ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ಸಾವರ್ಕರ್ (Veer Savarkar) ಅವರ ಬಗ್ಗೆ ಕೀಳಾಗಿ ಮಾತನಾಡಿದರೆ ಮೈತ್ರಿ ಕಡಿದುಕೊಳ್ಳಬೇಕಾಗುತ್ತದೆ ಎಂದು ರಾಹುಲ್‍ಗಾಂಧಿ (Rahul Gandhi) ಅವರಿಗೆ ಎಚ್ಚರಿಕೆ ನೀಡಿದ್ದರು. ಇದೀಗ ರಾಹುಲ್‌ ಗಾಂಧಿಗೆ ಸಾವರ್ಕರ್ ಮೊಮ್ಮಗ ಸವಾಲು ಎಸೆದಿದ್ದಾರೆ.

ರಾಹುಲ್ ಗಾಂಧಿಗೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿದಾಗ ಸಾವರ್ಕರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ” ನಾನು ಕ್ಷಮೆ ಕೇಳುವುದಿಲ್ಲ. ಕ್ಷಮೆ ಕೇಳಲು ನಾನು ಸಾವರ್ಕರ್ ಅಲ್ಲ, ನಾನು ಗಾಂಧಿ ” ಎಂದು ಗುಡುಗಿದ್ದರು. ಗಾಂಧಿಯ ಈ ಹೇಳಿಕೆಗೆ ಉದ್ಧವ್ ಠಾಕ್ರೆ (Uddhav Thackeray) ಪ್ರತಿಕ್ರಿಯಿಸಿ, ಎಚ್ಚರಿಕೆ ನೀಡಿದ್ದರು. ಇದೀಗ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ ವಿರುದ್ಧ ಹಿಂದೂ ರಾಷ್ಟ್ರವಾದಿ ವಿ.ಡಿ. ಸಾವರ್ಕರ್ ಅವರ ಮೊಮ್ಮಗ ಕಿಡಿಕಾರಿದ್ದಾರೆ. ತಮ್ಮ ತಾತ ಬ್ರಿಟೀಷರ ಬಳಿ ಕ್ಷಮೆ ಕೇಳಿದ್ದರು ಎಂಬುದನ್ನು ಸಾಬೀತು ಮಾಡಿ ಎಂದು ಸವಾಲು ಎಸೆದಿದ್ದಾರೆ.

‘ಕ್ಷಮೆ ಕೇಳಲು ನಾನೇನು ಸಾವರ್ಕರ್ (Vinayak Damodar Savarkar) ಅಲ್ಲ ಎಂದು ರಾಹುಲ್ ಗಾಂಧಿ’ ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ (Ranjith Savarkar) ಅವರು, “ ಸಾವರ್ಕರ್ ಕ್ಷಮೆ ಕೇಳಿದ್ದರು ಎಂಬುದನ್ನು ಸಾಬೀತು ಮಾಡುವ ದಾಖಲೆಗಳನ್ನು ತೋರಿಸಿ ಎಂದು ಗಾಂಧಿಗೆ ಸವಾಲು ಹಾಕುತ್ತೇನೆ ” ಎಂದು ಹೇಳಿದ್ದಾರೆ. ರಾಜಕೀಯ (politics) ಪ್ರಚಾರಕ್ಕಾಗಿ ದೇಶಪ್ರೇಮಿಗಳ ಹೆಸರುಗಳನ್ನು ಬಳಸುವುದು ತಪ್ಪು ಮತ್ತು ಶೋಚನೀಯ, ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ರಂಜಿತ್ ಹೇಳಿದ್ದಾರೆ.

 

You may also like

Leave a Comment