Home » Kavu Hemanatha Shetty: ಕಾವು ಹೇಮನಾಥ ಶೆಟ್ಟಿ ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತ

Kavu Hemanatha Shetty: ಕಾವು ಹೇಮನಾಥ ಶೆಟ್ಟಿ ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತ

1 comment
Kavu Hemanatha Shetty

Puttur: KPCC ಮುಖಂಡ ಕಾವು ಹೇಮನಾಥ ಶೆಟ್ಟಿ ಪ್ರಯಾಣ ಮಾಡುತ್ತಿದ್ದ ಕಾರು ಇನ್ನೊಂದು ಕಾರಿನ ಮಧ್ಯೆ ಪುತ್ತೂರಿನ ಹೊರವಲಯ ಬೆದ್ರಾಳದಲ್ಲಿ ಪುತ್ತೂರು-ಸುಬ್ರಹ್ಮಣ್ಯ ರಸ್ತೆಯಲ್ಲಿ ಫೆ.24 ರ ತಡ ರಾತ್ರಿ ಅಪಘಾತ ನಡೆದಿರುವ ಕುರಿತು ವರದಿಯಾಗಿದೆ.

ಇದನ್ನೂ ಓದಿ: Gruhalakshmi scheme: ಈ ಯಜಮಾನಿಯರಿಗೆ ‘ಗೃಹಲಕ್ಷ್ಮೀ’ಯ 6ನೇ ಕಂತಿನ ಹಣ ಸಿಗಲ್ಲ !!

ಅದೃಷ್ಟವಶಾತ್‌ ಎರಡು ಕಾರಿನಲ್ಲಿದ್ದವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಕಾವು ಹೇಮನಾಥ ಶೆಟ್ಟಿ ಹಾಗೂ ಅವರ ತಂಡ ಪ್ರಯಾಣಸುತ್ತಿದ್ದ ಇನ್ನೋವಾ ಕಾರು ಹಾಗೂ ಪೋರ್ಡ್‌ ಕಾರು ಮಧ್ಯೆ ಈ ಅಪಘಾತ ಸಂಭವಿಸಿದೆ. ಹೇಮನಾಥ ಶೆಟ್ಟಿಯವು ಕಡಬ ತಾಲೂಕಿನ ಅಲಂಕಾರು ಸಮೀಪ ಮನವಳಿಕೆ ತರವಾಡು ಮನೆಯಲ್ಲಿ ನೇಮೋತ್ಸವಕ್ಕೆಂದು ಹೋಗಿದ್ದು, ಅಲ್ಲಿಂದ ವಾಪಾಸ್ಸು ಬರುತ್ತಿದ್ದ ಸಂರ್ಭದಲ್ಲಿ ಅಪಘಾತ ಸಂಭವಿಸಿದೆ.

ಹೇಮನಾಥ ಶೆಟ್ಟಿಯವರು ನೇಮತೋತ್ಸವ ಮುಗಿಸಿ ಕುದ್ಮಾರು ಮೂಲಕ ಪುತ್ತೂರು-ಸುಬ್ರಹ್ಮಣ್ಯ ರಸ್ತೆಯಲ್ಲಿ ಪುತ್ತೂರಿನ ಕಡೆಗೆ ಬರುತ್ತಿದ್ದರು. ಕಾರು ಬೆದ್ರಾಳ ಬಳಿ ತಲುಪುತ್ತಿದ್ದಂತೆ ಎದುರಿನಿಂದ ಪೋರ್ಡ್‌ ಕಾರು ಚಾಲಕನ ಹತೋಟಿ ತಪ್ಪಿ ಬರುತ್ತಿರವುದು ಕಂಡು ಇನ್ನೊವಾ ಕಾರಿನ ಚಾಲಕ ರಸ್ತೆಯಿಂದ ಕೆಳಗಿಳಿಸಿದ್ದು, ಈ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಕಟ್ಟೆಗೆ ಕಾರು ಬಡಿದಿರುವುದಾಗಿ ವರದಿಯಾಗಿದೆ.

ಪೋರ್ಡ್‌ ಕಾರು ಇನ್ನೋವಾದ ಇನ್ನೊಂದು ಬದಿಗೆ ಡಿಕ್ಕಿ ಹೊಡೆದಿದ್ದು, ಕಾರು ಸಂಪೂರ್ಣ ಹಾನಿಯಾಗಿದೆ. ಹೇಮನಾಥ ಶೆಟ್ಟಿ ಅವರು ಪ್ರಯಾಣ ಮಾಡುತ್ತಿದ್ದ ಇನ್ನೋವಾ ಕಾರಿನಲ್ಲಿ ಹೇಮನಾಥ ಶೆಟ್ಟಿ ಅವರ ಜೊತೆಗೆ ಆಪ್ತ ಸಹಾಯಕ ರವಿ ಪ್ರಸಾದ್‌ ಶೆಟ್ಟಿ, ದೈವಗಳ ಮಧ್ಯಸ್ಥ ಮನ್ಮಥ ಶೆಟ್ಟಿ ಕೊಡಿಪ್ಪಾಡಿ ಹಾಗೂ ಚಾಲಕ ಇದ್ದರೆನ್ನಲಾಗಿದೆ. ಇನ್ನೊಂದು ಕಡೆ ಪೋರ್ಡ್‌ ಕಾರಿನಲ್ಲಿ ಚಾಲಕ ಮಾತ್ರ ಪ್ರಯಾಣ ಮಾಡುತ್ತಿದ್ದುದಾಗಿ ವರದಿಯಾಗಿದೆ.

You may also like

Leave a Comment