Rishab-Rakshith shetty: ಕಾಂತಾರ (Kantara)ಸಿನಿಮಾದ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty) ರಾಜಕೀಯ ಸೇರುತ್ತಾರಾ? ಅನ್ನೋ ವಿಚಾರ ಕೆಲವು ದಿನಗಳ ಹಿಂದೆ ಸಾಕಷ್ಟು ಸದ್ದು ಮಾಡಿತ್ತು. ಇದಕ್ಕೆ ರಿಷಬ್ ಕೂಡ ಪ್ರತಿಕ್ರಿಯಿಸಿ ನಾನು ಎಂದಿಗೂ ಸಿನಿಮಾ ಕ್ಷೇತ್ರದಲ್ಲಿ ಇರಲು ಬಯಸುತ್ತೇನೆ. ರಾಜಕೀಯ ರಂಗಕ್ಕೂ ನನಗೂ ಆಗಿ ಬರುವುದಿಲ್ಲ ಎಂದು ಹೇಳಿದ್ದರು. ಆದರೆ ಈ ಬೆನ್ನಲ್ಲೇ ಶಿಷಬ್ ಶೆಟ್ರ ಚಡ್ಡಿ ದೋಸ್ತು ರಕ್ಷಿತ್ ಶೆಟ್ಟಿ(Rishab-Rakshith Shetty)ಮಾಡಿರುವ ಕಮೆಂಟ್ ಒಂದು ಭಾರೀ ಸದ್ಧು ಮಾಡುತ್ತಿದ್ದು, ರಿಷಬ್ ಹೇಳಿದ್ದು ಸುಳ್ಳಾ ಎಂಬ ಅನುಮಾನಕ್ಕೆ ಎಡೆಮಾಡಿದೆ.
ರಿಷಬ್ ಶೆಟ್ಟಿ ಕೇವಲ ಅವರು ಸಿನಿಮಾ ರಂಗದಲ್ಲಿ ಮಾತ್ರ ಸುದ್ದಿ ಆಗುತ್ತಿಲ್ಲ, ರಾಜಕಾರಣದಲ್ಲೂ ಸದ್ದು ಮಾಡುತ್ತಿದ್ದಾರೆ. ಅವರ ರಾಜಕೀಯದ ಪ್ರವೇಶದ ಬಗ್ಗೆ ಅಥವಾ ರಾಜಕೀಯ ಪಕ್ಷವೊಂದಕ್ಕೆ ಬೆಂಬಲ ನೀಡುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಲ್ಲಲ್ಲಿ ಮಾತುಗಳು ಕೇಳಿ ಬರುತ್ತಿದ್ದವು. ಇತ್ತೀಚೆಗೆ ಪತ್ರಕರ್ತೆಯೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲಿ ರಿಷಬ್ ಅವರ ಚಿತ್ರವನ್ನು ಹಂಚಿಕೊಂಡು, ರಿಷಬ್ ಶೆಟ್ಟಿ ರಾಜಕೀಯ ಪ್ರವೇಶಿಸುತ್ತಿದ್ದಾರೆ ಎಂದು ಬರೆದುಕೊಂಡಿದ್ದರು.
ಪತ್ರಕರ್ತೆಯ ಟ್ವೀಟ್ಗೆ ತಮಾಷೆಯಾಗಿಯೇ ಪ್ರತಿಕ್ರಿಯಿಸಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ, ‘ಸುಮ್ಮನೆ ಇರಿ ಮಾರಾರ್ಯೆ, ಸುಳ್ಳು ಸುದ್ದಿ ಇದು, ಏಪ್ರಿಲ್ 1 ಎಂದು ಸ್ಪಷ್ಟವಾಗಿ ಹೇಳಿ. ಮೊದಲೇ ಕೆಲವರು ನನ್ನನ್ನು ಒಂದು ಪಕ್ಷಕ್ಕೆ ಸೇರಿಸಿಬಿಟ್ಟಿದ್ದಾರೆ. ನಾನು ರಾಜಕೀಯಕ್ಕೆ ಎಂದೂ ಹೋಗುವುದಿಲ್ಲ. ನನಗೂ ರಾಜಕಾರಣಕ್ಕೂ ಆಗಲ್ಲ. ನಾನು ಸಿನಿಮಾ ರಂಗದಲ್ಲೇ ಇರುತ್ತೇನೆ. ರಾಜಕಾರಣ ಮಾಡಲಾರೆ’ ಎಂದು ರಿಷಬ್ ಹೇಳಿದ್ದರು, ಆದರೆ ರಿಷಬ್ ಬಗ್ಗೆ ಗೆಳೆಯ ರಕ್ಷಿತ್ ಶೆಟ್ಟಿಗೆ (Rakshit Shetty) ಮಾತ್ರ ಈ ವಿಚಾರವಾಗಿ ನಂಬಿಕೆ ಬಂದಂತೆ ಕಾಣುತ್ತಿಲ್ಲ.
ಹೌದು, ನಾನು ಆಯ್ಕೆ ಮಾಡಿಕೊಂಡ ಸಿನಿಮಾ ಕ್ಷೇತ್ರದಲ್ಲೇ ಇರುವೆ. ನಾನು ಬೇರೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲಾರೆ ಎಂದು ರಿಷಬ್ ಬರೆದ ಬರಹಕ್ಕೆ ರಕ್ಷಿತ್ ಶೆಟ್ಟಿ ಮರು ಪ್ರಶ್ನೆ ಮಾಡಿದ್ದಾರೆ. ‘ಎಂದೂ ಹೋಗುವುದಿಲ್ಲವೆ?’ ಎಂದು ಅನುಮಾನ ವ್ಯಕ್ತ ಪಡಿಸಿದ್ದಾರೆ. ಈ ಅನುಮಾನವೇ ಹಲವು ಅರ್ಥಗಳನ್ನು ಕೊಡುವಂತಿದೆ. ಅಂದರೆ, ರಿಷಬ್ ಮುಂದಿನ ದಿನಗಳಲ್ಲಿ ಹೋಗಬಹುದು ಎನ್ನುವ ಕುತೂಹಲವನ್ನೂ ಮೂಡಿಸಿದೆ.
ಅಂದಹಾಗೆ ರಿಷಬ್ ಮತ್ತು ರಕ್ಷಿತ್ ಪ್ರಾಣ ಸ್ನೇಹಿತರು. ಖಂಡಿತಾ ಈ ಕುರಿತು ಅವರು ಮಾತನಾಡಿಕೊಂಡಿರುತ್ತಾರೆ. ಈ ಕಾರಣದಿಂದಲೇ ರಕ್ಷಿತ್ ಈ ರೀತಿಯಾಗಿ ಕೇಳಿರಬಹುದಾ ಎನ್ನುವ ಅನುಮಾನವೂ ಮೂಡಿದೆ. ಆದರೆ, ರಕ್ಷಿತ್ ಕೇಳಿದ ಪ್ರಶ್ನೆಗೆ ರಿಷಬ್ ಯಾವ ರೀತಿಯಲ್ಲಿ ಉತ್ತರಿಸುತ್ತಾರೆ ಎನ್ನುವುದು ಕಾದು ನೋಡಬೇಕು. ಇದೆಲ್ಲವನ್ನೂ ಗಮನಿಸಿದರೆ ರಿಷಬ್ ಶೆಟ್ಟಿ ಸಂಪೂರ್ಣವಾಗಿ ಸಿನಿಮಾಗಳ ಮೇಲೆ ಮಾತ್ರವೇ ಗಮನ ಕೇಂದ್ರೀಕರಿಸಲು ನಿರ್ಧರಿಸುತ್ತಾರೋ ಅಥವಾ ರಕ್ಷಿತ್ ಅನುಮಾನ ವ್ಯಕ್ತಪಡಿಸಿದಂತೆ ರಾಜಕೀಯ ಎಂಟ್ರಿ ಕೊಡುತ್ತಾರೋ ಎಂದು ಕಾದು ನೋಡಬೇಕಿದೆ.
https://twitter.com/saraswathi1717/status/1642073851113902081?t=-d3x3JGe1tlPibj7xpdE-g&s=08
