Home » ಸಂಘ ದೇಶದಲ್ಲಿ ರಾಷ್ಟ್ರಭಕ್ತಿಯನ್ನು ಉತ್ತೇಜಿಸುವ ಕಾರ್ಯ ಮಾಡುತ್ತಿದೆ ,ಕುಮಾರಸ್ವಾಮಿಗೆ ಸಂಘದ ವಿಚಾರಧಾರೆ ಏನೆಂಬುದೇ ತಿಳಿದಿಲ್ಲ -ನಳಿನ್

ಸಂಘ ದೇಶದಲ್ಲಿ ರಾಷ್ಟ್ರಭಕ್ತಿಯನ್ನು ಉತ್ತೇಜಿಸುವ ಕಾರ್ಯ ಮಾಡುತ್ತಿದೆ ,ಕುಮಾರಸ್ವಾಮಿಗೆ ಸಂಘದ ವಿಚಾರಧಾರೆ ಏನೆಂಬುದೇ ತಿಳಿದಿಲ್ಲ -ನಳಿನ್

by Praveen Chennavara
0 comments

ಕಾಮಾಲೆ ರೋಗ ಇರುವವರಿಗೆ ಪ್ರಪಂಚದಲ್ಲಿ ಕಾಣುವುದೆಲ್ಲಾ ಹಳದಿಯೇ ಆಗಿರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.

ಅವರು ಬುಧವಾರ ಶಿವಮೊಗ್ಗದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಸಂಘದ ವಿಚಾರಧಾರೆ ಏನು ಎಂಬುದೇ ತಿಳಿದಿಲ್ಲ. ಮೊದಲು ಸಂಘದ ಶಾಖೆಗೆ ಭೇಟಿ ನೀಡಿ ಸಂಘದ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಸಂಘದ ಶಿಕ್ಷಣ ಪಡೆದರೆ ಅವರಿಗೂ ಒಳ್ಳೆಯದಾಗುತ್ತದೆ ಎಂದರು.

ಸಂಘ ಯಾವತ್ತಿಗೂ ಈ ದೇಶದಲ್ಲಿ ರಾಷ್ಟ್ರಭಕ್ತಿಯನ್ನು ಉತ್ತೇಜಿಸುವ ಕಾರ್ಯ ಮಾಡಿಕೊಂಡು ಬರುತ್ತಿದೆ. ಪ್ರತಿಯೊಬ್ಬ ವ್ಯಕ್ತಿಯೂ ರಾಷ್ಟ್ರ ಭಕ್ತನನ್ನಾಗಿ ಮಾಡಬೇಕೆಂದು ಕಾರ್ಯ ನಿರ್ವಹಿಸುತ್ತಿದೆ. ಅದೇ ನಿಟ್ಟಿನಲ್ಲಿ ಶಿಕ್ಷಣ ನೀಡುತ್ತಿದೆ. ಸಂಘದ ಶಾಖೆಯಲ್ಲಿ ಶಿಕ್ಷಣ ಪಡೆದವರು ಈ ದೇಶದ ಯಾವುದೇ ಹುದ್ದೆಯಲ್ಲಿ ಇರಬಾರದು ಎಂದು ಎಲ್ಲಿಯಾದರೂ ಇದೆಯಾ? ಈ ದೇಶದ ರಾಷ್ಟ್ರಪತಿ, ಪ್ರಧಾನಿ ಕೂಡಾ ಸಂಘದ ಸ್ವಯಂ ಸೇವಕರು. ಸಂಘದ ಶಾಖೆಯಲ್ಲಿ ಸಂಸ್ಕಾರ ಕೊಡುವ ಕೆಲಸ ಮಾಡಲಾಗುತ್ತದೆ ಎಂದರು.

You may also like

Leave a Comment