Home » S Angara : ರಾಜಕಾರಣಕ್ಕೆ ನಿವೃತಿ, ಪ್ರಚಾರ ಕಾರ್ಯದಿಂದ ದೂರ ಹೇಳಿಕೆ ಹಿಂಪಡೆದ ಎಸ್.ಅಂಗಾರ

S Angara : ರಾಜಕಾರಣಕ್ಕೆ ನಿವೃತಿ, ಪ್ರಚಾರ ಕಾರ್ಯದಿಂದ ದೂರ ಹೇಳಿಕೆ ಹಿಂಪಡೆದ ಎಸ್.ಅಂಗಾರ

by Praveen Chennavara
0 comments
S Angara

S Angara : ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧೆ ಮಾಡಲು ಅವಕಾಶ ವಂಚಿತರಾದ ಸಚಿವ ಅಂಗಾರರು (S Angara) ಮಾಧ್ಯಮಗಳಿಗೆ ಹೇಳಿಕೆ ನೀಡಿ ನಾನು ಸಕ್ರೀಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿ, ಚುನಾವಣಾ ಪ್ರಚಾರ ಕಾರ್ಯದ ಹಿಂದೆ ಇನ್ನೂ ಇಲ್ಲ ಎಂದಿದ್ದರು.

 

ಈ ಬಗ್ಗೆ ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಚಿವ ಅಂಗಾರರು ತನ್ನ ಹೇಳಿಕೆಯನ್ನು ಹಿಂಪಡೆದರು. ಸಕ್ರೀಯ ರಾಜಕಾರಣಕ್ಕೆ ನಿವೃತ್ತಿ ಹೇಳಿಕೆ ನೋವಿನಿಂದ ಹೇಳಿದ್ದೇನೆ ಎಂದರು. ನಾನು ಮೊದಲಿನಂತೆ ಸಕ್ರೀಯವಾಗಿದ್ದು ಭಾಗೀರಥಿ ಮುರುಳ್ಯ ಅವರ ಗೆಲುವೊಂದೇ ನಮ್ಮ ಮುಂದಿನ ನಡೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಚಾರ ಸಮಿತಿ ಮುಖ್ಯಸ್ಥ ವೆಂಕಟ್ ದಂಬೆಕೋಡಿ ಉಪಸ್ಥಿತರಿದ್ದರು.

You may also like

Leave a Comment