Satyajit Suratkal: ರಾಜ್ಯ ವಿಧಾನಸಭಾ ಚುನಾವಣೆಯಯಲ್ಲಿ ಬೆಳ್ತಂಗಡಿ ವಿಧಾನಸಭಾ ಶಾಸಕರಾಗಿ ಎರಡನೇ ಬಾರಿಗೆ ಆಯ್ಕೆಯಾದ ಹರೀಶ್ ಪೂಂಜಾ ತಮ್ಮ ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ಬಹಿರಂಗವಾಗಿ ನೀಡಿದ ಹೇಳಿಕೆ ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಹಿರಿಯ ಹಿಂದೂ ನಾಯಕರ ಹಿಂದುತ್ವ ಪ್ರಶ್ನಿಸಿದ ಶಾಸಕರಿಗೆ ಮಾತಿನ ಚಾಟಿ ಬೀಸುವ ಮೂಲಕ ಹಲವಾರು ವಿಚಾರಗಳು ಎಳೆ ಎಳೆಯಾಗಿ ಹೊರಬರುತ್ತಿದೆ.
ತಮ್ಮ ಅಭಿನಂದನಾ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜಾ ಜಿಲ್ಲೆಯ ಹಿರಿಯ ಹಿಂದೂ ಸಂಘಟನಾ ನಾಯಕರಾದ ಪ್ರವೀಣ್ ವಾಲ್ಕೆ, ಸತ್ಯಜಿತ್ ಸುರತ್ಕಲ್ ರನ್ನು ಉದ್ದೇಶಿಸಿ ಮಾತನಾಡಿದ್ದು, ಹಿಂದುತ್ವದ ಪರವಾಗಿರುವ ಸಹೋದರನ ವಿರುದ್ಧ ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಪರ ಸತ್ಯಜಿತ್ ಸುರತ್ಕಲ್ ಪ್ರಚಾರ ನಡೆಸಿದ್ದಾರೆ, 24 ಹಿಂದುಗಳನ್ನು ಕೊಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಪ್ರಚಾರ ನಡೆಸಿದ್ದಾರೆ ಎನ್ನುವ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ವಾಲ್ಕೆ ಸಹಿತ ಸತ್ಯಜಿತ್ (Satyajit Suratkal) ಮಾಧ್ಯಮದ ಮುಂದೆ ಪೂಂಜಾರನ್ನು ಪ್ರಶ್ನಿಸಿದ್ದಾರೆ.
ಇಂದು ಸಂಜೆ ಸುರತ್ಕಲ್ ಅವರು ಪತ್ರಿಕಾಗೋಷ್ಠಿ ಕರೆದು, ‘ ನಿಮ್ಮದು ಯಾವ ರೀತಿಯ ಹಿಂದುತ್ವ ಸತ್ಯಣ್ಣ ಎಂದು ನನ್ನನ್ನು ಹರೀಶ್ ಪೂಂಜಾ ಪ್ರಶ್ನಿಸಿದ್ದಾರೆ. ಈಗ ಅದಕ್ಕೆ ಉತ್ತರ ಕೊಡಬೇಕಾಗಿದೆ. ನೀವು ಮಂಗಳೂರಿನಲ್ಲಿ ಪೆಟ್ರೋಲ್ ಬಂಕ್ ಮಾರಾಟ ಮಾಡಿದ್ದು ಯಾರಿಗೆ ? ಮುಸಲ್ಮಾನರ ಜೊತೆ ಯಾವತ್ತೂ ವ್ಯಾಪಾರ ಮಾಡೋದಿಲ್ಲ ಅನ್ನುವ ನೀವು ಅದನ್ನು ಮುಸ್ಲಿಂ ಒಬ್ಬರಿಗೆ ಕೊಟ್ಟು ಮಾರಾಟ ಮಾಡಿ ಬಂದಿರಿ. ವೇಣುರಿನಲ್ಲಿ ಜಾಯಿಂಟ್ ವಿಲ್ ಅನ್ನು ಹಿಂದುಗಳ ವಿರೋಧಗಳ ನಡುವೆಯೂ ಮುಸ್ಲಿಮರಿಗೆ ನೀಡಿದಿರಿ. ನಿಮ್ಮದು ಯಾವ ರೀತಿಯ ಹಿಂದುತ್ವ ? ” ಎಂದು ಸತ್ಯಜಿತ್ ಸುರತ್ಕಲ್ ಹರೀಶ್ ಪೂಂಜಾರಿಗೆ ಪ್ರಶ್ನಿಸಿದ್ದಾರೆ.
ಮುಸಲ್ಮಾನರ ವೋಟ್ ಬೇಡ ಎಂದದ್ದು ನೀವೇ. ನಾನು ಯಾವುದೇ ಒಂದು ಸಮಾಜವನ್ನು ವಿರೋಧಿಸಿಲ್ಲ. ಹಿಂದೂಗಳ ಅಸ್ತಿತ್ವಕ್ಕೆ ವಿರೋಧ ಉಂಟಾದಾಗ ಮಾತ್ರ ನಾನು ಹಿಂದೂ ಸಮಾಜಕ್ಕಾಗಿ ನಿಂತಿದ್ದೇನೆ. ಹಿಂದೂ ಸಮಾಜದ ಸುಧಾರಕ ಎಂದುಕೊಂಡು ನಿಮ್ಮತರ ಹಿಂದಿನಿಂದ ಉಳಿದವರ ಹೊಲಕ್ಕೆ ನಾನು ಹೋಗಿಲ್ಲ ಎಂದು ಸತ್ಯ ಸುರತ್ಕಲ್ ಅವರು ಹರೀಶ್ ಪೂಂಜಾಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
“ಬೆಳ್ತಂಗಡಿ ಕ್ಷೇತ್ರದ ಕೊರಗಜ್ಜನ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ವೇಳೆ ಅಲ್ಲಿ ತೆಗೆದ ಫೋಟೋವನ್ನು ಫೇಕ್ ಅಕೌಂಟ್ ಮಾಡಿ ಹರಿಯಬಿಡಲಾಗಿದೆ. ಇದನ್ನು ಶಾಸಕರು ನಂಬಿ ನನ್ನ ಹಿಂದುತ್ವವನ್ನು ಪ್ರಶ್ನಿಸಿದ್ದಾರೆ ಎಂದರು. ಮೊದಲ ಅವಧಿಯಲ್ಲಿ ಶಾಸಕನಾಗುವ ಮುನ್ನ ಟಿಕೆಟ್ ಸಿಗುತ್ತಾ ಸತ್ಯಣ್ಣ ಅಂತೆಲ್ಲಾ ಪ್ರತೀ ದಿನವೂ ಕರೆ ಮಾಡುತ್ತಿದ್ದ ಪೂಂಜಾ, ಟಿಕೆಟ್ ಪಟ್ಟಿಯಲ್ಲಿ ಹೆಸರು ಬರುತ್ತಿದ್ದಂತೆ ಅಣ್ಣನನ್ನು ಮರೆತಿದ್ದಾರೆ. ನಾಮಪತ್ರ ಸಲ್ಲಿಕೆಗೂ ಬೇರೆ ವ್ಯಕ್ತಿಗಳೊಂದಿಗೆ ಹೇಳಿ ಕಳಿಸಿದ ಅವರು ಈಗ ಅಣ್ಣಾ ಎಂದು ಹೇಳುವುದು ಸಮಂಜಸವಲ್ಲ.”
“ಕಾಂಗ್ರೆಸ್ ಪರವಾಗಿ ನನಗೆ ಹಲವು ಬಾರಿ ಅವಕಾಶ ಬಂದಿದೆ. ಮುಕ್ತವಾಗಿ ನಾನು ಸ್ಪರ್ಧಿಸಬಹುದಿತ್ತು, ಆದರೆ ಹಿಂದುತ್ವದ ತತ್ವ ಸಿದ್ಧಾಂತ ಮೆಟ್ಟಿ ನಡೆಯುವುದಿಲ್ಲ ಎನ್ನುವ ಕಾರಣಕ್ಕೆ ಅಲ್ಲಿ ತೆರಳಲಿಲ್ಲ. ಜಿಲ್ಲೆಯ ಹಲವು ಕಡೆಗಳಿಂದ ಪ್ರಚಾರ ಭಾಷಣಕ್ಕೆ ಕರೆ ಬಂದಿದ್ದರೂ ನಾನು ತಿರಸ್ಕರಿಸಿದ್ದೇನೆ, ಇಂತಹ ಸಂದರ್ಭದಲ್ಲಿ ಹಿಂದುತ್ವಕ್ಕೆ ಅನ್ಯಾಯ ಮಾಡಿದ್ದೇನೆ, ನಿಮ್ಮ ತಮ್ಮ ಹಿಂದುತ್ವಕ್ಕೆ ಯಾವ ಅನ್ಯಾಯ ಮಾಡಿದ್ದಾನೆ, ಕಾಂಗ್ರೆಸ್ ಪರ ಪ್ರಚಾರ ಮಾಡುವ ನಿಮ್ಮದು ಯಾವ ಹಿಂದುತ್ವ “ಎಂದೆಲ್ಲಾ ಪ್ರಶ್ನಿಸಿರುವುದು ಬೇಸರ ತಂದಿದೆ ಎಂದರು.
“ತೋಟತ್ತಾಡಿಯಲ್ಲಿ ಜಾಗದ ವಿಚಾರದ ಜಗಳದಲ್ಲಿ ತಹಶೀಲ್ದಾರ್ ಗೆ ಹೇಳುವ ಮೂಲಕ ಚರ್ಚ್ ನವರಿಗೇ ಜಾಗವನ್ನು ಮಾಡಿಕೊಡ್ಲಿಲ್ವಾ, ಕಟ್ಟಡ ಶಂಕುಸ್ಥಾಪನೆಗೆ ಇವರೇ ಹೋಗಿಲ್ವಾ, ಚುನಾವಣೆಯ ಸಂದರ್ಭದಲ್ಲಿ ನಾವೂರದಲ್ಲಿ ಕ್ರಿಸ್ಟಿಯನ್ ವ್ಯಕ್ತಿಯೊಬ್ಬನ ಮನೆಯಲ್ಲಿ ಸಭೆ ಮಾಡಿದ್ರಲ್ವಾ ಇದೇನಾ ಹಿಂದುತ್ವ. ಹಿಂದೂಗಳ ಓಟು ಮಾತ್ರ ಸಾಕು ಮುಸಲ್ಮಾನರ ಓಟು ಬೇಡ ಎಂದ ವ್ಯಕ್ತಿಯೇ ಅಲ್ಪಸಂಖ್ಯಾತ ಘಟಕ ತೆರೆಯಲಿಲ್ವಾ, ಮಸೀದಿಗಳ ಬಳಿ ಬೀದಿ ದೀಪ ಹಾಕಿಸ್ಲಿಲ್ವಾ, ಎಲ್ಲಾ ಬಿಡಿ ಚುನಾವಣೆಯ ಸಂದರ್ಭದಲ್ಲಿ ಅಜ್ಮಿರ್ ಗೆ ಹೋಗುವ ಮುಸಲ್ಮಾನರಿಗೆ ಉಚಿತ ಪ್ರಯಾಣ ವ್ಯವಸ್ಥೆ ಮಾಡಿಕೊಡ್ತೇವೆ ಎನ್ನುವ ಘೋಷಣೆ ಹಿದುತ್ವವಾ?” ಎಂದೆಲ್ಲಾ ಪೂಂಜಾರ ಹಲವು ವಿಚಾರಗಳನ್ನು ಸತ್ಯಜಿತ್ ಸುರತ್ಕಲ್ ಎಳೆಎಳೆಯಾಗಿ ಪ್ರಶ್ನಿಸಿದ್ದಾರೆ.
ಇದಕ್ಕೂ ಮೊದಲು, ಇಂದು ನಾಯಕ ಪ್ರವೀಣ್ ವಾಲ್ಕೆಯನ್ನು ಟೀಕಿಸಿದ ಹರೀಶ್ ಪೂಂಜಾಗೆ ಪ್ರವೀಣ್ ವಾಲ್ಕೆ ತಿರುಗೇಟು ನೀಡಿದ್ದರು. ನಿನ್ನೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ವಾಲ್ಕೆ, “ಆತ ನನ್ನೆದುರು ಬಚ್ಚಾ. ಹಿಂದೂ ಸಹೋದರಿಗೆ ಮೊಟ್ಟೆ ಒಡೆದ ಹಿಂದುತ್ವ ನಮ್ಮದಲ್ಲ, ಈ ವರೆಗೆ ಜಿಲ್ಲೆಯ ಯಾವೊಬ್ಬ ಪೊಲೀಸ್ ಅಧಿಕಾರಿಯೂ ನನ್ನ ಕೊರಳ ಪಟ್ಟಿ ಹಿಡಿದಿಲ್ಲ,ಯಾವೋ ಆತನ ಚೇಲಾಗಳು ಹೇಳಿದ್ದಾರೆ ಎನ್ನುವ ಮಾತ್ರಕ್ಕೆ ನನ್ನ ಒಂದು ಮಾತು ಕೇಳದೆ ಶಾಸಕನಾಗಿ ಅಧಿಕಾರ ವಹಿಸಿಕೊಂಡು ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ಈ ರೀತಿ ನಮ್ಮ ಹಿಂದುತ್ವವನ್ನು ಪ್ರಶ್ನಿಸುವುದು ಎಷ್ಟು ಸರಿ” ಎಂದೆಲ್ಲಾ ಆಕ್ರೋಶದಲ್ಲಿ ಪ್ರಶ್ನಿಸಿದ್ದರು.ಇದರ ಬೆನ್ನಲ್ಲೇ ಹಿರಿಯ ಸಂಘಟನ ನಾಯಕ ಸತ್ಯಜಿತ್ ಸುರತ್ಕಲ್ ಕೂಡಾ ಮಾಧ್ಯಮದ ಮುಂದೆ ಬಂದಿದ್ದು ಒಂದೊಂದೇ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.
ಈ ಮೂಲಕ ಹಿಂದೂ ಬಿಜೆಪಿ ಕದನ ಕುತೂಹಲದ ಘಟ್ಟಕ್ಕೆ ಎಂಟ್ರಿ ಆಗುತ್ತಿದೆ. ಅತ್ತ ಪುತ್ತೂರಿನಲ್ಲಿ ಅರುಣ್ ಕುಮಾರ್ ಪುತ್ತಿಲ್ಲ ಅವರು ಗೊತ್ತಿಲ್ಲ ಪರಿವಾರ ಸ್ಥಾಪಿಸಿಕೊಂಡು ಬಿಜೆಪಿಗೆ ಶೆಡ್ಡು ಹೊಡೆಯುತ್ತಿದ್ದಾರೆ. ಜೊತೆಗೆ ಸಂಘ ಪರಿವಾರದ ಇತರ ಹಿಂದೂ ಸಂಘಟನೆಗಳ ಜೊತೆ ಸಂಘರ್ಷ ಜಾರಿಯಲ್ಲಿದೆ. ಇತ್ತ ಹಳೆಯ ಇಂದು ನಾಯಕರುಗಳು ಮತ್ತು ಹೊಸ ತಲೆಮಾರಿನ ಬಿಜೆಪಿ ನಾಯಕರುಗಳ ಜೊತೆ ವಾಗ್ಯದ್ದ ಶುರುವಾಗಿದೆ. ಎಲ್ಲವನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಇದನ್ನು ಓದಿ: Credit card: ಉದ್ಯೋಗವಿಲ್ಲವಿದ್ರೂ ಮಹಿಳೆಯರು ಕ್ರೆಡಿಟ್ ಕಾರ್ಡ್ ಪಡೆಯಬಹುದೇ? ಇಲ್ಲಿದೆ ಮಹತ್ತರ ಮಾಹಿತಿ
