Home » ಶಾಲಾ ಸಮವಸ್ತ್ರ ಧರಿಸುವುದು ಕಡ್ಡಾಯ, ಇದರಲ್ಲಿ ಯಾವುದೇ ವಿನಾಯಿತಿ ಇಲ್ಲ! ಬಿ ಸಿ ನಾಗೇಶ್ ಸ್ಪಷ್ಟನೆ

ಶಾಲಾ ಸಮವಸ್ತ್ರ ಧರಿಸುವುದು ಕಡ್ಡಾಯ, ಇದರಲ್ಲಿ ಯಾವುದೇ ವಿನಾಯಿತಿ ಇಲ್ಲ! ಬಿ ಸಿ ನಾಗೇಶ್ ಸ್ಪಷ್ಟನೆ

0 comments

ಶಾಲೆಗಳಲ್ಲಿ ಸಮವಸ್ತ್ರ ಧರಿಸುವುದು ಕಡ್ಡಾಯ. ಇದರಲ್ಲಿ ಯಾವುದೇ ವಿನಾಯಿತಿ ಇಲ್ಲ. ಶಾಲಾ ಸಮಿತಿಗಳು ಎಂಥಾ ಸಮವಸ್ತ್ರ ಧರಿಸಬೇಕು ಎಂದು‌ ನಿರ್ಧಾರ ಮಾಡುತ್ತದೆ. ವಿದ್ಯಾರ್ಥಿಗಳು ಆಯಾ ಶಾಲೆಗೆ ಸಂಬಂಧಿಸಿದ ಸಮವಸ್ತ್ರ ಧರಿಸಬೇಕು ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸ್ಪಷ್ಟ ಪಡಿಸಿದ್ದಾರೆ.

ಉಡುಪಿಯ ಶಾಲೆಯೊಂದರಲ್ಲಿ ಆರು ಮಕ್ಕಳು ಪ್ರತಿಭಟನೆ ನಡೆಸಿದ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಕರಾವಳಿಯ ಕೆಲ ಸಂಘಟನೆಗಳು ಇವರನ್ನು ಪ್ರಚೋದಿಸಿದೆ ಎಂದು ಹೇಳಿದ್ದಾರೆ.

ಬೇರೆ ಮಕ್ಕಳೆಲ್ಲ ಶಾಲೆಗೆ ಬಂದಿದ್ದಾರೆ. ಇವರ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ ಎಂದು ಹೇಳಿದ್ದಾರೆ.

You may also like

Leave a Comment