Home » ಶಿಕಾರಿಪುರ ಸಂಪೂರ್ಣ ಸ್ತಬ್ಧ | ಯಡಿಯೂರಪ್ಪ ಪದಚ್ಯುತಿಗೆ ಅಂಗಡಿ-ಮುಂಗಟ್ಟು ಬಾಗಿಲು ಎಳೆದು ಪಕ್ಷಾತೀತ ಪ್ರತಿಭಟನೆ !

ಶಿಕಾರಿಪುರ ಸಂಪೂರ್ಣ ಸ್ತಬ್ಧ | ಯಡಿಯೂರಪ್ಪ ಪದಚ್ಯುತಿಗೆ ಅಂಗಡಿ-ಮುಂಗಟ್ಟು ಬಾಗಿಲು ಎಳೆದು ಪಕ್ಷಾತೀತ ಪ್ರತಿಭಟನೆ !

0 comments

ಶಿವಮೊಗ್ಗ: ಶಿಕಾರಿಪುರ ಸಂಪೂರ್ಣ ಸ್ತಬ್ಧ. ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಘೋಷಿಸಿದ ಬೆನ್ನಿಗೆ ಶಿಕಾರಿಪುರ ಸಂಪೂರ್ಣ ಮೌನವಾಗಿದೆ. ಪಟ್ಟಣದಾದ್ಯಂತ ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗಿದೆ. ಎಲ್ಲಾ ಅಂಗಡಿಗಳು ತಮ್ಮ ಶೆಟರ್ ಕೆಳಕ್ಕೆ ಎಳೆದುಕೊಂಡು ಬಾಗಿಲು ಹಾಕಿ ಕೂತಿವೆ.

ಶಿಕಾರಿಪುರ ಪಟ್ಟಣದ ಬಸ್ ನಿಲ್ದಾಣ ಸುತ್ತಮುತ್ತ ಪೆಟ್ರೋಲ್ ಬಂಕ್ ರಸ್ತೆ, ಶಿಶುವಿಹಾರ ರಸ್ತೆ, ಎಸ್.ಹೆಚ್.ರಸ್ತೆ, ತಾಲೂಕು ಆಫೀಸ್ ರಸ್ತೆ, ಮಾಸೂರು ರಸ್ತೆಯಲ್ಲಿ ಅಂಗಡಿಗಳನ್ನು ಬಂದ್ ಮಾಡಲಾಗಿದೆ.

ರಾಜೀನಾಮೆ ಘೋಷಣೆ ಮಾಡುತ್ತಿದ್ದಂತೆ ಪಟ್ಟಣದಲ್ಲಿ ವರ್ತಕರು ತಮ್ಮ ತಮ್ಮಲ್ಲೇ ನಿರ್ಧಾರ ಮಾಡಿ, ಅಂಗಡಿಗಳನ್ನು ಬಂದ್ ಮಾಡಿದರು.

ಸ್ವಲ್ಪ ಸಮಯ ಮೌನವಾಗಿದ್ದ ಪೇಟೆಯಲ್ಲಿ ಹಠಾತ್ ಆಗಿ ಪ್ರತಿಭಟನೆಗಳು ಆರಂಭವಾಗಿವೆ. ಮತ್ತೊಂದೆಡೆ ಬಿಜೆಪಿ ಕಾರ್ಯಕರ್ತರು ಶಿಕಾರಿಪುರ ಪಟ್ಟಣದಲ್ಲಿ ರಸ್ತೆಗಿಳಿದು ಘೋಷಣೆ ಕೂಗಿದ್ದಾರೆ. ಯಡಿಯೂರಪ್ಪ ಪರವಾಗಿ ಘೋಷಣೆಗಳನ್ನು ಕೂಗಿ, ಜೈಕಾರ ಹಾಕುತ್ತಿದ್ದಾರೆ. ಮೆರವಣಿಗೆ ಶುರುವಾಗಿದೆ. ಹೆಚ್ಚುಕಮ್ಮಿ ಪಕ್ಷಾತೀತವಾಗಿ ಯಡಿಯೂರಪ್ಪನವರನ್ನು ಕೆಳಗಿಳಿಸಿದ ಕೇಂದ್ರ ಬಿಜೆಪಿಯ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿ ಪ್ರತಿಭಟನೆ ನಡೆಯುತ್ತಿದೆ.

You may also like

Leave a Comment