Home » Shivamogga: ಈಶ್ವರಪ್ಪ ನಾಮಪತ್ರ ಸಲ್ಲಿಕೆಗೆ ಸಾಥ್ ನೀಡಲು ಆಗಮಿಸಿದ ಜೂ.ನರೇಂದ್ರ ಮೋದಿ !!

Shivamogga: ಈಶ್ವರಪ್ಪ ನಾಮಪತ್ರ ಸಲ್ಲಿಕೆಗೆ ಸಾಥ್ ನೀಡಲು ಆಗಮಿಸಿದ ಜೂ.ನರೇಂದ್ರ ಮೋದಿ !!

by ಹೊಸಕನ್ನಡ
0 comments

 

Shivamogga: ಮಗನಿಗೆ ಲೋಕಸಭಾ ಟಿಕೆಟ್ ಸಿಗದ ವಿಚಾರಕ್ಕೆ ಬಂಡಾಯವೆದ್ದು ಶಿವಮೊಗ್ಗದಿಂದ(Shivamogga) ಪಕ್ಷೇತರವಾಗಿ ಸ್ಪರ್ಧಿಸಲು ಮುಂದಾಗಿದ್ದು ಇಂದು ಶಿವಮೊಗ್ಗ ನಗರದಲ್ಲಿ ಅಪಾರ ಅಭಿಮಾನಿಗಳನ್ನು ಕೂಡಿಕೊಂಡು ಭರ್ಜರಿ ಮೆರವಣಿಗೆಯಲ್ಲಿ ನಾಮಪತ್ರ ಸಲ್ವಿಸಿದ್ದಾರೆ. ಈ ವೇಳೆ ನರೇಂದ್ರ ಮೋದಿ(Narendra Modi) ಅವರ ನಾಮಪತ್ರ ಸಲ್ಲಿಕೆಗೆ ಭರ್ಜರಿ ಪ್ರಚಾರ ನೀಡಿದ್ದಾರೆ.

ಅರೆ ಏನಪ್ಪಾ ಇದು ವಿಚಿತ್ರ ಎಂದು ಭಾವಿಸ್ತಿದ್ದೀರಾ. ಬಿಜೆಪಿ(BJP) ವಿರುದ್ಧವೇ ಸಮರ ಸಾರಿರುವ ಈಶ್ವರಪ್ಪನವರ(K S Eshwarappa) ಸ್ಪರ್ಧೆಗೆ ಪ್ರಧಾನಿ ನರೇಂದ್ರ ಮೋದಿ, ಅದು ಕೂಡ ಬಿಜೆಪಿಯ ಕಟ್ಟಾಳು ನರೇಂದ್ರ ಮೋದಿಯವರು ಯಾಕೆ ಬೆಂಬಲ ನೀಡುತ್ತಾರೆ, ಯಾಕೆ ಬಂದು ಪ್ರಚಾರ ಮಾಡುತ್ತಾರೆ ಎಂದು ಯೋಚಿಸುತ್ತಿದ್ದೀರಾ? ಹಾಗಿದ್ರೆ ನಾವು ಹೇಳೋದನ್ನು ಕೇಳಿ ಸ್ವಲ್ಪ ಕೂಲ್ ಆಗಿ, ಯಾಕೆಂದರೆ ಈ ನಾಮಪತ್ರ ಸಲ್ಲಿಕೆಯ ವೇಳೆ ಪ್ರಚಾರ ನಡೆಸಿದ್ದು ಸಾಕ್ಷಾತ್ ನರೇಂದ್ರ ಮೋದಿಯವರೇ ಅಲ್ಲ, ಬದಲಿಗೆ ಅವರಂತೆ ಕಾಣುವ ಜೂನಿಯರ್ ನರೇಂದ್ರ ಮೋದಿ ಅಲಿಯಾಸ್ ಸದಾನಂದ ನಾಯ್ಕ(Sadananda Nayka) ಅವರು.

ಹೌದು, ಈಶ್ವರಪ್ಪ(K.S. Eshwarappa) ಅವರು ಇಂದು(ಏ.12) ಬೃಹತ್​ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಿದ್ದು ಸಾವಿರಾರು ಜನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮೋದಿ ರೀತಿಯಲ್ಲಿ ಕಾಣುವ ಸದಾನಂದ್​ ನಾಯ್ಕ ಅವರು ಕೂಡ ಮೆರವಣಿಗೆಯಲ್ಲಿ ಭಾಗಿಯಾಗಿ ಎಲ್ಲರ ಗಮನ ಸೆಳೆದರು. ಬಳಿಕ ಮಾತನಾಡಿದ ಅವರು ‘ಈಶ್ವರಪ್ಪ ನಾಮಪತ್ರ ಮೆರವಣಿಗೆಯಲ್ಲಿ ನಾನು ಭಾಗಿ ಆಗಿದ್ದೆ. ಇದರಿಂದ ನನಗೆ ತುಂಬಾ ಖುಷಿ ಆಯ್ತು. ಮೋದಿ ಪ್ರೀತಿ ಮಾಡುವ ಜನರು ಎಲ್ಲರೂ ಒಂದಾಗಬೇಕು. ಮೆರವಣಿಗೆಯಲ್ಲಿ ನನ್ನ ನೋಡಿದ ಜನರು ತುಂಬಾ ಸಂತಸ ಪಟ್ಟಿದ್ದಾರೆ’ ಎಂದರು.

You may also like

Leave a Comment