Home » Shivsena Uddav Takre : ವೀರ ಸಾವರ್ಕರ್ ಬಗ್ಗೆ ಕೀಳಾಗಿ ಮಾತನಾಡಿದರೆ ಹುಷಾರ್ – ಮಿತ್ರ ಪಕ್ಷ ಶಿವಸೇನೆಯಿಂದ ರಾಹುಲ್ ಗಾಂಧಿಗೆ ಎಚ್ಚರಿಕೆ, ಮೈತ್ರಿ ಕಡಿದುಕೊಳ್ಳುವ ಬೆದರಿಕೆ !

Shivsena Uddav Takre : ವೀರ ಸಾವರ್ಕರ್ ಬಗ್ಗೆ ಕೀಳಾಗಿ ಮಾತನಾಡಿದರೆ ಹುಷಾರ್ – ಮಿತ್ರ ಪಕ್ಷ ಶಿವಸೇನೆಯಿಂದ ರಾಹುಲ್ ಗಾಂಧಿಗೆ ಎಚ್ಚರಿಕೆ, ಮೈತ್ರಿ ಕಡಿದುಕೊಳ್ಳುವ ಬೆದರಿಕೆ !

0 comments
Shivsena Uddav Takre

Shivsena Uddav Takre  : ಪಾಪ, ರಾಹುಲ್ ಗಾಂಧಿಯವರಿಗೆ ಏಟಿನ ಮೇಲೆ ಏಟು ಬೀಳುತ್ತಿದೆ. ಇದೀಗ ಅವರದೇ ಗುಂಪಿನ ನಾಯಕನಿಂದ ರಾಹುಲ್ ಗಾಂಧಿಗೆ ಗಂಭೀರ ಎಚ್ಚರಿಕೆ ಬಂದಿದೆ. ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ಸಾವರ್ಕರ್ ಅವರ ಬಗ್ಗೆ ಕೀಳಾಗಿ ಮಾತನಾಡಿದರೆ ಮೈತ್ರಿ ಕಡಿದುಕೊಳ್ಳಬೇಕಾಗುತ್ತದೆ ಎಂದು ಉದ್ಧವ್ ಠಾಕ್ರೆ ಅವರು ರಾಹುಲ್‍ಗಾಂಧಿ ಅವರಿಗೆ ದೊಡ್ಡ ಎಚ್ಚರಿಕೆ ನೀಡಿದ್ದಾರೆ.

ಮೊನ್ನೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿದಾಗ, ” ನಾನು ಕ್ಷಮೆ ಕೇಳುವುದಿಲ್ಲ. ಕ್ಷಮೆ ಕೇಳಲು ನಾನು ಸಾವರ್ಕರ್ ಅಲ್ಲ, ನಾನು ಗಾಂಧಿ ” ಎಂದು ಗುಡುಗಿದ್ದರು ರಾಹುಲ್‍ಗಾಂಧಿ. ರಾಹುಲ್ ಗಾಂಧಿ ಅವರ ಈ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಶಿವಸೇನೆ ನಾಯಕ ಹಾಗೂ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್‍ಠಾಕ್ರೆ ಅವರು, ‘ ಸಾವರ್ಕರ್ ಅವರನ್ನು ನಾವು ಆರಾಧ್ಯ ದೈವ ಎಂದು ಪರಿಗಣಿಸುತ್ತೇವೆ. ಅಂತಹ ಮಹಾನ್ ವ್ಯಕ್ತಿಯ ಬಗ್ಗೆ ಕೀಳಾಗಿ ಮಾತನಾಡುವುದನ್ನು ನಾವು ಸಹಿಸುವುದಿಲ್ಲ’ ಎಂದು ಎಚ್ಚರಿಸಿದ್ದಾರೆ. ತನ್ನದೇ ಪಾಳಯದಿಂದ ದೊಡ್ಡ ವಾರ್ನಿಂಗ್ ರಾಹುಲ್ ಗೆ ರವಾನೆ ಆಗಿದೆ.

” ರಾಹುಲ್ ಗಾಂಧಿಜೀ, ಒಂದು ವೇಳೆ ನೀವು ನಿಮ್ಮ ಧೋರಣೆಯನ್ನು ಬದಲಿಸಿಕೊಳ್ಳದಿದ್ದರೆ ಮಹಾ ಮೈತ್ರಿಕೂಟದಿಂದ ( Maha ghatabandhan) ನಿಂದ ನಾವು ಹೊರ ಬರಬೇಕಾಗುತ್ತದೆ ” ಎಂದು ಉದ್ಧವ್ (Shivsena Uddav Takre ) ಠಾಕ್ರೆ ಗುಡುಗಿದ್ದಾರೆ. ” ಸಾವರ್ಕರ್ ಅವರು 14 ವರ್ಷಗಳ ಕಾಲ ಅಂಡಮಾನ್ ಸೆಲ್ಯುಲಾರ್ ಜೈಲಿನಲ್ಲಿ ಊಹಿಸಲಾಗದ ಚಿತ್ರಹಿಂಸೆ ಅನುಭವಿಸಿದರು. ನಾವು ನೋವುಗಳನ್ನು ಮಾತ್ರ ಓದಬಲ್ಲೆವು. ಇದು ತ್ಯಾಗದ ಒಂದು ರೂಪವಾಗಿದೆ. ಸಾವರ್ಕರ್ ಅವರ ಅವಮಾನವನ್ನು ನಾವು ಸಹಿಸುವುದಿಲ್ಲ” ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.

ಮುಂದುವರಿದು ಹೇಳಿಕೆ ನೀಡಿದ ಉದ್ದಕ್ರಿಯವರು, “ವೀರ್ ಸಾವರ್ಕರ್ ನಮ್ಮ ದೇವರು, ಮತ್ತು ದೇವರಿಗೆ ನಾವು ಯಾವುದೇ ರೀತಿಯ ಅಗೌರವವನ್ನು ಸಹಿಸುವುದಿಲ್ಲ. ನಾವು ಹೋರಾಡಲು ಸಿದ್ಧರಿದ್ದೇವೆ, ಆದರೆ ನಮ್ಮ ದೇವರನ್ನು ಅವಮಾನಿಸುವುದನ್ನು ನಾವು ಸಹಿಸುವುದಿಲ್ಲ” ಎಂದಿದ್ದಾರೆ. ಉದ್ದವ್ ತಾಕ್ರೆಯ ಈ ಹೇಳಿಕೆಯನ್ನು ಕಾಂಗ್ರೆಸ್ ಮತ್ತು ಮೈತ್ರಿ ಪಡೆ ಯಾವ ರೀತಿ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಉದ್ಧವ್ ಠಾಕ್ರೆಯವರ ಸೇನಾ ಬಣವು ಮಹಾ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಎನ್‍ಸಿಪಿಯ ಮಿತ್ರ ಪಕ್ಷವಾಗಿದೆ, ರಾಹುಲ್ ಗಾಂಧಿಯವರು ಪ್ರಚೋದನೆಗೆ ಒಳಗಾಗಬೇಡಿ ಮತ್ತು ಭಾರತದ ಪ್ರಜಾಪ್ರಭುತ್ವವನ್ನು ಉಳಿಸಲು ಒಟ್ಟಾಗಿ ಬನ್ನಿ ಎಂದು ಉದ್ದವ್ ಅವರು ಒತ್ತಾಯಿಸಿದರು. ಉದ್ಧವ್ ಬಣ, ಕಾಂಗ್ರೆಸ್ ಮತ್ತು ಎನ್‍ಸಿಪಿಯ ಮೈತ್ರಿಗಳು ಒಟ್ಟಾರೆ ಪ್ರಜಾಪ್ರಭುತ್ವವನ್ನು ರಕ್ಷಿಸಲು ಮಾಡಲ್ಪಟ್ಟಿದೆ. ಮತ್ತು ನಾವೀಗ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ. ಈಗ ರಾಹುಲ್ ಗಾಂಧಿಯನ್ನು ಉದ್ದೇಶಪೂರ್ವಕವಾಗಿ ಪ್ರಚೋದಿಸಲಾಗುತ್ತಿದೆ. ಈಗ ನಾವು ಇದರಲ್ಲಿ ಸಮಯ ವ್ಯರ್ಥ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಅವರು ತಿಳಿಸಿದ್ದಾರೆ.

ಮತ್ತೊಂದು ಕಡೆ ಅವರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ರಾಹುಲ್ ಗಾಂಧಿಯವರ ಟೀಕೆಗೆ ಸಂಬಂಧಿಸಿದಂತೆ ಬಿಜೆಪಿ ವಾದವನ್ನು ತೀವ್ರವಾಗಿ ಟೀಕಿಸಿದ ಉದ್ಧವ್ ಠಾಕ್ರೆ, ಪ್ರಧಾನಿ ನರೇಂದ್ರ ಮೋದಿ ಎಂದರೆ ಭಾರತವಲ್ಲ ಎಂದು ಹೇಳಿದ್ದಾರೆ. ಮೋದಿ ಎಂದರೆ ಭಾರತವಲ್ಲ, ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಇದಕ್ಕಾಗಿ ಪ್ರಾಣ ತೆತ್ತಿದ್ದಾರೆ. ಮೋದಿಯನ್ನು ಪ್ರಶ್ನಿಸುವುದು ಭಾರತವನ್ನು ಅವಮಾನಿಸಿದಂತೆ ಆಗಲ್ಲ ಎಂದು ಅವರು ಹೇಳಿದ್ದಾರೆ.

You may also like

Leave a Comment